Home> Business
Advertisement

Share Market Update: ವಾರಾಂತ್ಯ ಮುಕ್ತಾಯದ ದಿನದಂದು ಸೆನ್ಸೆಕ್ಸ್-ನಿಫ್ಟಿಯಲ್ಲಿ ಭಾರಿ ಕುಸಿತ

Share Market Update: ಇಂದು ಮುಂಬೈ ಹಾಗೂ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿತ ಮೇಲುಗೈ ಸಾಧಿಸಿದೆ . ಬಿಎಸ್‌ಇಯ 30 ಷೇರುಗಳ ಸೂಚ್ಯಂಕ ಸೆನ್ಸೆಕ್ಸ್ 310.88 ಅಂಕಗಳಿಂದ ಅಥವಾ ಶೇ.0.49 ಕುಸಿದು 62,917.63 ಕ್ಕೆ ತಲುಪಿದೆ. ವಹಿವಾಟಿನ ವೇಳೆ ಒಂದು ಹಂತದಲ್ಲಿ ಈ ಕುಸಿತ 357.43 ಅಂಕಗಳಷ್ಟಾಗಿತ್ತು.
 

Share Market Update: ವಾರಾಂತ್ಯ ಮುಕ್ತಾಯದ ದಿನದಂದು ಸೆನ್ಸೆಕ್ಸ್-ನಿಫ್ಟಿಯಲ್ಲಿ ಭಾರಿ ಕುಸಿತ

Stock Market Update: ಇಂದು ಷೇರುಪೇಟೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ವಾರದ ಮುಕ್ತಾಯದ ದಿನದಂದು ಸೆನ್ಸೆಕ್ಸ್ 300 ಅಂಕಗಳಿಗಿಂತ ಹೆಚ್ಚು ಅಂಕಗಳಿಂದ ಕುಸಿದಿದೆ. ಅಮೆರಿಕದಲ್ಲಿ ಫೆಡ್ ರಿಸರ್ವ್ ತೆಗೆದುಕೊಂಡ ನಿರ್ಧಾರದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಕಂಡು ಬಂದಿದೆ. ಬ್ಯಾಂಕಿಂಗ್, ಐಟಿ ವಲಯ ಮತ್ತು ಹಣಕಾಸು ಷೇರುಗಳಲ್ಲಿ ಹೂಡಿಕೆದಾರರು ಲಾಭದ ಬುಕಿಂಗ್ ಮಾಡಿದ ಪರಿಣಾಮ ಮಾರುಕಟ್ಟೆಯಲ್ಲಿಯೂ ಕಂಡುಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ  ಕುಸಿತ ಮೇಲುಗೈ ಸಾಧಿಸಿದೆ.

ಸೆನ್ಸೆಕ್ಸ್ 310 ಅಂಕಗಳಿಂದ ಕುಸಿದಿದೆ
ಯುರೋಪಿಯನ್ ಮಾರುಕಟ್ಟೆಗಳಲ್ಲಿ ದುರ್ಬಲ ಆರಂಭಿಕ ವಹಿವಾಟು ಮತ್ತು ರೂಪಾಯಿ ನಷ್ಟವು ಹೂಡಿಕೆದಾರರ ಭೀತಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿತರಕರು ತಿಳಿಸಿದ್ದಾರೆ. ಬಿಎಸ್‌ಇಯ 30 ಷೇರುಗಳ ಸೂಚ್ಯಂಕವಾಗಿರುವ ಸೆನ್ಸೆಕ್ಸ್ 310.88 ಪಾಯಿಂಟ್‌ಗಳು ಅಥವಾ ಶೇ.0.49 ರಷ್ಟು ಕುಸಿದು 62,917.63 ಕ್ಕೆ ತಲುಪಿದೆ. ವಹಿವಾಟಿನ ವೇಳೆ ಒಂದು ಹಂತದಲ್ಲಿ ಈ ಕುಸಿತ 357.43 ಅಂಕಗಳಷ್ಟಿತ್ತು. 

ನಿಫ್ಟಿ ಎಷ್ಟು ಅಂಕಗಳಿಂದ ಕುಸಿದಿದೆ
ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 67.80 ಪಾಯಿಂಟ್ ಅಥವಾ ಶೇ.0.36 ರಷ್ಟು ಕುಸಿತದೊಂದಿಗೆ 18,688.10 ಕ್ಕೆ ತನ್ನ ವಹಿವಾಟನ್ನು ಅಂತ್ಯಗೊಳಿಸಿದೆ. ಇದಕ್ಕೂ ಮುನ್ನ ಸತತ ಮೂರು ವಹಿವಾಟು ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ.

ವಿಪ್ರೋ ಷೇರುಗಳು ಶೇಕಡಾ 2ರಷ್ಟು ಕುಸಿದಿವೆ
ಸೆನ್ಸೆಕ್ಸ್ ಕಂಪನಿಗಳಲ್ಲಿ ವಿಪ್ರೋ ಗರಿಷ್ಠ ಅಂದರೆ ಶೇ.2 ರಷ್ಟು ನಷ್ಟವನ್ನು ಅನುಭವಿಸಿದೆ. ಇದಲ್ಲದೆ, ಇಂಡಸ್‌ಇಂಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಡಿಎಫ್‌ಸಿ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಸಹ ಕುಸಿತ ಕಂಡಿವೆ.

ಹಾಗಾದರೆ ಯಾವ ಷೇರುಗಳು ಲಾಭ ಗಳಿಸಿವೆ
ಮತ್ತೊಂದೆಡೆ, ನೆಸ್ಲೆ, ಮಹೀಂದ್ರಾ ಮತ್ತು ಮಹೀಂದ್ರಾ, ಐಟಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಏಷ್ಯನ್ ಪೇಂಟ್ಸ್ ಮತ್ತು ಮಾರುತಿ ಸುಜುಕಿ ಲಾಭ ಗಳಿಸಿವೆ.

ಜಾಗತಿಕ ಮಾರುಕಟ್ಟೆಯ ಸ್ಥಿತಿಗತಿ ಹೇಗಿತ್ತು? 
ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ, ದಕ್ಷಿಣ ಕೊರಿಯಾದ ಕಾಸ್ಪಿ ಮತ್ತು ಜಪಾನ್‌ನ ನಿಕ್ಕೆ ಕುಸಿತದೊಂದಿಗೆ ತಮ್ಮ ತಮ್ಮ ವಹಿವಾಟುಗಳನ್ನು ಅಂತ್ಯಗೊಳಿಸಿದರೆ,  ಚೀನಾದ ಶಾಂಘೈ ಕಾಂಪೋಸಿಟ್ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆಗಳು ಏರಿಕೆಯನ್ನು ಮುಂದುವರೆಸಿವೆ. ಯುರೋಪಿನ ಮಾರುಕಟ್ಟೆಗಳಲ್ಲಿ ಮಿಶ್ರ ವ್ಯಾಪಾರವಿತ್ತು. ಬುಧವಾರ, ಅಮೆರಿಕದ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ.

ಇದನ್ನೂ ಓದಿ-Britain ನ ಪ್ರತಿಷ್ಠಿತ 'ವರ್ಷದ ಗವರ್ನರ್ 2023' ಪ್ರಶಸ್ತಿಗೆ ಭಾಜನರಾದ ಶಕ್ತಿಕಾಂತ ದಾಸ್

ಫೆಡ್ ರಿಸರ್ವ್ ಯಾವ ನಿರ್ಧಾರವನ್ನು ತೆಗೆದುಕೊಂಡಿದೆ?
ಯುಎಸ್ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ಸತತವಾಗಿ 10 ಬಾರಿ ಪಾಲಿಸಿ ಬಡ್ಡಿದರವನ್ನು ಹೆಚ್ಚಿಸಿದ ನಂತರ ಬುಧವಾರ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದಾಗ್ಯೂ, ಫೆಡರಲ್ ರಿಸರ್ವ್ ಈ ವರ್ಷ ಎರಡು ಬಾರಿ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂದು ಸೂಚಿಸಿದೆ. ಏತನ್ಮಧ್ಯೆ, ಅಂತರರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.0.97 ರಷ್ಟು ಏರಿಕೆಯಾಗಿ $ 73.91 ಕ್ಕೆ ತಲುಪಿದೆ.

ಇದನ್ನೂ ಓದಿ-Hero ಧಮಾಕಾ! 160 ಸಿಸಿ ಸ್ಟೈಲಿಶ್ ಬೈಕ್ ಬಿಡುಗಡೆ ಮಾಡಿದ ಹೀರೋ

ಎಫ್‌ಐಐಗಳು ಹೂಡಿಕೆ ಮುಂದುವರಿಸಿವೆ
ಷೇರು ಮಾರುಕಟ್ಟೆಯಿಂದ ಬಂದ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಭಾರತೀಯ ಮಾರುಕಟ್ಟೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಮುಂದುವರೆಸಿದ್ದಾರೆ. ಅವರು ಬುಧವಾರ 1,714.72 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬುಧವಾರ, ಸೆನ್ಸೆಕ್ಸ್ 85.35 ಅಂಕಗಳು ಅಥವಾ ಶೇಕಡಾ 0.14 ರಷ್ಟು ಏರಿಕೆಯಾಗಿ 63,228.51 ಕ್ಕೆ ತಲುಪಿದರೆ, ನಿಫ್ಟಿ 39.75 ಪಾಯಿಂಟ್ ಅಥವಾ ಶೇ. 0.21 ರಷ್ಟು ಏರಿಕೆಯಾಗಿ 18,755.90 ಕ್ಕೆ ತಲುಪಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More