Home> Business
Advertisement

Petrol-Diesel ಮೇಲಿನ TAX ಕಡಿಮೆಯಾಗಲ್ಲ, ವಿತ್ತ ಸಚಿವರು ಹೇಳಿದ್ದೇನು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನನಗೆ ತೈಲ ಬಾಂಡ್‌ಗಳ ಮೇಲೆ ಹೊರೆಯಾಗದಿದ್ದರೆ, ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತಿದ್ದೆ. ಹಿಂದಿನ ಸರ್ಕಾರವು ತೈಲ ಬಾಂಡ್‌ಗಳನ್ನು ನೀಡುವ ಮೂಲಕ ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ.

Petrol-Diesel ಮೇಲಿನ TAX ಕಡಿಮೆಯಾಗಲ್ಲ, ವಿತ್ತ ಸಚಿವರು ಹೇಳಿದ್ದೇನು?

ನವದೆಹಲಿ: ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿರುವ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿನ (Petrol Diesel Price) ಇಳಿಕೆಗಾಗಿ ಅಬಕಾರಿ ಸುಂಕವನ್ನು ಕಡಿತಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  (Nirmala Sitharaman) ಸೋಮವಾರ ನಿರಾಕರಿಸಿದರು. ಇದರ ಹಿಂದಿನ ಕಾರಣವನ್ನು ವಿವರಿಸಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ಈ ಇಂಧನಗಳ ಮೇಲೆ ನೀಡಲಾದ ಬೃಹತ್ ಸಬ್ಸಿಡಿಗೆ ಬದಲಾಗಿ ಪಾವತಿ ಮಾಡುವುದರಿಂದ ನಮ್ಮ ಕೈ ಕಟ್ಟಿದಂತಾಗಿದೆ ಎಂದು ಹೇಳಿದರು.

ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದೆ:-

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಸೀಮೆಎಣ್ಣೆಯನ್ನು ಅವುಗಳ ನಿಜವಾದ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಇಂಧನಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡಲು ಕಂಪನಿಗಳಿಗೆ ನೇರ ಸಬ್ಸಿಡಿ ನೀಡುವ ಬದಲು ಅಂದಿನ ಸರ್ಕಾರ 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ಗಳನ್ನು ನೀಡಿತ್ತು. ಆ ಸಮಯದಲ್ಲಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $ 100 ಕ್ಕಿಂತ ಹೆಚ್ಚಿತ್ತು. ಈ ತೈಲ ಬಂಧಗಳು ಈಗ ಪಕ್ವವಾಗುತ್ತಿವೆ. ಸರ್ಕಾರವು ಈ ಬಾಂಡ್‌ಗಳಿಗೆ ಬಡ್ಡಿಯನ್ನೂ ಪಾವತಿಸುತ್ತಿದೆ ಎಂದರು.

ಇದನ್ನೂ ಓದಿ- Jeevan Shanti Policy: LICಯ ಈ ಯೋಜನೆಯಲ್ಲಿ ಕೇವಲ ಒಂದು ಬಾರಿ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪೆನ್ಶನ್

ತೈಲ ಬಾಂಡ್‌ಗಳ ಮೇಲೆ ತುಂಬಾ ಬಡ್ಡಿ:
ನಮ್ಮ ಮೇಲೆ ತೈಲ ಬಾಂಡ್‌ಗಳ ಹೊರೆಯಾಗದಿದ್ದರೆ, ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು (Excise Duty) ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತಿದ್ದೆವು. ಹಿಂದಿನ ಸರ್ಕಾರವು ತೈಲ ಬಾಂಡ್‌ಗಳನ್ನು ನೀಡುವ ಮೂಲಕ ನಮ್ಮ ಕೆಲಸವನ್ನು ಕಷ್ಟಕರವಾಗಿಸಿತು. ಈಗ ನಾವು ತೈಲ ಬೆಲೆಗಳನ್ನು ಕಡಿಮೆ ಮಾಡಲು ಬಯಸಿದರೂ ಅದು ಸಾಧ್ಯವಿಲ್ಲ. ಏಕೆಂದರೆ ನಾವು ತೈಲ ಬಾಂಡ್‌ಗಳಿಗೆ ಬಹಳ ಕಷ್ಟಪಟ್ಟು ಪಾವತಿಸುತ್ತಿದ್ದೇವೆ. 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ಗಳಲ್ಲಿ ಕೇವಲ 3,500 ಕೋಟಿ ರೂ.ಗಳನ್ನು ಮಾತ್ರ ಪಾವತಿಸಲಾಗಿದ್ದು, ಉಳಿದ 1.30 ಲಕ್ಷ ಕೋಟಿಗಳನ್ನು 2025-26 ರೊಳಗೆ ಪಾವತಿಸಬೇಕಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ- PAN Card ಕಳೆದುಹೋದರೆ ಚಿಂತೆ ಬೇಡ, ಈ ವೆಬ್ ಸೈಟ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಬಹುದು

ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ:
ಪ್ರಸಕ್ತ ಹಣಕಾಸು ವರ್ಷ 2021-22 ರಲ್ಲಿ ಸರ್ಕಾರ 10,000 ಕೋಟಿ ರೂ., 2023-24 ರಲ್ಲಿ 31,150 ಕೋಟಿ ಮತ್ತು ಮುಂದಿನ ವರ್ಷ ರೂ 52,860.17 ಕೋಟಿ ಮತ್ತು 2025-26 ರಲ್ಲಿ 36,913 ಕೋಟಿ ರೂಪಾಯಿಗಳನ್ನು ಸರ್ಕಾರ ಪಾವತಿಸಬೇಕಿದೆ ಎಂದು ವಿತ್ತ ಸಚಿವರು ಹೇಳಿದರು. ದೊಡ್ಡ ಮೊತ್ತವು ಬಡ್ಡಿಯನ್ನು ಪಾವತಿಸಲು ಮತ್ತು ಅಸಲು ಮೊತ್ತವನ್ನು ಹಿಂದಿರುಗಿಸಲು ಹೋಗುತ್ತಿದೆ, ಇದು ನಮ್ಮ ಸರ್ಕಾರದ ಮೇಲೆ ಅನಗತ್ಯ ಹೊರೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಗಮನಿಸಬೇಕಾದ ಸಂಗತಿ ಎಂದರೆ ಸರ್ಕಾರವು ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 19.98 ರಿಂದ ರೂ .32.9 ಕ್ಕೆ ಹೆಚ್ಚಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More