Home> Business
Advertisement

ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾದ 2600 ಕೋಟಿ ರೂಪಾಯಿ ಫ್ರೀಜ್ : ಅದಾನಿ ಗ್ರೂಪ್‌ ವಿರುದ್ದ ಹಿಂಡೆನ್‌ಬರ್ಗ್‌ ಮತ್ತೊಂದು ಆರೋಪ

ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ  ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್  ಈ ಆರೋಪವನ್ನು ಮಾಡಿದೆ. 

ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾದ 2600 ಕೋಟಿ ರೂಪಾಯಿ ಫ್ರೀಜ್ : ಅದಾನಿ ಗ್ರೂಪ್‌ ವಿರುದ್ದ ಹಿಂಡೆನ್‌ಬರ್ಗ್‌ ಮತ್ತೊಂದು ಆರೋಪ

ನವದೆಹಲಿ : ಅದಾನಿ-ಹಿಂಡೆನ್‌ಬರ್ಗ್ ವಿವಾದ ಕೊನೆಗೊಳ್ಳುವಂತೆ ಕಾಣುತ್ತಿಲ್ಲ.ಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ಮತ್ತೊಂದು ಗಂಭೀರ ಆರೋಪ ಮಾಡಿದೆ. ಹಿಂಡೆನ್‌ಬರ್ಗ್‌ನ ಇತ್ತೀಚಿನ ಆರೋಪದ ಪ್ರಕಾರ,ಸ್ವಿಸ್ ಬ್ಯಾಂಕ್ ಅದಾನಿಯ ಹಲವು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದೆ. ಸ್ವಿಸ್ ಬ್ಯಾಂಕ್ 31 ಕೋಟಿ ಡಾಲರ್ (ಸುಮಾರು 2600 ಕೋಟಿ ರೂ.)ಗಿಂತ ಹೆಚ್ಚಿನ ಮೊತ್ತವನ್ನು  ಫ್ರೀಜ್ ಮಾಡಿದೆ ಎನ್ನಲಾಗಿದೆ.ಅಲ್ಲದೆ ಈ ವಿಚಾರವಾಗಿ 2021 ರಿಂದ ತನಿಖೆ ನಡೆಯುತ್ತಿದೆ ಎಂದು ಕೂಡಾ ಹೇಳಿದೆ. ಸೆಬಿ ಅಧ್ಯಕ್ಷರ ವಿರುದ್ಧದ ಹಿಂಡೆನ್ ಬರ್ಗ್ ವರದಿ ಸಂಚಲನ ಮೂಡಿಸಿರುವ ಬೆನ್ನಲ್ಲೇ,ಮತ್ತೊಮ್ಮೆ ಅದಾನಿ ಗ್ರೂಪ್  ವಿರುದ್ದ ಗಂಭೀರ ಆರೋಪ ಕೇಳಿ ಬಂದಿದೆ. ಈ ವರದಿಯ ನಂತರ, ಇದೀಗ ಅದಾನಿ ಗ್ರೂಪ್‌ನ ಷೇರುಗಳ ಮೇಲೆ ತೀವ್ರ ನಿಗಾ  ಇಡಲಾಗುತ್ತಿದೆ. 

ಹಿಂಡೆನ್‌ಬರ್ಗ್ ರಿಸರ್ಚ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದೆ.ಇದರಲ್ಲಿ ಅದಾನಿ ಗ್ರೂಪ್ ಗೆ ಸಂಬಂಧಿಸಿದ ಮನಿ  ಲಾಂಡರಿಂಗ್ ಮತ್ತು ಸೆಕ್ಯುರಿಟೀಸ್ ನಲ್ಲಿ ನಡೆದ ವಂಚನೆ ಆರೋಪದ ತನಿಖೆಯ ಹಿನ್ನೆಲೆಯಲ್ಲಿ  ಸ್ವಿಸ್ ಅಧಿಕಾರಿಗಳು 31  ಕೋಟಿ ಡಾಲರ್ ಹಣವನ್ನು ಫ್ರೀಜ್ ಮಾಡಿದ್ದಾರೆ ಎಂದು ಹೇಳಿಕೊಂಡಿದೆ.ಇತ್ತೀಚೆಗೆ ಬಿಡುಗಡೆಯಾದ ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್ ಗ್ರೂಪ್ ಈ ಮಾಹಿತಿಯನ್ನು ನೀಡಿದೆ.ಈ ಪೋಸ್ಟ್ ಪ್ರಕಾರ, ಈ ತನಿಖೆಯು ಸುಮಾರು 3 ವರ್ಷಗಳಿಂದ ಅಂದರೆ 2021 ರಿಂದಲೇ ನಡೆಯುತ್ತಿದೆ. ಇದರಲ್ಲಿ, ಭಾರತೀಯ ಗ್ರೂಪ್ ನೊಂದಿಗೆ ಸಂಪರ್ಕ ಹೊಂದಿದ ಆಫ್ ಶೋರ್ ಫರ್ಮ್ ಗಳ ಹಣಕಾಸು ವಹಿವಾಟುಗಳನ್ನು ಸಹ ಒತ್ತಿ ಹೇಳಲಾಗಿದೆ. 

ಇದನ್ನೂ ಓದಿ : ಬಡವ ಶ್ರೀಮಂತ ಎನ್ನುವ ಭೇದವೇ ಇಲ್ಲ !ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದಿಂದ ಸಿಗಲಿದೆ 5 ಲಕ್ಷವರೆಗಿನ ಧನ ಸಹಾಯ !

ಸ್ವಿಸ್ ಮಾಧ್ಯಮ ವರದಿಗಳ ಉಲ್ಲೇಖ :
ಅದಾನಿ ಸಹವರ್ತಿ (ಫ್ರಂಟ್‌ಮ್ಯಾನ್) BVI/ಮಾರಿಷಸ್ ಮತ್ತು ಬರ್ಮುಡಾದಲ್ಲಿ ಹೂಡಿಕೆ ಮಾಡಿರುವ ಬಗ್ಗೆಯೂ ಪ್ರಾಸಿಕ್ಯೂಟರ್‌ಗಳು ವಿವರಿಸಿದ್ದಾರೆ ಎನ್ನುವ ಸ್ವಿಸ್ ಮಾಧ್ಯಮ ವರದಿಗಳನ್ನು ಕೂಡಾ ಹಿಂಡೆನ್‌ಬರ್ಗ್ ಉಲ್ಲೇಖಿಸಿದೆ.ಈ ನಿಧಿಗಳ ಹೆಚ್ಚಿನ ಹಣವನ್ನು ಅದಾನಿ ಸಮೂಹದ ಷೇರುಗಳಲ್ಲಿ (Adani Group Stocks) ಹೂಡಿಕೆ ಮಾಡಲಾಗಿದೆ ಎನ್ನಲಾಗಿದೆ.ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳಿಂದ ಈ ಮಾಹಿತಿಯನ್ನು ಪಡೆಯಲಾಗಿದೆ.

ಮತ್ತೆ ಸದ್ದು ಮಾಡಿದೆ ಅದಾನಿ-ಹಿಂಡೆನ್‌ಬರ್ಗ್ ವಿವಾದ :
ಅದಾನಿ-ಹಿಂಡೆನ್‌ಬರ್ಗ್ ವಿವಾದ ಕೊನೆಗೊಳ್ಳುವ ಲಕ್ಷಣ ಕಾಣುತ್ತಿಲ್ಲ.ಆಗಸ್ಟ್‌ನಲ್ಲಿಯೇ, ಹಿಂಡೆನ್‌ಬರ್ಗ್ ಹೊಸ ಆರೋಪಗಳನ್ನು ಮಾಡಿತ್ತು.ಅದಾನಿ ಗ್ರೂಪ್  ಟ್ಯಾಕ್ಸ್ ಹೆವನ್ ಮೂಲಕ ಮಾರುಕಟ್ಟೆ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಶಾರ್ಟ್-ಸೆಲ್ಲರ್‌ 2023ರ ಆರಂಭದಲ್ಲಿ ಆರೋಪಿಸಿತ್ತು. ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಆಫ್ ಶೋರ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್  ಆರೋಪಿಸಿತ್ತು. 

ಇದನ್ನೂ ಓದಿ : ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಅಪ್ಲೈ ಮಾಡಿದ್ರೆ ತಿಂಗಳಿಗೆ ಖಾತೆ ಸೇರುತ್ತೆ 3000 ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More