Home> Business
Advertisement

Stock Market: 1158 ಅಂಕಗಳಿಂದ ಕುಸಿದ ಸೆನ್ಸೆಕ್ಸ್, ಹೂಡಿಕೆದಾರರ 5 ಲಕ್ಷ ಕೋಟಿ ರೂ. ಸ್ವಾಹಾ

Stock Market - ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭಾರಿ ಕುಸಿತ ಕಂಡುಬಂದಿದೆ. 30 ಅಂಕಗಳ ಸೆನ್ಸೆಕ್ಸ್ 950ಕ್ಕೂ ಹೆಚ್ಚು ಅಂಕಗಳಿಂದ ಕುಸಿತ ದಾಖಲಿಸಿದೆ. ಇನ್ನೊಂದೆಡೆ 50 ಅಂಕಗಳ ನಿಫ್ಟಿ-ಫಿಫ್ಟಿ, ಕೂಡ 15,808 ಅಂಕಗಲಿಗಿಂತಲೂ ಕೆಳಕ್ಕೆ ಜಾರಿದೆ.ಹಾಗಾದರೆ ಇಂದಿನ ಟಾಪ್ ಗೆನರ್ ಹಾಗೂ ಟಾಪ್ ಲೂಸರ್ ಷೇರುಗಳಾವುವು ತಿಳಿದುಕೊಳ್ಳೋಣ ಬನ್ನಿ,
 

Stock Market: 1158 ಅಂಕಗಳಿಂದ ಕುಸಿದ ಸೆನ್ಸೆಕ್ಸ್, ಹೂಡಿಕೆದಾರರ 5 ಲಕ್ಷ ಕೋಟಿ ರೂ. ಸ್ವಾಹಾ

Stock Market Update Today: ಜಾಗತಿಕ ಮಾರುಕಟ್ಟೆಯಿಂದ ದೊರೆಯುತ್ತಿರುವ ಕೆಟ್ಟ ಸಂಕೇತಗಳ ನಡುವೆ ಇಂದೂ ಕೂಡ ಭಾರತೀಯ ಷೇರು ಮಾರುಕಟ್ಟೆ ಮಕಾಡೆ ಮಲಗಿ ಹೋಗಿದೆ. ಮಾರುಕಟ್ಟೆಯಲ್ಲಿ ನಾಲ್ಕು ದಿಕ್ಕುಗಳಲ್ಲಿ ಬಿಕವಾಲಿ ಅಥವಾ ಮಾರಾಟದ ವಾತಾವರಣ ಮುಂದುವರೆದಿದೆ. ಒಂದೆಡೆ ಸೆನ್ಸೆಕ್ಸ್ 1158 ಅಂಕಗಳಿಂದ ಕುಸಿದರೆ, ಇನ್ನೊಂದೆಡೆ ನಿಫ್ಟಿ ಕೂಡ 15,808 ಅಂಕಗಳಿಗೆ ಬಂದು ನಿಂತಿದೆ. ಬಿಎಸ್ಇಯಲ್ಲಿ ಪಟ್ಟಿ ಮಾಡಲಾಗಿರುವ ಕಂಪನಿಗಳ ಮಾರ್ಕೆಟ್ ಕ್ಯಾಪ್ 4.5 ಲಕ್ಷ ಕೋಟಿಗಿಂತಲೂ ಹೆಚ್ಚು ಕುಸಿದಿದೆ. ಈ ಬಿಕವಾಲಿ ವಾತಾವರಣದ ಹಿನ್ನೆಲೆ ಹೂಡಿಕೆದಾರರಿಗೆ ಭಾರಿ ನಷ್ಟ ಉಂಟಾಗಿದೆ. 

ಇದನ್ನೂ ಓದಿ-PPF ಯೋಜನೆಯಲ್ಲಿ ₹1,000 ಹೂಡಿಕೆ ಮಾಡಿ ₹18 ಲಕ್ಷಕ್ಕಿಂತ ಹೆಚ್ಚು ಲಾಭ ಪಡೆಯಿರಿ! 

ಇಲ್ಲಿವೆ ಟಾಪ್ ಗೆನರ್ ಹಾಗೂ ಟಾಪ್ ಲೂಸರ್ ಷೇರುಗಳು
ಮಾರುಕಟ್ಟೆಯಲ್ಲಿನ ಇಂದಿನ ಟಾಪ್ ಗೆನರ್ ಹಾಗೂ ಕಳಪೆ ಪ್ರದರ್ಶನ ನೀಡದ ಷೇರುಗಳ ಕುರಿತು ಹೇಳುವುದಾದರೆ, ಆಟೋ, ಐಟಿ, ಎಫ್‌ಎಂಸಿಜಿ ಮತ್ತು ರಿಯಾಲ್ಟಿ ಷೇರುಗಳು ಭಾರಿ ಕುಸಿತ ಅನುಭವಿಸಿವೆ. ಅವು ಶೇಕಡಾ 1 ಕ್ಕಿಂತ ಹೆಚ್ಚು ಅಂಕಗಳಿಂದ ಕುಸಿದಿವೆ. ಇಂದು ಸೆನ್ಸೆಕ್ಸ್ 1158 ಅಂಕಗಳ ಕುಸಿತದೊಂದಿಗೆ 52,930 ಕ್ಕೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ, ನಿಫ್ಟಿ ಕೂಡ 359 ರ ಕುಸಿತದೊಂದಿಗೆ 15,808 ಕ್ಕೆ ತಲುಪಿದೆ. ಅಷ್ಟೇ ಅಲ್ಲ, ಸೆನ್ಸೆಕ್ಸ್ ನ ಒಟ್ಟು 30 ಷೇರುಗಳ ಪೈಕಿ 29 ಷೇರುಗಳು ಕೆಂಪು ನಿಶಾನೆಯಲ್ಲಿ ವ್ಯವಹರಿಸಿವೆ ಎಂಬ ಅಂಶದಿಂದ ನೀವು ಹೂಡಿಕೆದಾರರ ನಷ್ಟವನ್ನು ಅಂದಾಜಿಸಬಹುದು. ಬಜಾಜ್ ಟ್ವಿನ್ಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹೊರತುಪಡಿಸಿ, ಟಾಪ್ ಲೂಸರ್‌ಗಳಲ್ಲಿ ಎಂ & ಎಂ, ಟಾಟಾಸ್ಟೀಲ್ ಮತ್ತು ಡ್ರೆಡ್ಡಿ ಶಾಮೀಲಾಗಿವೆ.

ಇದನ್ನೂ ಓದಿ-DL New Rules : ವೈಯಕ್ತಿಕ, ವಾಣಿಜ್ಯ 'ಡ್ರೈವಿಂಗ್ ಲೈಸೆನ್ಸ್'ಗೆ ಜಾರಿಯಗಲಿವೆ ಹೊಸ ನಿಯಮಗಳು!

ಜಾಗತಿಕ ಮಾರುಕಟ್ಟೆಯಲ್ಲಿಯೂ ಕೂಡ ಭಾರಿ ಕುಸಿತ
ಜಾಗತಿಕ ಮಾರುಕಟ್ಟೆಯ ಕುರಿತು ಹೇಳುವುದಾದರೆ, ಏಷ್ಯಾ ಖಂಡದ ಪ್ರಮುಖ ಮಾರುಕಟ್ಟೆಗಳಲ್ಲಿಯೂ ಕೂಡ ಭಾರಿ ಕುಸಿತ ಗಮನಿಸಲಾಗಿದೆ. ಬುಧವಾರವೂ ಕೂಡ ಅಮೇರಿಕಾದ ಮಾರುಕಟ್ಟೆ ಭಾರಿ ಕುಸಿತದೊಂದಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ. ಬ್ರೆಂಟ್ ಕ್ರೂಡ್  ಮಾಮೂಲಿ ಮೃದುತ್ವದ ಕಾರಣ 108 ಡಾಲರ್ ಪ್ರತಿ ಬ್ಯಾರೆಲ್ ಮಾರಾಟ ಕಂಡಿದೆ. ಇನ್ನೊಂದೆಡೆ ಅಮೇರಿಕಾ ಕ್ರೂಡ್ ಕೂಡ 106 ಡಾಲರ್ ಪ್ರತಿ ಬ್ಯಾರೆಲ್ ನಲ್ಲಿ ವ್ಯವಹರಿಸಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More