Home> Business
Advertisement

Salary Hike: ವಾರದಲ್ಲಿ ಕೇವಲ ಮೂರೇ ದಿನ ಆಫಿಸ್ ಕೆಲಸ, ಸಂಬಳ ಕೂಡ ಹೆಚ್ಚಳ!

Salary Hike News: ದೇಶದ ಪ್ರಮುಖ ಐಟಿ ಕಂಪನಿ ಟಿಸಿಎಸ್ (Tata Consultancy Services) ತನ್ನ ಉದ್ಯೋಗಿಗಳನ್ನು ಕಚೇರಿಯಿಂದ ಕಾರ್ಯನಿರ್ವಹಿಸುವ ಕರೆ ನೀಡಲು ಪ್ರಾರಂಭಿಸಿದೆ. ಇದಕ್ಕಾಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಆದೇಶವನ್ನು ಕೂಡ ಜಾರಿಗೊಳಿಸಿದೆ. ಆದೇಶದ ಜೊತೆಗೆ ಕಂಪನಿಯು ತನ್ನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲಿದೆ ಎಂದು ಘೋಷಿಸಿದೆ.
 

Salary Hike: ವಾರದಲ್ಲಿ ಕೇವಲ ಮೂರೇ ದಿನ ಆಫಿಸ್ ಕೆಲಸ, ಸಂಬಳ ಕೂಡ ಹೆಚ್ಚಳ!

ನವದೆಹಲಿ: ರಾಷ್ಟ್ರವ್ಯಾಪಿ ಲಾಕ್‌ಡೌನ್ (Nationwide Lockdown) ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಸಿಸ್ಟಮ್ (Work From Home) ಅನ್ನು ಆರಂಭಿಸಲಾಗಿತ್ತು. ಆದರೆ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ಕರೆ ತರಲು ಆರಂಭಿಸಿವೆ. ಇದೀಗ ಈ ಅನುಕ್ರಮದಲ್ಲಿ ದೇಶದ ಪ್ರಮುಖ ಐಟಿ ಕಂಪನಿ ಟಿಸಿಎಸ್ (Tata Consultancy Services) ಕೂಡ ತನ್ನ ನೌಕರರನ್ನು ಕಚೇರಿಗೆ ಕರೆ ತರಲು ಆದೇಶ ಹೊರಡಿಸಿದೆ.

ಈಗ ಹಿರಿಯರು ಮಾತ್ರ ಕಚೇರಿಗೆ ಹೋಗುತ್ತಾರೆ

ಮಿಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಪ್ರಸ್ತುತ ಎಲ್ಲಾ ಉದ್ಯೋಗಿಗಳನ್ನು ಒಟ್ಟಿಗೆ ಕಚೇರಿಗೆ ಕರೆಯಲಾಗುವುದಿಲ್ಲ ಎಂದು ಕಂಪನಿ ಹೇಳಿದೆ. ಸದ್ಯ ಕಂಪನಿಯ ಉನ್ನತ ಹುದ್ದೆಯಲ್ಲಿರುವ 50,000 ಉದ್ಯೋಗಿಗಳು ಮಾತ್ರ ಕಚೇರಿಗೆ ತೆರಳಲಿದ್ದಾರೆ. ಈ ನೌಕರರು ವಾರದಲ್ಲಿ 3 ದಿನ ಮಾತ್ರ ಕಚೇರಿಗೆ ಹೋಗಬೇಕಾಗುತ್ತದೆ. ಉಳಿದ ಎರಡು ದಿನಗಳ ಕಾಲ ಈ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಬೇಕು.

ಈ ಕುರಿತು ಮಾತನಾಡಿರುವ TCS CEO ಮತ್ತು MD ರಾಜೇಶ್ ಗೋಪಿನಾಥನ್ (Rajesh Gopinathan), “ಈ ತಿಂಗಳಿನಿಂದ ಅಂದರೆ ಏಪ್ರಿಲ್‌ನಿಂದ ಕಂಪನಿಯ ಹಿರಿಯ ಸಹವರ್ತಿಗಳು ಕಚೇರಿಗೆ ಬರಲು ಪ್ರಾರಂಭಿಸುತ್ತಾರೆ. ಕಚೇರಿಗೆ ಕರೆಸಿಕೊಳ್ಳುವ ನೌಕರರ ಸಂಖ್ಯೆಯನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು. ಈ ವರ್ಷದ ಮಧ್ಯಭಾಗದಲ್ಲಿ ಅಂದರೆ ಜೂನ್-ಜುಲೈ ವೇಳೆಗೆ ಬಹುತೇಕ ಉದ್ಯೋಗಿಗಳು (ಶೇ. 80ರಷ್ಟು) ಕಚೇರಿಯಿಂದಲೇ ಕೆಲಸ ಆರಂಭಿಸಲಿದ್ದಾರೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ-Gold Price Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಬೆಳ್ಳಿ ಬೆಲೆಯಲ್ಲಿಯೂ ಕೂಡ ರೂ.1000ಕ್ಕಿಂತ ಹೆಚ್ಚು ಏರಿಕೆ

ಉದ್ಯೋಗಿಗಳ ಸಂಬಳದಲ್ಲಿಯೂ ಕೂಡ ಹೆಚ್ಚಳ
ಪ್ರಸಕ್ತ ಹಣಕಾಸು ವರ್ಷ ಅಂದರೆ 2022-23ರಲ್ಲಿ ಟಿಸಿಎಸ್ ತನ್ನ ಉದ್ಯೋಗಿಗಳ ವೇತನವನ್ನು ಶೇಕಡಾ 6-8 ರಷ್ಟು ಹೆಚ್ಚಿಸಲಿದೆ (TCS Salary Hike) ಎಂದು MD ರಾಜೇಶ್ ಗೋಪಿನಾಥನ್ ಹೇಳಿದ್ದಾರೆ. ಕಳೆದ ವರ್ಷವೂ ಕಂಪನಿಯು ನೌಕರರ ವೇತನವನ್ನು ಹೆಚ್ಚಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Cheapest Postpaid Plan: ಒಂದೇ ರೀಚಾರ್ಜ್ ನಲ್ಲಿ 3 SIM ಚಲಾಯಿಸಿ, 150GB ವರೆಗೆ ಡೇಟಾ

ಹೊಸ ಉದ್ಯೋಗಿಗಳ ನೇಮಕಾತಿ
ಕಳೆದ ಆರ್ಥಿಕ ವರ್ಷದಲ್ಲಿ ಟಿಸಿಎಸ್ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ ಎಂಬುದು ಗಮನಾರ್ಹ. 2021-22ರ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 35,209 ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದು ತ್ರೈಮಾಸಿಕದಲ್ಲಿ ಯಾವುದೇ ಕಂಪನಿಯು ಮಾಡಿದ ಅತ್ಯಧಿಕ ನೇಮಕಾತಿಯಾಗಿದೆ. ಪ್ರಸ್ತುತ, ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 5,92,195 ತಲುಪಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More