Home> Business
Advertisement

10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

10 Rupee Coin: ಸಾಮಾನ್ಯವಾಗಿ ಸರಕುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದಾಗ, ಕೆಲವು ಅಂಗಡಿಯವರು 10 ರೂಪಾಯಿಯ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಬಾರಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಾಣ್ಯ ನಕಲಿ ಎಂದು ಕೆಲವು ಅಂಗಡಿಕಾರರು ವಾದಿಸುತ್ತಾರೆ.

10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ?  ಗೊಂದಲ ನಿವಾರಿಸಿದ ಸರ್ಕಾರ

10 Rupee Coin: ಸಾಮಾನ್ಯವಾಗಿ ನೀವು ಸರಕುಗಳನ್ನು ಪಡೆಯಲು ಮಾರುಕಟ್ಟೆಗೆ ಹೋದಾಗ, ಕೆಲವು ಅಂಗಡಿಯವರು 10 ರೂಪಾಯಿಯ ನಾಣ್ಯವನ್ನು (10 Rupee Coin) ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಬಾರಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ನಾಣ್ಯ ನಕಲಿ ಎಂದು ಕೆಲವು ಅಂಗಡಿಕಾರರು ವಾದಿಸುತ್ತಾರೆ. ಮತ್ತೊಂದೆಡೆ, ಕೆಲವು ಅಂಗಡಿಯವರು ನಿರ್ದಿಷ್ಟ ರೀತಿಯ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾರೆ ಮತ್ತು ಅವರು ಉಳಿದ ನಾಣ್ಯಗಳನ್ನು ತೆಗೆದುಕೊಳ್ಳುತ್ತಾರೆ. 10 ರೂಪಾಯಿಯ ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದೇ ಇದಕ್ಕೆ ಮುಖ್ಯ ಕಾರಣ.

₹ 10 ನಾಣ್ಯಗಳು ಚಲಾವಣೆಯಲ್ಲಿವೆ:

ಹೌದು, ಮಾರುಕಟ್ಟೆಯಲ್ಲಿ 10 ರೂಪಾಯಿಯ (10 Rupee Coin)ಹಲವು ಬಗೆಯ ನಾಣ್ಯಗಳಿರುವುದು ಇಂತಹ ಗೊಂದಲಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ (Central Govt) ಈ ಬಗ್ಗೆ ಸ್ಪಷ್ಟನೆ ನೀಡಿತ್ತು. 10 ರೂಪಾಯಿಯ ನಾಣ್ಯಗಳು ಸಂಪೂರ್ಣವಾಗಿ ಮಾನ್ಯವಾಗಿರುತ್ತವೆ ಮತ್ತು ಅದು ನಕಲಿ ಅಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ- Masked Aadhaar ಎಂದರೇನು? UIDAIನ ಈ ವೈಶಿಷ್ಟ್ಯದಿಂದ ಏನು ಪ್ರಯೋಜನ?

ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರಿಸಿದರು:
10 ರೂಪಾಯಿಯ ನಾಣ್ಯಗಳನ್ನು (10 Rupee Coin) ಎಲ್ಲಾ ರೀತಿಯ ವಹಿವಾಟುಗಳಿಗೆ ಕಾನೂನುಬದ್ಧ ಟೆಂಡರ್ ಆಗಿ ಬಳಸಬಹುದು ಎಂದು ಸರ್ಕಾರ ತಿಳಿಸಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಫೆಬ್ರವರಿ 8 ರಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ 10 ರೂಪಾಯಿಗಳ ಎಲ್ಲಾ ನಾಣ್ಯಗಳು ಕಾನೂನುಬದ್ಧವಾಗಿರುತ್ತವೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಎ ವಿಜಯಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಪಂಕಜ್ ಚೌಧರಿ ಅವರು, ವಿವಿಧ ಗಾತ್ರಗಳು, ಥೀಮ್‌ಗಳು ಮತ್ತು ವಿನ್ಯಾಸಗಳಲ್ಲಿ ಭಾರತ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಮುದ್ರಿಸಲಾದ ಮತ್ತು ಆರ್‌ಬಿಐ ಚಲಾವಣೆಯಲ್ಲಿರುವ 10 ರೂ. ನಾಣ್ಯಗಳನ್ನು ಎಲ್ಲಾ ರೀತಿಯ ವಹಿವಾಟುಗಳಲ್ಲಿ ಕಾನೂನುಬದ್ಧವಾಗಿ ಬಳಸಬಹುದು ಎಂದಿದ್ದಾರೆ.

ಇದನ್ನೂ ಓದಿ- LIC ಈ ಯೋಜನೆಯಲ್ಲಿ ದಿನಕ್ಕೆ ₹262 ಹೂಡಿಕೆ ಮಾಡಿ, ₹20 ಲಕ್ಷ ಲಾಭ ಪಡೆಯಿರಿ!

ಆರ್‌ಬಿಐ ಕೂಡ ಜಾಗೃತವಾಗಿರುತ್ತದೆ:
10 ರೂಪಾಯಿ ನಾಣ್ಯಗಳನ್ನು ಸ್ವೀಕರಿಸದಿರುವ ಬಗ್ಗೆ ಕಾಲಕಾಲಕ್ಕೆ ದೂರುಗಳು ಬರುತ್ತಿವೆ ಎಂದು ಚೌಧರಿ ಹೇಳಿದರು. ಸಾರ್ವಜನಿಕರ ಮನಸ್ಸಿನಲ್ಲಿ ಜಾಗೃತಿ ಮೂಡಿಸಲು, ತಪ್ಪು ಕಲ್ಪನೆಗಳು ಮತ್ತು ಭಯಗಳನ್ನು ಹೋಗಲಾಡಿಸಲು, ಆರ್‌ಬಿಐ ಕಾಲಕಾಲಕ್ಕೆ ಪತ್ರಿಕಾ ಪ್ರಕಟಣೆಗಳ ಮೂಲಕ ಜನರನ್ನು ಜಾಗೃತಗೊಳಿಸುತ್ತಲೇ ಇರುತ್ತದೆ. 10 ರೂಪಾಯಿಯ ಎಲ್ಲಾ 14 ವಿನ್ಯಾಸದ ನಾಣ್ಯಗಳು ಮಾನ್ಯವಾಗಿರುತ್ತವೆ ಮತ್ತು ಕಾನೂನುಬದ್ಧವಾಗಿರುತ್ತವೆ ಎಂದು ಆರ್‌ಬಿಐ ಈಗಾಗಲೇ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More