Home> Career
Advertisement

Sarkari Naukri 2024: 10-12ನೇ ತರಗತಿ ಉತ್ತೀರ್ಣರಾದವರಿಗೆ ಸರ್ಕಾರದ ಈ ಇಲಾಖೆಯಲ್ಲಿ ನೇರ ನೇಮಕಾತಿ ಅವಕಾಶ

Sarkari Naukri 2024: ಸರ್ಕಾರಿ ಇಲಾಖೆಗಳಲ್ಲಿ 10ನೇ ತರಗತಿ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾ ಅಭ್ಯರ್ಥಿಗಳಿಗೂ ಕೂಡ ಉದ್ಯೋಗಾವಕಾಶವಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ... 
 

Sarkari Naukri 2024: 10-12ನೇ ತರಗತಿ ಉತ್ತೀರ್ಣರಾದವರಿಗೆ ಸರ್ಕಾರದ ಈ ಇಲಾಖೆಯಲ್ಲಿ ನೇರ ನೇಮಕಾತಿ ಅವಕಾಶ

Sarkari Naukri 2024: ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕ ಜನರ ಆಸೆ. ಕೆಲವು ಉದ್ಯೋಗಗಳನ್ನು ಪಡೆಯಲು ಪದವಿ ಹೊಂದಿರುವುದು ಅಗತ್ಯ. ಆದರೆ, ಸರ್ಕಾರದ ಕೆಲವು ಇಲಾಖೆಗಳಲ್ಲಿ ಕೆಲ ಹುದ್ದೆಗಳಿಗೆ 10ನೇ ತರಗತಿ, 12ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಅಷ್ಟೇ ಸಾಕು. 

ಹೌದು, 10ನೇ ತರಗತಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗಾಗಿ, ದೇಶದ ಕೆಲವು ದೊಡ್ಡ ದೊಡ್ಡ ಸರ್ಕಾರಿ ಇಲಾಖೆಗಳಲ್ಲಿ ಪರೀಕ್ಷೆ ಇಲ್ಲದೆಯೇ ನೇರವಾಗಿ ನೇಮಕಾತಿ (Direct Recruitment) ಅವಕಾಶಗಳು ಲಭ್ಯವಿವೆ. ಆ ನೇಮಕಾತಿಗಳ ಬಗ್ಗೆ ತಿಳಿಯೋಣ... 

10ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು: 
ಅಂಚೆ ಇಲಾಖೆ:-

10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯಲ್ಲಿ (Postal Department) ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ಹಲವು ಇತರ ಹುದ್ದೆಗಳಿಗೆ ನೀವು ನೇಮಕಾತಿಗಾಗಿ ಅರ್ಜಿ ಸಲ್ಲಿಸಬಹುದು.

ಭಾರತೀಯ ರೈಲ್ವೆ ಇಲಾಖೆ:- 
ಭಾರತೀಯ ರೈಲ್ವೇಯಲ್ಲಿ (Indian Railways) ಟ್ರ್ಯಾಕ್‌ಮ್ಯಾನ್, ಗೇಟ್‌ಮ್ಯಾನ್, ಪಾಯಿಂಟ್ಸ್‌ಮನ್, ಹೆಲ್ಪರ್, ಪೋರ್ಟರ್ ಸೇರಿದಂತೆ ಇತರ ಹಲವು ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಗಮನಾರ್ಹವಾಗಿ 10ನೇ ತರಗತಿ ಉತ್ತೀರ್ಣರಾಗಿ ಐಟಿಐ ಕೋರ್ಸ್ ಪೂರ್ಣಗೊಳಿಸಿದ್ದರೆ ರೈಲ್ವೇಸ್‌ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. 

ಇದನ್ನೂ ಓದಿ- GK Quiz: ಸಿಂಹದ ಬಾಯಿಯಲ್ಲಿ ಎಷ್ಟು ಹಲ್ಲುಗಳಿರುತ್ತವೆ?

ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ: 
10ನೇ ತರಗತಿ ಉತ್ತೀರ್ಣರದವರು ಭಾರತೀಯ ಸೇನೆ (Indian Army), ನೌಕಾಪಡೆ, ವಾಯುಪಡೆಯಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರಣ್ಯ ಇಲಾಖೆ: 
ಹಲವು ರಾಜ್ಯಗಳಲ್ಲಿ 10ನೇ ತರಗತಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಸರ್ಕಾರಿ ಉದ್ಯೋಗಗಳು (Govt Jobs) ಲಭ್ಯವಿವೆ. 

12ನೇ ತರಗತಿ ಉತ್ತೀರ್ಣರಾದವರಿಗೆ ಸರ್ಕಾರಿ ಉದ್ಯೋಗ: 
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC): 

12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)  ನೇಮಕಾಗಿಗಳಿಗೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಸೇನೆಯಿಂದ ಸ್ಟೆನೋಗ್ರಾಫರ್ ವರೆಗೆ ಹಲವು ಹುದ್ದೆಗಳು ಖಾಲಿ ಇವೆ.

ಭಾರತೀಯ ರೈಲ್ವೆ ಇಲಾಖೆ: 
12ನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಭಾರತೀಯ ರೈಲ್ವೇಯಲ್ಲಿ ALP, ಅಸಿಸ್ಟೆಂಟ್ ಲೋಕೋ ಪೈಲಟ್, RRB NTPC ಸೇರಿದಂತೆ  ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ- GK Quiz: ಗಾಯಗೊಂಡಾಗ ಯಾವ ಪ್ರಾಣಿ ಮನುಷ್ಯರಂತೆ ಆಳುತ್ತದೆ

ಪೊಲೀಸ್ ಇಲಾಖೆ: 
12ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು  ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗಳಿಗೆ (Constable Post in Police Department) ಅರ್ಜಿ ಸಲ್ಲಿಸಬಹುದು. 

ಅಂಚೆ ಇಲಾಖೆ: 
12ನೇ ತರಗತಿಯಲ್ಲಿ ಪಾಸ್ ಆಗಿರುವ ಅಭ್ಯರ್ಥಿಗಳು ಅಂಚೆ ಇಲಾಖೆಯಲ್ಲಿ ಜಿಡಿಎಸ್, ಸಹಾಯಕ, ಪೋಸ್ಟ್‌ಮ್ಯಾನ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಸರ್ಕಾರಿ ಉದ್ಯೋಗಕ್ಕಾಗಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ಗಳನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಅರ್ಜಿ ಆಹ್ವಾನಿಸಿದಾಗ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More