Home> Business
Advertisement

Stock Market Before Budget 2022: ಷೇರು ಮಾರುಕಟ್ಟೆಯಲ್ಲಿ ಭಾರಿ ಗೂಳಿ ಜಿಗಿತ, ಸೆನ್ಸೆಕ್ಸ್ 590 ಅಂಕಗಳ ಏರಿಕೆಯೊಂದಿಗೆ ಆರಂಭ

Stock Market Opening:  ಬಜೆಟ್‌ ಮಂಡನೆಗೂ ಮುನ್ನವೇ ಷೇರುಪೇಟೆ (Bombay Stock Exchange) ಭರ್ಜರಿ ಏರಿಕೆಯೊಂದಿಗೆ ತೆರೆದುಕೊಂಡಿದೆ. ಇದರೊಂದಿಗೆ ಷೇರುಪೇಟೆಯ ನಿರೀಕ್ಷೆಗಳು ಬಜೆಟ್‌ನಿಂದ ಹೆಚ್ಚಿವೆ.

Stock Market Before Budget 2022: ಷೇರು ಮಾರುಕಟ್ಟೆಯಲ್ಲಿ ಭಾರಿ  ಗೂಳಿ ಜಿಗಿತ, ಸೆನ್ಸೆಕ್ಸ್ 590 ಅಂಕಗಳ ಏರಿಕೆಯೊಂದಿಗೆ ಆರಂಭ

Stock Market Before Budget: ಭಾರಿ ವೇಗದೊಂದಿಗೆ ಇಂದು ಷೇರು ಮಾರುಕಟ್ಟೆ ತನ್ನ ದಿನದ ವಹಿವಾಟನ್ನು ಆರಂಭಿಸಿದೆ. ಇಂದು ಬೆಳಗ್ಗೆ 11 ಗಂಟೆಗೆ ವರ್ಷ 2022-23ನೇ ಸಾಲಿನ ಆರ್ಥಿಕ ಅಯವ್ಯಯ (Budget 2022-23) ಮಂಡನೆಯಾಗಲಿದೆ. ಈ ಹಿನ್ನೆಲೆ ಷೇರು ಮಾರುಕಟ್ಟೆಯಲ್ಲಿ ಭಾರಿ ವೇಗ ಕಂಡುಬರುತ್ತಿದೆ. ಸೆನ್ಸೆಕ್ಸ್ ಸೂಚಂಕ 500 ಅಂಕಗಳಿಗೂ ಹೆಚ್ಚು ಅಂಕಗಳಿಂದ ತನ್ನ ದಿನದ ವಹಿವಾಟು ಆರಂಭಿಸಿದೆ.

ಮಾರುಕಟ್ಟೆ ಹೇಗೆ ತೆರೆದುಕೊಂಡಿದೆ?

ಇಂದಿನ ವಹಿವಾಟಿನ ಆರಂಭದಲ್ಲಿ, ಸೆನ್ಸೆಕ್ಸ್ (Sensex) ಆರಂಭಿಕ ನಿಮಿಷದಲ್ಲಿಯೇ 590.02 ಪಾಯಿಂಟ್ ಅಥವಾ ಶೇ.1.02 ಜಿಗಿತದೊಂದಿಗೆ 58,604.19 ನಲ್ಲಿ ತೆರೆದುಕೊಂಡಿದೆ. ಇದಲ್ಲದೇ, ನಿಫ್ಟಿ (Nifty 50) ಕೂಡ 189 ಅಂಕಗಳ ಜಿಗಿತದ ನಂತರ 17529 ಮಟ್ಟದಲ್ಲಿ ತನ್ನ ವ್ಯಾಪಾರ ಆರಂಭಿಸಿದೆ.

ಇದನ್ನೂ ಓದಿ- ಕೇಂದ್ರ ಬಜೆಟ್‌ನ ಸಂಪೂರ್ಣ ಮಾಹಿತಿ ಒದಗಿಸುತ್ತೆ ಈ ಅಪ್ಲಿಕೇಶನ್‌, ಅದನ್ನು ಈ ರೀತಿ ಡೌನ್‌ಲೋಡ್ ಮಾಡಿ

NIFTY ಸ್ಥಿತಿ ಹೇಗಿದೆ?
ಇಂದಿನ ವಹಿವಾಟಿನಲ್ಲಿನಿಫ್ಟಿಯ 50ಯ 50 ಷೇರುಗಳ ಪೈಕಿ 42 ಷೇರುಗಳು ವೇಗವಾಗಿ ವಹಿವಾಟು ನಡೆಸುತ್ತಿದ್ದು, 8 ಷೇರುಗಳು ಮಾತ್ರ ಕುಸಿತ ಕಾಣುತ್ತಿವೆ. ಇದಲ್ಲದೇ ಬ್ಯಾಂಕ್ ನಿಫ್ಟಿ ಕೂಡ ಏರಿಕೆ ಕಾಣುತ್ತಿದೆ. ಇದರಲ್ಲಿ 570 ಅಂಕಗಳ ಭಾರಿ  ಜಿಗಿತ ಕಾಣುತ್ತಿದೆ. ಬ್ಯಾಂಕ್ ನಿಫ್ಟಿ 38,500 ದಾಟಿದೆ. ಬ್ಯಾಂಕ್ ನಿಫ್ಟಿಯ 12 ರಲ್ಲಿ 11 ಷೇರುಗಳು ಹಸಿರು ನಿಶಾನೆಯಲ್ಲಿ ವಹಿವಾಟು ಮುಂದುವರೆಸಿವೆ.

ಇದನ್ನೂ ಓದಿ-ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಈ ಬಾರಿಯ ಬಜೆಟ್ ನಿಂದ ಸ್ಟಾಕ್ ಮಾರ್ಕೆಟ್ ನಿರೀಕ್ಷೆಗಳೇನು?
ಈ ಬಾರಿಯ ಬಜೆಟ್ ನಿಂದ ಷೇರು ಮಾರುಕಟ್ಟೆ ಸಾಕಷ್ಟು ನಿರೀಕ್ಷೆ ಹೊಂದಿದೆ. ಅದರಲ್ಲೂ ವಿಶೇಷವಾಗಿ ಸೆಕ್ಯೂರಿಟಿ ಟ್ರಾನ್ಸಾಕ್ಶನ್ ಟ್ಯಾಕ್ ಅಂದರೆ STTನಲ್ಲಿ ಕಡಿತ ನಿರೀಕ್ಷಿಸಲಾಗಿದೆ. ಇದಲ್ಲದೆ ಹೂಡಿಕೆದಾರರ ಬಂಡವಾಳ ಹೆಚ್ಚಿಸಲು ಸರಕಾರದಿಂದ ಕೊಂಚ ನೆಮ್ಮದಿ ನಿರೀಕ್ಷಿಸಲಾಗಿದೆ. ಷೇರುಪೇಟೆಯಲ್ಲಿ ವಿಧಿಸಲಾಗುವ ಬಂಡವಾಳ ಲಾಭದ ತೆರಿಗೆಯಿಂದ ಸರ್ಕಾರ ಸ್ವಲ್ಪ ಪರಿಹಾರ ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-Budget 2022 : ಬಜೆಟ್ ನತ್ತ ಎಲ್ಲರ ಚಿತ್ತ, ಬಜೆಟ್ ನಂತರ ಯಾವ ವಸ್ತುಗಳು ಆಗಲಿವೆ ಅಗ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More