Home> Business
Advertisement

Xpulse 200 4V Teaser: ಶೀಘ್ರದಲ್ಲಿಯೇ Hero ಬಿಡುಗಡೆ ಮಾಡಲಿದೆ Adventure Touring Motorcycle

ನವದೆಹಲಿ: Xpulse 200 4V Teaser - ಸಾಹಸಿ ಪ್ರವಾಸಿ ಬೈಕ್ ಪ್ರಿಯರಿಗಾಗಿ ದೇಸೀಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹಿರೋ ಮೋಟೋಕಾರ್ಪ ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಶೀಘ್ರದಲ್ಲಿಯೇ ಕಂಪನಿ ತನ್ನ ಸಾಹಸ ಪ್ರವಾಸಿ ಬೈಕ್ ಎಕ್ಸ್ ಪಲ್ಸ್ ನ ಹೊಸ ರೂಪಾಂತರಿ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

Xpulse 200 4V Teaser: ಶೀಘ್ರದಲ್ಲಿಯೇ Hero ಬಿಡುಗಡೆ ಮಾಡಲಿದೆ Adventure Touring Motorcycle

ನವದೆಹಲಿ: Xpulse 200 4V Teaser - ಸಾಹಸಿ ಪ್ರವಾಸಿ ಬೈಕ್ ಪ್ರಿಯರಿಗಾಗಿ ದೇಸೀಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹಿರೋ ಮೋಟೋಕಾರ್ಪ ಸಂತಸದ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಶೀಘ್ರದಲ್ಲಿಯೇ ಕಂಪನಿ ತನ್ನ ಸಾಹಸ ಪ್ರವಾಸಿ ಬೈಕ್ ಎಕ್ಸ್ ಪಲ್ಸ್ ನ ಹೊಸ ರೂಪಾಂತರಿ ಮಾದರಿಯನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. 4 ವಾಲ್ವ್ ಮಾದರಿಯ ಈ ಆವ್ರತ್ತಿಯ ಹೆಸರು ಹೀರೋ ಎಕ್ಸ್ ಪಲ್ಸ್ 200V. ರಸ್ತೆ ಪರೀಕ್ಷೆಯ ಸಂದರ್ಭದಲ್ಲಿ ಈ ಬೈಕ್ (Bike) ಅನ್ನು ಮೊದಲ ಬಾರಿಗೆ ಗುರುತಿಸಲಾಗಿದೆ. ಇದೀಗ ಕಂಪನಿಯು ತನ್ನ ಈ ಬೈಕ್ ನ ಆರಂಭವನ್ನು ಅಧಿಕೃತವಾಗಿ ಘೋಷಿಸಿದೆ. ಈ ಬೈಕಿನ ಅಧಿಕೃತ ಟೀಸರ್ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ಬೈಕ್ ಕಮಿಂಗ್ ಸೂನ್ ಎಂಬುದನ್ನು ತೋರಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಟೀಸರ್ ವಿಡಿಯೋ ಅನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಬೈಕ್ ನ ಬಾಹ್ಯ ವಿವರಗಳನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಹೊಸ Xpulse 200 4V ಬೈಕ್ ನ ಪರ್ವತಮಯ ಪ್ರದೇಶಗಳಲ್ಲಿ ಚಾರಣವನ್ನು ತೋರಿಸಲಾಗಿದೆ. There’s thrill in the air. Brace yourself for bigger adventures ಎಂದು ಈ ಟೀಸರ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ-New Bike Launch News: ಹಬ್ಬಕ್ಕೆ ಬೈಕ್ ಖರೀದಿಸಬೇಕೆ? Pulsar-Hondaಗೆ ಟಕ್ಕರ್ ನೀಡಲು ರೋಡಿಗಿಳಿಯಲಿದೆ ಈ ಕಡಕ್ ಬೈಕ್

ಈ ವೈಶಿಷ್ಟ್ಯಗಳಿರುವ ಸಾಧ್ಯತೆ (Hero Xpulse 200 4V Specification)
ಟೀಸರ್ ವೀಡಿಯೋದಲ್ಲಿ ನೀವು ಮೋಟಾರ್ ಸೈಕಲ್‌ನ ನೀಲಿ ಮತ್ತು ಬಿಳಿ ಮುಂಭಾಗದ ಫೆಂಡರ್‌ಗಳನ್ನು ಸ್ಪಷ್ಟವಾಗಿ ನೋಡಬಹುದು. ಇವುಗಳು ಮೊದಲು ಸೋರಿಕೆಯಾದ ಚಿತ್ರಗಳಲ್ಲಿಯೂ ಕಂಡುಬಂದಿದ್ದವು. ಉತ್ತಮ ಆಫ್ ರೋಡ್ ಅನುಭವಕ್ಕಾಗಿ ಬೈಕು ಹೀರೋಸ್ ರಾಲಿ ಕಿಟ್ ಅನ್ನು ನಾಬಿ ಟೈರ್‌ಗಳೊಂದಿಗೆ ಬರಲಿದೆ ಎಂಬುದು ವೀಡಿಯೊ ಕ್ಲಿಪ್ ಬಹಿರಂಗಪಡಿಸಿದೆ. ಇದಲ್ಲದೇ ಆಕರ್ಷಕ ಎಲ್ ಇಡಿ ಟೈಲ್ ಲ್ಯಾಂಪ್ ಗಳು, ಬಿಳಿ ಬಣ್ಣದ ನಕಲ್ ಗಾರ್ಡ್, ಮತ್ತು ಡಿಸ್ಕ್ ಬ್ರೇಕ್ ಗಳನ್ನು ಬೈಕ್ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳಲ್ಲಿ ಸ್ಪಷ್ಟವಾಗಿ ನೀವು ಕಾಣಬಹುದು.

ಇದನ್ನೂ ಓದಿ-Highest Sold Bike: ಎಲ್ಲಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ Hero ಕಂಪನಿಯ ಈ ಬೈಕ್, ಒಂದೇ ತಿಂಗಳಿನಲ್ಲಿ ಲಕ್ಷಾಂತರ ಜನರಿಂದ ಖರೀದಿ

ಇಂಜಿನ್ ನಲ್ಲಿನ ಬದಲಾವಣೆ ಏನು?
ಹೊಸ ಮಾದರಿಯಲ್ಲಿ ಪ್ರಸ್ತುತ 199.6 ಸಿಸಿ, ತೈಲ-ತಂಪಾಗುವ ಎಂಜಿನ್‌ನ 4-ವಾಲ್ವ್ ಆವೃತ್ತಿ ನೋಡಲು ಸಿಗಲಿದೆ. ನಾಲ್ಕು ಕವಾಟದ ತಲೆಯ ಬಳಕೆಯು ಹೆಚ್ಚಿನ ವೇಗದಲ್ಲಿ ಎಂಜಿನ್ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿರೀಕ್ಷೆಯಿದೆ. ಅಂದರೆ, ಒಟ್ಟಾರೆ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯು ಹಿಂದಿನಂತೆಯೇ ಇರಲಿದೆ. ಪ್ರಸ್ತುತ ಮಾದರಿಯು 17.8bhp ಮತ್ತು 16.45Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ ಎನ್ನಲಾಗಿದೆ. ಬೈಕಿನ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಬಹುದು. ಇದರ ಬೆಲೆ ರೂ 1.25 ಲಕ್ಷದಿಂದ ರೂ 1.30 ಲಕ್ಷದವರೆಗೆ ಇರುವ ನಿರೀಕ್ಷೆ ಇದೆ (ಎಕ್ಸ್ ಶೋರೂಂ).

ಇದನ್ನೂ ಓದಿ-ಮಾರುಕಟ್ಟೆಗೆ ಬಂದಿದೆ BMW Bike ..! ಅಬ್ಬಬ್ಬಾ ಬೆಲೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More