Home> Business
Advertisement

ಏನಿದು Blue Aadhaar Card? ಸಾಮಾನ್ಯ ಆಧಾರ್ ಕಾರ್ಡ್‌ಗಿಂತ ಇದು ಹೇಗೆ ಭಿನ್ನವಾಗಿದೆ?

Blue Aadhaar Card: ನೀಲಿ ಆಧಾರ್ ಕಾರ್ಡ್ ಅನ್ನು ಮಕ್ಕಳ ಆಧಾರ್ ಕಾರ್ಡ್ ಎಂತಲೂ ಕರೆಯಲಾಗುತ್ತದೆ. ಈ ಕಾರ್ಡ್ ಸಾಮಾನ್ಯ ಆಧಾರ್ ಕಾರ್ಡ್‌ಗಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿಯೋಣ... 

ಏನಿದು Blue Aadhaar Card? ಸಾಮಾನ್ಯ ಆಧಾರ್ ಕಾರ್ಡ್‌ಗಿಂತ  ಇದು ಹೇಗೆ ಭಿನ್ನವಾಗಿದೆ?

Blue Aadhaar Card: ಪ್ರಸ್ತುತ ಆಧಾರ್ ಕಾರ್ಡ್ ಭಾರತದ ಪ್ರತಿ ನಾಗರೀಕರಿಗೂ ಅತ್ಯಗತ್ಯವಾದ ದಾಖಲೆಯಾಗಿದೆ. ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಿಶೇಷ ಆಧಾರ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದನ್ನು  ಇದನ್ನು "ಮಕ್ಕಳ ಆಧಾರ್ ಕಾರ್ಡ್" ಅಥವಾ "ನೀಲಿ ಆಧಾರ್ ಕಾರ್ಡ್" ಎಂದೂ ಕರೆಯಲಾಗುತ್ತದೆ.  ಹಿರಿಯರ ಆಧಾರ್ ಕಾರ್ಡ್‌ನಿಂದ ಪ್ರತ್ಯೇಕಿಸಲು ಈ ಆಧಾರ್ ಕಾರ್ಡ್‌ಗೆ ನೀಲಿ ಬಣ್ಣವನ್ನು ನೀಡಲಾಗಿದೆ. 

ಮಕ್ಕಳ ಆಧಾರ್ ಕಾರ್ಡ್ ಸಾಮಾನ್ಯ ಆಧಾರ್ ಕಾರ್ಡ್‌ಗಿಂತ ಹೇಗೆ ಭಿನ್ನವಾಗಿದೆ. ಮಕ್ಕಳ ಆಧಾರ್ ಕಾರ್ಡ್ ಪಡೆಯಲು ಅಗತ್ಯವಿರುವ ದಾಖಲೆಗಳೇನು? ಇದಕ್ಕಾಗಿ ಅರ್ಜಿ ಸಲ್ಲಿಸುವ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ. 

ಮಕ್ಕಳ ಆಧಾರ್ ಕಾರ್ಡ್ vs ಸಾಮಾನ್ಯ ಆಧಾರ್ ಕಾರ್ಡ್‌: 
ಸಾಮಾನ್ಯ ಆಧಾರ್ ಕಾರ್ಡ್‌ನಲ್ಲಿ, ಫಿಂಗರ್‌ಪ್ರಿಂಟ್ ಮತ್ತು ಕಣ್ಣಿನ ಛಾಯಾಚಿತ್ರಗಳಿಂದ ಕೂಡಿರಲಿದೆ. ಆದರೆ ಮಕ್ಕಳ ಆಧಾರ್ ಕಾರ್ಡ್‌ನಲ್ಲಿ (ನೀಲಿ ಆಧಾರ್ ಕಾರ್ಡ್) ಅವುಗಳ್ಯಾವು ಇರುವುದಿಲ್ಲ. ಮಕ್ಕಳ ಕೈ ಮತ್ತು ಕಾಲುಗಳು ತುಂಬಾ ಪುಟ್ಟದಾಗಿರುತ್ತವೆ. ಅವರ ಕಣ್ಣುಗಳು ಸಹ ಸೂಕ್ಷ್ಮವಾಗಿರುತ್ತವೆ, ಆದ್ದರಿಂದ ಅವರಿಗೆ ಈ ಗುರುತುಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಬದಲಾಗಿ, ಅವರ ಪೋಷಕರ ಆಧಾರ್ ಕಾರ್ಡ್‌ಗೆ ಮಕ್ಕಳ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗುತ್ತದೆ. 

ಇದನ್ನೂ ಓದಿ- ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್:‌ 600 ಕೋಟಿ ರೂ. ದಂಡ ಸಂಗ್ರಹಿಸಿದ ಕೇಂದ್ರ ಸರ್ಕಾರ!

ನೀಲಿ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? 
ಅಗತ್ಯ ದಾಖಲೆಗಳು: 

ಮಗುವಿನ ಜನನದ ಪುರಾವೆ (ಜನನ ಪ್ರಮಾಣಪತ್ರ, ವ್ಯಾಕ್ಸಿನೇಷನ್ ಕಾರ್ಡ್), ನಿಮ್ಮ ಗುರುತು ಮತ್ತು ವಿಳಾಸ ಪುರಾವೆ (ನಿಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮುಂತಾದವು), ಮಗುವಿನ ಇತ್ತೀಚಿನ ಭಾವಚಿತ್ರ.

ಮಕ್ಕಳ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವಿಧಾನ: 
>> ಮೊದಲಿಗೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ. 
>> ನೀವು ದಾಖಲಾತಿ ಕೇಂದ್ರದಲ್ಲಿ ಆಧಾರ್ ನೋಂದಣಿ ಫಾರ್ಮ್ ಅನ್ನು ಪಡೆದು ಅದನ್ನು ಭರ್ತಿ ಮಾಡಿ. 
>> ಆಧಾರ್ ಕೇಂದ್ರದಲ್ಲಿ ಆಧಾರ್  ದಾಖಲಾತಿ ಮಾಡುವ ವ್ಯಕ್ತಿ ನಿಮ್ಮ ಮಗುವಿನ ಫೋಟೋ ತೆಗೆದುಕೊಳ್ಳುತ್ತಾರೆ.
>> ಬಳಿಕ ನಿಮ್ಮ ಮಗುವಿನ ದಾಖಲಾತಿ ID (EID) ಹೊಂದಿರುವ ಸ್ಲಿಪ್ ಅನ್ನು ಸ್ವೀಕರಿಸಿ. 
>> ಭವಿಷ್ಯದ ಉಪಯೋಗಕ್ಕಾಗಿ ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಮಗುವಿನ ಆಧಾರ್ ಕಾರ್ಡ್ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಲು ಈ EID ಅನ್ನು ಬಳಸಬಹುದು. 

ಇದನ್ನೂ ಓದಿ- ಆಧಾರ್ ಕಾರ್ಡ್‌ನಿಂದ 2% ಬಡ್ಡಿಯಲ್ಲಿ Loan ಸಿಗುತ್ತಾ! ಇಲ್ಲಿದೆ ಸತ್ಯಾಸತ್ಯತೆ!

ಮಕ್ಕಳ ಆಧಾರ್/ನೀಲಿ ಆಧಾರ್ ಮಾಡಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: 
* ಮಕ್ಕಳಿಗಾಗಿ ಆಧಾರ್ ಕಾರ್ಡ್ (ನೀಲಿ ಆಧಾರ್ ಕಾರ್ಡ್) ಮಾಡುವುದು ಸಂಪೂರ್ಣವಾಗಿ ಉಚಿತವಾಗಿದ್ದು, ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. 
* ನಿಮ್ಮ ಮಗುವಿಗೆ 5 ವರ್ಷಗಳು ಪೂರ್ಣಗೊಳ್ಳುವವರೆಗೆ ಮಾತ್ರ ಈ ಕಾರ್ಡ್ ಮಾನ್ಯವಾಗಿರುತ್ತದೆ. 
* ಮಗುವಿಗೆ 5 ವರ್ಷ ತುಂಬಿದ ಬಳಿಕ ಆಧಾರ್ ಅಪ್ಡೇಟ್ ಮಾಡುವುದನ್ನು ಮರೆಯಬೇಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More