Home> Business
Advertisement

New Toll Rules:ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ!

Nitin Gadkari Annoucement: ಟೋಲ್ ತೆರಿಗೆಯನ್ನು ವಸೂಲಿ ಮಾಡಲು ಸರ್ಕಾರವು 2 ವಿಧಾನಗಳನ್ನು ರೂಪಿಸುವ ಸಾಧ್ಯತೆ ಇದ್ದು. ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ.
 

New Toll Rules:ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ!

Toll Plaza Rules: ವಾಹನ ಮತ್ತು ಟೋಲ್ ಎರಡೂ ಒಟ್ಟಿಗೆ ಸಾಗುತ್ತವೆ. ಈಗಿನ ಕಾಲದಲ್ಲಿ ಲಾಂಗ್ ಡ್ರೈವ್ ಹೋದರೆ ಎಲ್ಲೋ ಟೋಲ್ ಟ್ಯಾಕ್ಸ್ ಕಟ್ಟಬೇಕು. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ಟೋಲ್ ತೆರಿಗೆಯ ಬಗ್ಗೆ ಚಿಂತಿಸುತ್ತಿದ್ದರೆ, ಇದೀಗ ನಿಮ್ಮ ಚಿಂತೆ ಕಡಿಮೆಯಾಗಲಿದೆ. ಹೌದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದು, ಇದು ಕೋಟ್ಯಂತರ ವಾಹನ ಮಾಲೀಕರ ಮೇಲೆ ಪರಿಣಾಮ ಬೀರಲಿದೆ. 2024 ರ ಮೊದಲು ಭಾರತದಲ್ಲಿ 26 ಹಸಿರು ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸಲಾಗುವುದು ಮತ್ತು ಇದೇ ವೇಳೆ ಟೋಲ್ ತೆರಿಗೆಗೆ ಹೊಸ ನಿಯಮಗಳನ್ನು ಹೊರಡಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ತಂತ್ರಜ್ಞಾನವೂ ಬದಲಾಗಲಿದೆ
ಗ್ರೀನ್ ಎಕ್ಸ್ ಪ್ರೆಸ್ ವೇ ನಿರ್ಮಾಣದ ನಂತರ ಭಾರತವು ರಸ್ತೆಗಳ ವಿಷಯದಲ್ಲಿ ಅಮೆರಿಕಕ್ಕೆ ಸರಿಸಮಾನವಾಗಲಿದೆ. ಇದರೊಂದಿಗೆ ಟೋಲ್ ತೆರಿಗೆ ಸಂಗ್ರಹಿಸುವ ನಿಯಮಗಳು ಮತ್ತು ತಂತ್ರಜ್ಞಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಟೋಲ್ ತೆರಿಗೆಯನ್ನು ವಸೂಲಿ ಮಾಡಲು ಸರ್ಕಾರವು 2 ವಿಧಾನಗಳನ್ನು ರೂಪಿಸಲಿದೆ
ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ. ಇದರಲ್ಲಿ, ಕಾರುಗಳಲ್ಲಿ ಜಿಪಿಎಸ್ ವ್ಯವಸ್ಥೆಗಳನ್ನು ಸ್ಥಾಪಿಸುವುದು ಮೊದಲ ಆಯ್ಕೆಯಾಗಿದೆ. ಆದರೆ, ಎರಡನೆಯ ವಿಧಾನವು ಇತ್ತೀಚಿನ ನಂಬರ್ ಪ್ಲೇಟ್‌ಗೆ ಸಂಬಂಧಿಸಿದೆ. ಸದ್ಯ ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ.

ಇದನ್ನೂ ಓದಿ-'ಕೈ' ಬಿಟ್ಟು 'ಕಮಲ' ಹಿಡಿದ ಎ.ಕೆ. ಆಂಟನಿ ಪುತ್ರ, 'ನಿರ್ಧಾರ ಸರಿಯಲ್ಲ, ನೋವು ತಂದಿದೆ' ಎಂದ ತಂದೆ

ಶಿಕ್ಷೆಗೆ ಅವಕಾಶವಿಲ್ಲ
ಟೋಲ್ ಟ್ಯಾಕ್ಸ್ ಪಾವತಿಸದಿದ್ದಕ್ಕಾಗಿ ಯಾವುದೇ ರೀತಿಯ ಶಿಕ್ಷೆಯ ನಿಬಂಧನೆ ಇಲ್ಲ. ಮುಂದಿನ ದಿನಗಳಲ್ಲಿ ಟೋಲ್ ತೆರಿಗೆ ಸಂಗ್ರಹಿಸಲು ತಂತ್ರಜ್ಞಾನದ ಬಳಕೆಯತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ-OMG! ಕುಡಿದ ಮತ್ತಿನಲ್ಲಿ ಓರ್ವ ಯುವಕ ಮತ್ತೊರ್ವ ಯುವಕನ ಜೊತೆಗೆ ವಿವಾಹವಾದ... ಮುಂದೇನಾಯ್ತು ತಿಳಿಯಲು ಸುದ್ದಿ ಓದಿ

ಹಣವನ್ನು ನೇರವಾಗಿ ಖಾತೆಯಿಂದ ಕಡಿತಗೊಳಿಸಲಾಗುತ್ತದೆ
ನಿತಿನ್ ಗಡ್ಕರಿ ಅವರು ಇಲ್ಲಿಯವರೆಗೆ ಟೋಲ್ ಪಾವತಿಸದಿದ್ದಕ್ಕಾಗಿ ಶಿಕ್ಷೆಯ ಯಾವುದೇ ನಿಬಂಧನೆ ಇಲ್ಲ ಎಂದಿದ್ದಾರೆ, ಆದರೆ ಟೋಲ್ ಬಗ್ಗೆ ಮಸೂದೆ ತರಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈಗ ಟೋಲ್ ತೆರಿಗೆಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಕ್ಕೆ ಪ್ರತ್ಯೇಕ ಕ್ರಮ ಕೈಗೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ ಟೋಲ್ ಪ್ಲಾಜಾ ಗಳಲ್ಲಿ ನೀವು ಟೋಲ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ, ನಿಮ್ಮ ಖಾತೆಯಿಂದ ನೇರವಾಗಿ ಹಣ ಕಡಿತಗೊಳಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಇದಲ್ಲದೇ ಕೇಂದ್ರ ಸಚಿವರು, '2019ರಲ್ಲಿ ಕಾರುಗಳು ಕಂಪನಿ ಅಳವಡಿಸಿದ ನಂಬರ್ ಪ್ಲೇಟ್‌ಗಳೊಂದಿಗೆ ಬರಬೇಕು ಎಂಬ ನಿಯಮ ರೂಪಿಸಿದ್ದೇವೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಬಂದ ವಾಹನಗಳು ವಿಭಿನ್ನ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ' ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More