Home> Career
Advertisement

ಕುವೈತ್ ದೇಶದಲ್ಲಿ ವೈದ್ಯ ವೃತ್ತಿಗಾಗಿ 468 ಹುದ್ದೆಗಳಿಗಾಗಿ ನೇರ ಸಂದರ್ಶನ

 

ಕುವೈತ್ ದೇಶದಲ್ಲಿ ವೈದ್ಯ ವೃತ್ತಿಗಾಗಿ 468 ಹುದ್ದೆಗಳಿಗಾಗಿ ನೇರ ಸಂದರ್ಶನ

ಧಾರವಾಡ: ಕುವೈತ್‍ದೇಶದಲ್ಲಿ ವೈದ್ಯರಿಗಾಗಿ ಭಾರಿ ಬೇಡಿಕೆ ಇದ್ದು 468 ಹುದ್ದೆಗಳಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರದಿಂದ ನೇರ ನೇಮಕಾತಿ ನಡೆಯಲಿದ್ದು, ಜನೇವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಕುವೈತ್‍ನ ಉದ್ಯೋಗದಾತರಿಂದ ಸಂದರ್ಶನ ನಡೆಯಲಿದೆ.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ರಂಪಾಟ! ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ‘ಕೈ’ ಕಾರ್ಯಕರ್ತರು

ಆಸಕ್ತಿ ಇರುವವರು ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿನ ಅಂತರಾಷ್ಟ್ರೀಯ ವಲಸೆ ಕೇಂದ್ರಕ್ಕೆ ಭೇಟಿ ನೀಡಬೇಕು. ಮತ್ತು 6 ವರ್ಷ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜÐರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧಿ ತಜ್ಞರು, ಪ್ರಸೂತಿ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗ ತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗ ತಜ್ಞರು, ಕುಟುಂಬ ವೈದ್ಯರು, ತೀವ್ರ ನಿಗಾ ಘಟಕ ತಜ್ಞರು, ವಿಕಿರಣ ಶಾಸ್ತ್ರಜ್ಞರು, ಮತ್ತು ಇಎನ್‍ಟಿ ತಜ್ಞರು ವಿವರಗಳಿಗಾಗಿ ಜನೇವರಿ 15, 2023 ರೊಳಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, 1ನೇ ಮಹಡಿ, ರಾಯಾಪೂರ, ಧಾರವಾಡ, ಕಛೇರಿಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಸ್ವಾಮೀಜಿಗಳು‌24 ಗಂಟೆಗಳ‌ ಗಡುವು ನೀಡಿದ್ದು ಸರಿಯಲ್ಲ! 

ಹೆಚ್ಚಿನ ಮಾಹಿತಿಗಾಗಿ 0836-2972388, 9945927305, 9113505020ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More