Home> Business
Advertisement

Top Mileage Scooters: ಅತಿಹೆಚ್ಚು ಮೈಲೇಜ್ ನೀಡುವ 5 ಅಗ್ಗದ ಸ್ಕೂಟರ್‌ಗಳು!  

ಅತಿಹೆಚ್ಚು ಮೈಲೇಜ್ ಸ್ಕೂಟರ್‌ಗಳು: ಮಾರುಕಟ್ಟೆಯಲ್ಲಿ ಅತಿಹೆಚ್ಚು ಮೈಲೇಜ್ ನೀಡುವ ಹಲವಾರು ಸ್ಕೂಟರ್‍ಗಳಿವೆ. ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಈ ಸ್ಕೂಟರ್‍ಗಳು ಬಗ್ಗೆ ತಿಳಿದುಕೊಳ್ಳಿರಿ.

Top Mileage Scooters: ಅತಿಹೆಚ್ಚು ಮೈಲೇಜ್ ನೀಡುವ 5 ಅಗ್ಗದ ಸ್ಕೂಟರ್‌ಗಳು!  

ನವದೆಹಲಿ: ಒಂದೋ ಪೆಟ್ರೋಲ್ ಬೆಲೆ ಕಡಿಮೆಯಾಗಬೇಕು ಅಥವಾ ನಿಮ್ಮ ಸ್ಕೂಟರ್ ಹೆಚ್ಚು ಮೈಲೇಜ್ ನೀಡಬೇಕು. ಈ 2 ರೀತಿಯಲ್ಲಿ ಸ್ಕೂಟರ್ ಚಾಲನೆಯ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೇಬಿನ ಭಾರ ಕಡಿಮೆಯಾಗುತ್ತದೆ. ಇದೀಗ ಪೆಟ್ರೋಲ್ ಬೆಲೆ ಕಡಿಮೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚು ಮೈಲೇಜ್ ನೀಡುವ ಅನೇಕ ಸ್ಕೂಟರ್‌ಗಳಿವೆ. ಇವುಗಳ ಪೈಕಿ ಯಾವುದಾದರೂ ಸ್ಕೂಟರ್ ಅನ್ನು ನೀವು ಮನೆಗೆ ತಂದರೆ ಸ್ಕೂಟರ್ ಚಾಲನೆಯ ವೆಚ್ಚವು ಕಡಿಮೆ ಇರುತ್ತದೆ. ದೇಶದಲ್ಲೇ ಅತಿಹೆಚ್ಚು ಮೈಲೇಜ್ ನೀಡುವ 5 ಅಗ್ಗದ ಸ್ಕೂಟರ್‌ಗಳ ಬಗ್ಗೆ ತಿಳಿಯಿರಿ.

 1. ಯಮಹಾ ಫ್ಯಾಸಿನೊ ಹೈಬ್ರಿಡ್ 125

ಇದು mild-hybrid setup ಜೊತೆಗೆ 125cc ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಹೀಗಾಗಿ ಇದು ಸುಮಾರು 68 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಪವರ್‌ಟ್ರೇನ್ 8.2PS/10.3Nm ಔಟ್‌ಪುಟ್ ನೀಡುತ್ತದೆ. ಈ ಸ್ಕೂಟರ್‌ನ ಬೆಲೆ ಸುಮಾರು 76,600-87,830 ರೂ. (ಎಕ್ಸ್ ಶೋ ರೂಂ) ಇದೆ.

ಇದನ್ನೂ ಓದಿ: ರೈಲು ಬೋಗಿಗಳಲ್ಲಿರುವ ಐದು ಅಂಕಿಗಳ ರಹಸ್ಯ ನಿಮಗೂ ತಿಳಿದಿರಲಿ

2. YAMAHA RAYZR 125

ಇದು ಹೆಚ್ಚು ಸ್ಪೋರ್ಟಿಯರ್ ಸ್ಕೂಟರ್ ಆಗಿದೆ. ಇದು 125cc ಎಂಜಿನ್‌ನಿಂದ ಚಾಲಿತವಾಗಿದ್ದು, ಇದರೊಂದಿಗೆ ಸೌಮ್ಯ-ಹೈಬ್ರಿಡ್ ಸೆಟಪ್ ನೀಡಲಾಗಿದೆ. ಆದ್ದರಿಂದ ಇದು ಸುಮಾರು 68 kmpl ಮೈಲೇಜ್ ನೀಡುವ ಸಾಮರ್ಥ್ ವನ್ನು ಹೊಂದಿದೆ. ಇದರ ಬೆಲೆ ಸುಮಾರು 80,730-90,130 ರೂ. (ಎಕ್ಸ್ ಶೋ ರೂಂ) ಇದೆ. ಇದು 5 ರೂಪಾಂತರಗಳಲ್ಲಿ ಬರುತ್ತದೆ.

3. SUZUKI ACCESS 125

ಇದು 124cc ಇಂಧನ-ಇಂಜೆಕ್ಟೆಡ್ ಎಂಜಿನ್ ಹೊಂದಿದೆ. ಈ ಸ್ಕೂಟರ್ ಸುಮಾರು 64 kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೂಟರ್‌ನ ಬೆಲೆ ಸುಮಾರು 77,600-87,200 ರೂ. (ಎಕ್ಸ್ ಶೋ ರೂಂ) ಇದೆ. ಇದರ ಇಂಧನ ಟ್ಯಾಂಕ್ ಸಾಮರ್ಥ್ಯ 5-ಲೀಟರ್.

4. TVS JUPITER

ಇದು 110cc ಎಂಜಿನ್ ಹೊಂದಿದೆ. ಇದರೊಂದಿಗೆ ಇಂಟೆಲಿಗೋ ಐಡಲ್ ಸ್ಟಾರ್ಟ್/ಸ್ಟಾಪ್ ಕಾರ್ಯವನ್ನು ನೀಡಲಾಗಿದೆ. ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 60 ಕಿಮೀ ಮೈಲೇಜ್ ನೀಡಬಲ್ಲದು. ಇದರ ಬೆಲೆ ಸುಮಾರು 70-85 ಸಾವಿರ ರೂ. (ಎಕ್ಸ್ ಶೋ ರೂಂ) ಇದೆ.

ಇದನ್ನೂ ಓದಿ: Big Update: 8ನೇ ವೇತನ ಆಯೋಗದ ಕುರಿತು ಬಿಗ್ ಅಪ್ಡೇಟ್ ಪ್ರಕಟ, ಮೂಲ ವೇತನ ರೂ.26,000 ವರೆಗೆ ಹೆಚ್ಚಳ!

5. HONDA ACTIVA 6G

ಇದರ ಬೆಲೆ 76,587 ರೂ.ನಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದು 109.51cc, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 55 kmpl ವರೆಗೆ ಮೈಲೇಜ್ ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More