Home> Business
Advertisement

ಇವರು ಜುಲೈ 31 ರ ನಂತರವೂ ITR ಸಲ್ಲಿಸಬಹುದು !ಆದಾಯ ತೆರಿಗೆ ವಿಭಾಗದ ಮಾಹಿತಿ !

Income Tax Return:ಜುಲೈ 31 ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ, ಆದರೆ ಕೆಲವರಿಗೆ ಮಾತ್ರ ಈ ಗಡುವಿನಿಂದ ವಿನಾಯಿತಿ ನೀಡಲಾಗಿದೆ. 

ಇವರು ಜುಲೈ 31 ರ ನಂತರವೂ ITR ಸಲ್ಲಿಸಬಹುದು !ಆದಾಯ ತೆರಿಗೆ ವಿಭಾಗದ ಮಾಹಿತಿ !

Income Tax Return : ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜುಲೈ 22ರವರೆಗೆ 4 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ.ಕಳೆದ ವರ್ಷ ಜುಲೈ 31ರವರೆಗೆ ಏಳೂವರೆ ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದರು. ಈ ಬಾರಿ ಆದಾಯ ತೆರಿಗೆ ರಿಟರ್ನ್ (ಐಟಿಆರ್ ಫೈಲಿಂಗ್) ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ,  ಆದಾಯಕ್ಕೆ ಅನುಗುಣವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ  ಕೆಲವರಿಗೆ ಮಾತ್ರ ಜುಲೈ 31 ರ ನಂತರವೂ ದಂಡವನ್ನು ಪಾವತಿಸದೆ ಐಟಿಆರ್ ಅನ್ನು ಸಲ್ಲಿಸುವ ಅವಕಾಶವಿದೆ. 

1000 ರೂ.ನಿಂದ 5000 ರೂ.ವರೆಗೆ ದಂಡ : 

ಜುಲೈ 31 ರ ಗಡುವಿನ ನಂತರ ಕೂಡಾ ಐಟಿಆರ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆಯು ಕೆಲವರಿಗೆ ಮಾತ್ರ ಅವಕಾಶ ನೀಡುತ್ತದೆ. ಆದರೆ ನೀವು ವೇತನ  ವರ್ಗಕ್ಕೆ ಸೇರಿದವರಾಗಿದ್ದರೆ ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್  ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ವಿಳಂಬವಾದರೆ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆಯಿದ್ದರೆ, ಟಿಆರ್ ಅನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಹೆಚ್ಚು ಇದ್ದರೆ 5000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ : ಭಾರತದ ನಂತರ ಇದೀಗ ಲಂಡನ್ ನಲ್ಲಿ ಸಂಭ್ರಮ : ಅನಂತ್ ಅಂಬಾನಿ ಮುಂದಿನ ಕಾರ್ಯಕ್ರಮ ಸ್ವರ್ಗದಂಥಹ ಈ ಜಾಗದಲ್ಲಿ !

ಜುಲೈ 31 ರ ನಂತರ ಯಾರು ITR ಅನ್ನು ಸಲ್ಲಿಸಬಹುದು?:
ಉದ್ಯಮಿಗಳು ಅಥವಾ ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಜನರಿಗೆ, ITR ಅನ್ನು ಸಲ್ಲಿಸುವ ದಿನಾಂಕವು ಪ್ರತಿ ವರ್ಷವೂ ವಿಭಿನ್ನವಾಗಿರುತ್ತದೆ. ಇವರಿಗೆ ಐಟಿಆರ್ ಸಲ್ಲಿಸಲು ಅಕ್ಟೋಬರ್ 31 ರವರೆಗೆ ಸಮಯಾವಕಾಶವಿದೆ. ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ಮೂರು ತಿಂಗಳ ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ. ಇದರಿಂದಾಗಿ ಅವರು ಮಾನ್ಯತೆ ಪಡೆದ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಮೂಲಕ ಆಡಿಟ್ ಮಾಡಿಸಬಹುದು. ನಂತರ ಐಟಿಆರ್ ಸಲ್ಲಿಸಬಹುದು.

ಅಕ್ಟೋಬರ್ 31 ರ ನಂತರವೂ ಐಟಿಆರ್ ಸಲ್ಲಿಸುವ ಸೌಲಭ್ಯವಿದೆಯೇ? : 
ಕೆಲವು ರೀತಿಯ ವಹಿವಾಟುಗಳಿಗೆ ಐಟಿಆರ್ ಸಲ್ಲಿಸುವಲ್ಲಿ ವಿನಾಯಿತಿ ನೀಡಲಾಗಿದೆ. ವ್ಯಾಪಾರವು ತನ್ನ ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ವರ್ಗಾವಣೆ ಬೆಲೆ ವರದಿಯನ್ನು ಸಲ್ಲಿಸಬೇಕಾದರೆ, ಅಂತಹ ವ್ಯವಹಾರಕ್ಕೆ ಐಟಿಆರ್ ಸಲ್ಲಿಸಲು ಹೆಚ್ಚುವರಿ ಸಮಯವನ್ನು ನೀಡಲಾಗುತ್ತದೆ.  ಅಂಥವರು ತಮ್ಮ ರಿಟರ್ನ್ಸ್ ಅನ್ನು ನವೆಂಬರ್ 30 ರವರೆಗೆ ಸಲ್ಲಿಸಬಹುದು. ಅಂತರಾಷ್ಟ್ರೀಯ ವಹಿವಾಟುಗಳ ಹೊರತಾಗಿ, ಕೆಲವು ರೀತಿಯ ದೇಶೀಯ ವಹಿವಾಟುಗಳಲ್ಲಿಯೂ ಈ ಸಡಿಲಿಕೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : ಉಳಿತಾಯ ಖಾತೆಯಲ್ಲಿ ಎಫ್‌ಡಿ ಬಡ್ಡಿ ಪಡೆಯಲು ನಿಮ್ಮ ಖಾತೆಗೆ ಇಂದೇ ಸೇರಿಸಿ ಈ ವೈಶಿಷ್ಟ್ಯ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More