Home> Career
Advertisement

Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, 55 ಸಾವಿರ ಸಂಬಳ!

Post Office Recruitment 2024: ಅಭ್ಯರ್ಥಿಗಳು JDS (ಗ್ರಾಮಿನ್ ಡಾಕ್ ಸೇವಕ್), ಪೋಸ್ಟ್‌ಮ್ಯಾನ್, MTS, ಪೋಸ್ಟಲ್ ಅಸಿಸ್ಟೆಂಟ್, ಮೇಲ್‌ಗಾರ್ಡ್, ಸಾರ್ಟಿಂಗ್ ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ​

Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, 55 ಸಾವಿರ ಸಂಬಳ!

Post Office Recruitment 2024: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ.‌ SSLC ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶವಿದೆ. ಭಾರತೀಯ ಅಂಚೆ ಇಲಾಖೆ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ದೇಶದಾದ್ಯಂತ 98,083ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಶೀಘ್ರವೇ ಈ ಬಗ್ಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆಯ ಆದೇಶ ಹೊರಬೀಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: Starbucks : ಕೊಯಮತ್ತೂರಿನಲ್ಲಿ ಮೊದಲ ಸ್ಟಾರ್ ಬಕ್ಸ್ , ಇದು ಭಾರತದಲ್ಲಿ 400ನೇ ಮಳಿಗೆ

ಹುದ್ದೆಗಳ ವಿವರ: ಅಭ್ಯರ್ಥಿಗಳು JDS (ಗ್ರಾಮಿನ್ ಡಾಕ್ ಸೇವಕ್), ಪೋಸ್ಟ್‌ಮ್ಯಾನ್, ಎಂಟಿಎಸ್, ಪೋಸ್ಟಲ್ ಅಸಿಸ್ಟೆಂಟ್, ಮೇಲ್‌ಗಾರ್ಡ್, ಸಾರ್ಟಿಂಗ್ ಅಸಿಸ್ಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿಯೂ 5,731 ಹುದ್ದೆಗಳು ಖಾಲಿ ಇದ್ದು, 1,754 MTS, 3,887 ಪೋಸ್ಟ್‌ಮ್ಯಾನ್ ಮತ್ತು 90 ಮೇಲ್‌ಗಾರ್ಡ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಅರ್ಜಿ ಶುಲ್ಕ: ಸಾಮಾನ್ಯ, ಹಿಂದುಳಿದ ವರ್ಗ ಹಾಗೂ EWS ವರ್ಗಗಳ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳೆಯರು, SC/ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.

ವಯೋಮಿತಿ: 18ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಒಳಪಟ್ಟು ವಯೋಮಿತಿ ಸಡಿಲಿಕೆ ಲಭ್ಯವಿರುತ್ತದೆ. OBCಗೆ 10 ವರ್ಷ, SC/STಗೆ 3 ವರ್ಷ ಮತ್ತು PWD ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ದೇಶದ ಗಣ್ಯರಿಗೆ ನೀಡಲಾಗುವ Y, Z ಮತ್ತು Z+ ಕೆಟಗರಿ ಭದ್ರತೆ ಎಂದರೇನು? ಇವುಗಳ ನಡುವಿನ ವ್ಯತ್ಯಾಸವೇನು ಗೊತ್ತಾ?

ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಒಟ್ಟು 3 ಗಂಟೆಗಳ ಕಾಲ ನಡೆಯಲಿದ್ದು, ಒಟ್ಟು 100 ಅಂಕವನ್ನು ನಿಗದಿಪಡಿಸಲಾಗಿದೆ. ಗಣಿತ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಪ್ರತಿ ವಿಷಯಕ್ಕೆ ತಲಾ 25 ಅಂಕಗಳನ್ನು ನಿಗದಿಪಡಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಮತ್ತು ಕಂಪ್ಯೂಟರ್ ಕಲಿಕೆ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಲೇಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More