Home> Business
Advertisement

Best Mileage Scooters: ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ... ವರದಿ ಓದಿ

Mileage Scooters: ದೇಶದಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ನಿಮಗೆ ತಿಳಿದಿದೆಯಾ? ಅಥವಾ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಗಳ ಮೈಲೇಜ್ ಎಷ್ಟಿರುತ್ತದೆ  ಎಂಬುದು ತಿಳಿದಿದೆಯಾ? ಇದಕ್ಕೆ ಉತ್ತರ ನಿಮ್ಮ ಬಳಿ ಇಲ್ಲ ಮತ್ತು ನೀವೂ ಕೂಡ ಮುಂಬರುವ ದಿನಗಳಲ್ಲಿ ಸ್ಕೂಟರ್ ಖರೀದಿಸುವ ಯೋಜನೆಯನ್ನು ಹೊಂದಿದ್ದರೆ, ಈ ವಿಷಯ ನಿಮಗೆ ತಿಳಿದಿರುವುದು ತುಂಬಾ ಮುಖ್ಯ.
 

Best Mileage Scooters: ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ... ವರದಿ ಓದಿ

Top Mileage Scooters:  ದೇಶದಲ್ಲಿ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್‌ಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಗೆ ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಮತ್ತು ಮುಂಬರುವ ದಿನಗಳಲ್ಲಿ ಹೊಸ ಸ್ಕೂಟರ್ ಖರೀದಿಸಲು ನೀವು ಯೋಜನೆ ರೂಪಿಸುತ್ತಿದ್ದರೆ, ಲೇಖನ ಕೇವಲ ನಿಮಗಾಗಿ. ಏಕೆಂದರೆ, ಪೆಟ್ರೋಲ್ ಬೆಲೆ ತುಂಬಾ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸ್ಕೂಟರ್ ಹೆಚ್ಚು ಮೈಲೇಜ್ ನೀಡಿದರೆ, ಅದರ ಚಾಲನೆಯ ವೆಚ್ಚವು ಕಡಿಮೆಯಾಗುತ್ತದೆ. ಹೀಗಾಗಿ ಇಂದು ನಾವು ನಿಮಗೆ ಅತ್ಯುತ್ತಮ ಮೈಲೇಜ್ ನೀಡುವ 5 ಸ್ಕೂಟರ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

1. ಯಮಹಾ ಫ್ಯಾಸಿನೊ ಹೈಬ್ರಿಡ್ 125

ಇದು ಸೌಮ್ಯ-ಹೈಬ್ರಿಡ್ ಸೆಟಪ್‌ನೊಂದಿಗೆ ಬರುತ್ತದೆ. ಇದು 68 kmpl ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಸ್ಕೂಟರ್ 125cc ಏರ್ ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 8.2PS/10.3Nm ಪವರ್ ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. Fascino 125 ಬೆಲೆ ರೂ 76,600 ರಿಂದ ರೂ 87,830 ವರೆಗೆ ಇದೆ (ಎಕ್ಸ್ ಶೋ ರೂಂ).

2. ಯಮಹಾ ರೇಜರ್ 125
ಸ್ಪೋರ್ಟಿಯರ್ ಸ್ಕೂಟರ್ ಮೈಲ್ಡ್-ಹೈಬ್ರಿಡ್ ಜೊತೆಗೆ 125cc ಎಂಜಿನ್ ಅನ್ನು ಸಹ ಹೊಂದಿದೆ. ಇದು ಕೂಡ ಸುಮಾರು 68 kmpl ಮೈಲೇಜ್ ಅನ್ನು ಸಹ ನೀಡುತ್ತದೆ. ಇದರ ಬೆಲೆ ರೂ 80,730 ರಿಂದ ರೂ 90,130ವರೆಗೆ  (ಎಕ್ಸ್ ಶೋ ರೂಂ) ಇದೆ. ಇದು ಒಟ್ಟು ಐದು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತದೆ.

3. ಸುಜುಕಿ ಆಕ್ಸೆಸ್  125
ಸುಜುಕಿ ಆಕ್ಸೆಸ್ 125 124cc, ಫ್ಯೂಯೆಲ್-ಇಂಜೆಕ್ಟೆಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಸುಮಾರು 64 kmpl ಮೈಲೇಜ್ ಅನ್ನು ಕೊಡುತ್ತದೆ. ಇದರ ಬೆಲೆ ರೂ 77,600 ರಿಂದ ರೂ 87,200 (ಎಕ್ಸ್ ಶೋ ರೂಂ). ಇದು 5-ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಇದನ್ನೂ ಓದಿ-Business Idea: ಚಳಿಗಾಲದಲ್ಲಿ ಮನೆಯಿಂದಲೇ ಈ ಜಬರ್ದಸ್ತ್ ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ

4.ಟಿವಿಎಸ್ ಜೂಪಿಟರ್
ಟಿವಿಎಸ್ ಜೂಪಿಟರ್ 110 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಇಂಟೆಲಿಗೋ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ನೊಂದಿಗೆ ಬರುತ್ತದೆ. ಈ ಸ್ಕೂಟರ್ ಪ್ರತಿ ಲೀಟರ್ ಗೆ 62 ಕಿಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ ಸುಮಾರು 70 ಸಾವಿರದಿಂದ ಸುಮಾರು 85 ಸಾವಿರದವರೆಗೆ (ಎಕ್ಸ್ ಶೋ ರೂಂ) ಇದೆ.

ಇದನ್ನೂ ಓದಿ-Nitin Gadkari: ದೇಶದ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

5. ಹೋಂಡಾ ಆಕ್ಟಿವಾ 6G
ಹೋಂಡಾ ಆಕ್ಟಿವಾ 6G 109.51cc, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 60 kmpl ವರೆಗೆ ಮೈಲೇಜ್ ನೀಡಬಲ್ಲದು. ಇದರ ಬೆಲೆ ರೂ 73,086 ರಿಂದ ರೂ 76,587 (ಎಕ್ಸ್ ಶೋ ರೂಂ) ವರಗೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More