Home> Career
Advertisement

Joint CSIR UGC NET Result ಪ್ರಕಟ : ಈ ಡೈರೆಕ್ಟ್ ಲಿಂಕ್ ಮೂಲಕ ಸ್ಕೋರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಿ

 CSIR-UGC NET ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಕೆಲ್ಹ್ಗಿನ ಲಿಂಕ್ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. 

Joint CSIR UGC NET Result ಪ್ರಕಟ : ಈ ಡೈರೆಕ್ಟ್ ಲಿಂಕ್ ಮೂಲಕ ಸ್ಕೋರ್ ಕಾರ್ಡ್ ಡೌನ್ ಲೋಡ್  ಮಾಡಿಕೊಳ್ಳಿ

ಬೆಂಗಳೂರು : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 2024 ರ  joint CSIR-UGC NET ಪರೀಕ್ಷೆಯ ಫಲಿತಾಂಶವನ್ನು ಘೋಷಿಸಿದೆ.ಅಭ್ಯರ್ಥಿಗಳು ಈಗ ತಮ್ಮ CSIR NET ಫಲಿತಾಂಶಗಳನ್ನು 2024 ಅನ್ನು ಅಧಿಕೃತ ವೆಬ್‌ಸೈಟ್- csirnet.nta.ac.in ನಲ್ಲಿ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು. CSIR UGC NET ಜೂನ್ 2024 ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

CSIR NET ಫಲಿತಾಂಶ 2024: ಸ್ಕೋರ್ ಕಾರ್ಡ್‌ಗಳನ್ನು ಹೀಗೆ ಡೌನ್‌ಲೋಡ್ ಮಾಡಿ :

ಅಭ್ಯರ್ಥಿಗಳು ತಮ್ಮ CSIR NET ಫಲಿತಾಂಶ 2024 ಅನ್ನು ಅಧಿಕೃತ ವೆಬ್‌ಸೈಟ್‌ನಿಂದ  ಡೌನ್‌ಲೋಡ್ ಮಾಡಿಕೊಳ್ಳಬಹುದು.

ಹಂತ 1: ಅಧಿಕೃತ ವೆಬ್‌ಸೈಟ್‌ csirnet.nta.ac.inಗೆ ಭೇಟಿ ನೀಡಿ- 
ಹಂತ 2: ಮುಖಪುಟದಲ್ಲಿರುವ  CSIR UGC NET 2024 June Result  ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಹೊಸದಾಗಿ ತೆರೆಯಲಾದ ಟ್ಯಾಬ್‌ನಲ್ಲಿ, ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಕೋಡ್ ನೀಡಿ
ಹಂತ 4: Submit  ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ CSIR NET ಫಲಿತಾಂಶ 2024  ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ
ಹಂತ 5: ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿಕೊಳ್ಳಿ.  ಭವಿಷ್ಯದ ಉಲ್ಲೇಖಕ್ಕಾಗಿ  ಸೇವ್ ಮಾಡಿ ಇಟ್ಟುಕೊಳ್ಳಿ. 

ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿರ ಹುದ್ದೆಗೆ ಅರ್ಜಿ ಆಹ್ವಾನ

NTA CSIR UGC NET 2024ರ  ಪ್ರೋವಿಶನಲ್ ಆನ್ಸರ್ ಕೀಗಳನ್ನು ಬಿಡುಗಡೆ ಮಾಡಿದೆ. ಪ್ರಶ್ನೆ ಪತ್ರಿಕೆ ಮತ್ತು ಅಭ್ಯರ್ಥಿಗಳು ನೀಡಿದ ರೆಸ್ಪಾನ್ಫ್ ಅನ್ನು NTA ವೆಬ್‌ಸೈಟ್ csirnet.nta.ac.in ನಲ್ಲಿ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 11 ರವರೆಗೆ ಹೋಸ್ಟ್ ಮಾಡಲಾಗಿದ್ದು, ಅಭ್ಯರ್ಥಿಗಳಿಂದ ಸವಾಲುಗಳನ್ನು ಆಹ್ವಾನಿಸಲಾಗಿದೆ.

ಜಂಟಿ CSIR-UGC-NET ಜುಲೈ, 2024 ಅನ್ನು CBT ಮೋಡ್‌ನಲ್ಲಿ ಜುಲೈ 25, 26 ಮತ್ತು 27, 2024 ರಂದು ಐದು ವಿಷಯಗಳಿಗೆ ದೇಶದಾದ್ಯಂತ 187 ನಗರಗಳಲ್ಲಿ 348 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು.

ಇದನ್ನೂ ಓದಿ : ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಸೆ.18 ರಿಂದ ಚಾಲನಾ ವೃತ್ತಿ ಪರೀಕ್ಷೆ

ಜಂಟಿ CSIR-UGC NET 2024 ಪರೀಕ್ಷೆಗೆ ಒಟ್ಟು 2,25,335 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,63,529 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. CSIR NET ಫಲಿತಾಂಶ 2024ರ ಹಾರ್ಡ್ ಕಾಪಿಯನ್ನು ಪೋಸ್ಟ್ ಮೂಲಕ ಅಥವಾ ಇ-ಮೇಲ್ ಮೂಲಕ NTA ರವಾನಿಸುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More