Home> Business
Advertisement

ಇನ್ನು ಸಿಗುವುದಿಲ್ಲ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಈ ಸೌಲಭ್ಯ, ತಿಳಿದುಕೊಂಡಿರದಿದ್ದರೆ ನಷ್ಟ ಖಂಡಿತಾ

ಬಯೋಮೆಟ್ರಿಕ್ ಹಾಜರಾತಿ ಕುರಿತು ಎಲ್ಲಾ ಕೇಂದ್ರ ಕಚೇರಿಗಳಲ್ಲಿಯೂ ಅಧಿಸೂಚನೆ ಹೊರಡಿಸಲಾಗಿದೆ.

ಇನ್ನು ಸಿಗುವುದಿಲ್ಲ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಈ ಸೌಲಭ್ಯ,  ತಿಳಿದುಕೊಂಡಿರದಿದ್ದರೆ ನಷ್ಟ ಖಂಡಿತಾ

ನವದೆಹಲಿ : Covid Guidelines: ಸರ್ಕಾರಿ ನೌಕರರು ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದು. ಕೋವಿಡ್ (COVID-19) ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ದೀರ್ಘಕಾಲದಿಂದ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ಈಗ ರದ್ದುಗೊಳಿಸಲಾಗಿದೆ. ಈ ಎಲ್ಲಾ ರಿಯಾಯಿತಿಗಳು  ನವೆಂಬರ್ 8ರಂದೇ ಕೊನೆಗೊಂಡಿವೆ. ಈಗ ಮೊದಲಿನಂತೆ ಸರ್ಕಾರಿ ನೌಕರರು (Government employee) ಪೂರ್ಣಾವಧಿ ಹಾಜರಾತಿಯನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಜರಾತಿ ದಾಖಲಿಸಲು ಬಯೋಮೆಟ್ರಿಕ್ ಹಾಜರಾತಿ (Biometric Attendance) ವ್ಯವಸ್ಥೆಯನ್ನು ಸೋಮವಾರದಿಂದಲೇ ಮತ್ತೆ ಜಾರಿಗೆ ತರಲಾಗಿದೆ.

ಸರಕಾರ ಹೊರಡಿಸಿದೆ  ಆದೇಶ :

ಬಯೋಮೆಟ್ರಿಕ್ ಹಾಜರಾತಿ (Biometric Attendance) ಕುರಿತು ಎಲ್ಲಾ ಕೇಂದ್ರ ಕಚೇರಿಗಳಲ್ಲಿಯೂ ಅಧಿಸೂಚನೆ ಹೊರಡಿಸಲಾಗಿದೆ. 'ಕೊರೊನಾ (Coronavirus) ಸಾಂಕ್ರಾಮಿಕದ ದೃಷ್ಟಿಯಿಂದ, ಕಚೇರಿಗಳಲ್ಲಿ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಕಚೇರಿಗೆ ಕರೆಯಲಾಗುತ್ತಿತ್ತು. ಅಲ್ಲದೆ, ಕೆಲಸದ ಅವಧಿಯನ್ನು ಕೂಡಾ ಕಡಿತಗೊಳಿಸಲಾಗಿತ್ತು.  ಈ ಎಲ್ಲಾ ರಿಯಾಯಿತಿಗಳನ್ನು ಸ್ಥಗಿತಗೊಳಿಸಲಾಗಿದೆ. ನ. 8 ರಿಂದ, ಅಂದರೆ ನಿನ್ನೆಯಿಂದಲೇ ಪ್ರತಿಯೊಬ್ಬ ಉದ್ಯೋಗಿ ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಸಬೇಕು.

ಇದನ್ನೂ ಓದಿ  :   Electric Vehicle: ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಈ ಸರ್ಕಾರದಿಂದ ಸಿಗಲಿದೆ ಭರ್ಜರಿ ಗಿಫ್ಟ್

ಸರ್ಕಾರದ ಆದೇಶದಲ್ಲಿ ಏನಿದೆ ಗೊತ್ತಾ?
-.ಇದಕ್ಕಾಗಿ ಸಂಪೂರ್ಣ ಮಾರ್ಗಸೂಚಿಯನ್ನು (Government guidelines) ಕೇಂದ್ರ ಸರ್ಕಾರ ಹೊರಡಿಸಿದೆ.
- ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಬಯೋಮೆಟ್ರಿಕ್ ಯಂತ್ರದ ಬಳಿ ಸ್ಯಾನಿಟೈಸರ್ (Sanitizer) ಇಡುವುದು ಕಡ್ಡಾಯವಾಗಿದೆ.
- ಹಾಜರಾತಿಯನ್ನು ನೋಂದಾಯಿಸುವ ಮೊದಲು ಮತ್ತು ನಂತರ ಎಲ್ಲಾ ಉದ್ಯೋಗಿಗಳು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
- ಬಯೋಮೆಟ್ರಿಕ್ ಹಾಜರಾತಿಯನ್ನು ನೋಂದಾಯಿಸುವಾಗ ನೌಕರರು ತಮ್ಮ ನಡುವೆ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು.
-ಎಲ್ಲಾ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಮಾಸ್ಕ್ (Mask) ಧರಿಸುವುದು ಕಡ್ಡಾಯವಾಗಿದೆ.
- ಬಯೋಮೆಟ್ರಿಕ್ ಯಂತ್ರದ ಟಚ್‌ಪ್ಯಾಡ್ ಅನ್ನು ಆಗಾಗ್ಗೆ ಸ್ವಚ್ಛಗೊಳಿಸಲು ಸಿಬ್ಬಂದಿಯನ್ನು ನಿಯೋಜಿಸಬೇಕು.
-ಈ ಉದ್ಯೋಗಿಗಳು ತಮ್ಮ ಹಾಜರಾತಿಯನ್ನು ನೋಂದಾಯಿಸಲು ಬರುವ ಉದ್ಯೋಗಿಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು (COVID Guidelines) ತಿಳಿಸುತ್ತಾರೆ.
-ಬಯೋಮೆಟ್ರಿಕ್ ಯಂತ್ರವನ್ನು ತೆರೆದ ವಾತಾವರಣದಲ್ಲಿ ಇಡಬೇಕು.

ಇದನ್ನೂ ಓದಿ : Driving License: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡರೆ ಚಿಂತಿಸಬೇಡಿ, ಆನ್‌ಲೈನ್ ಮೂಲಕ ನಕಲಿ ಡಿಎಲ್‌ಗೆ ಈ ರೀತಿ ಅರ್ಜಿ ಸಲ್ಲಿಸಿ

ಕೇಂದ್ರ ಉದ್ಯೋಗಿಗಳಿಗೆ ಸಿಹಿಸುದ್ದಿ :
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು (DA) ಶೇ.3ರಷ್ಟು ಹೆಚ್ಚಿಸುವುದರ ಜತೆಗೆ ಜುಲೈ ತಿಂಗಳ ಬೋನಸ್ ಕೂಡಾ ನೀಡಲಾಗಿದೆ. ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿಗೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.3ರಷ್ಟು (DA Hike) ಹೆಚ್ಚಿಸಲಾಗಿದೆ. ಅಂದರೆ, ಈಗ ಕೇಂದ್ರ ನೌಕರರ ಮೂಲ ವೇತನದಲ್ಲಿ ಡಿಎ ಶೇ.31ಕ್ಕೆ ಏರಿಕೆಯಾಗಿದೆ. ಹೆಚ್ಚಿದ ಭತ್ಯೆ ಜುಲೈ 1, 2021 ರಿಂದ ಅನ್ವಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More