Home> Business
Advertisement

State Bank Of India: ಕೊರೊನಾ ಕಾಲದಲ್ಲಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ SBI

State Bank Of India: ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಜುಲೈ 1 ರಿಂದ ಬಿಗ್ ಶಾಕ್ ಸಿಗಲಿದೆ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD)ಖಾತೆದಾರರಿಗೆ ಜುಲೈ 1, 2021 ರಿಂದ ನೂತನ ಸೇವಾ ಶುಲ್ಕಗಳನ್ನು ಜಾರಿಗೊಳಿಸುತ್ತಿದೆ. 

State Bank Of India: ಕೊರೊನಾ ಕಾಲದಲ್ಲಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ SBI

State Bank Of India: ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಜುಲೈ 1 ರಿಂದ ಬಿಗ್ ಶಾಕ್ ಸಿಗಲಿದೆ. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (BSBD)ಖಾತೆದಾರರಿಗೆ ಜುಲೈ 1, 2021 ರಿಂದ ನೂತನ ಸೇವಾ ಶುಲ್ಕಗಳನ್ನು ಜಾರಿಗೊಳಿಸುತ್ತಿದೆ. ATM ಗಳಿಂದ ಹಣ ಹಿಂಪಡೆಯುವಿಕೆ, ಚೆಕ್ ಬುಕ್, ಹಣವರ್ಗಾವನೆ ಹಾಗೂ ಹಣಕಾಸು ರಹಿತ ವಹಿವಾಟುಗಳ ಮೇಲೆ ಸೇವಾ ಶುಲ್ಕವನ್ನು ಹೆಚ್ಚಿಸುವ ನಿರ್ಣಯ ಕೈಗೊಂಡಿದೆ. ಈ ಮಾಹಿತಿಯನ್ನು ಬ್ಯಾಂಕ್ ತನ್ನ ವೆಬ್ ಸೈಟ್ ಮೇಲೆ ನೀಡಿದೆ. ಹಾಗಾದರೆ ಬನ್ನಿ ಈ ಹೊಸ ಶುಲ್ಕಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

SBI ಬ್ರಾಂಚ್ ನಿಂದ ಹಣ ಹಿಂಪಡೆಯುವಿಕೆ

ಒಂದು ವೇಳೆ ಯಾವುದೇ ಗ್ರಾಹಕರು ಒಂದು ತಿಂಗಳಲ್ಲಿ 4 ಬಾರಿಗಿಂತ ಹೆಚ್ಚು ಬಾರಿ ಹಣ ವಿಥ್ ಡ್ರಾ ಮಾಡಿದರೆ, ಅವರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುವುದು. ಈ ವಹಿವಾಟುಗಳಲ್ಲಿ ATM ವಹಿವಾಟುಗಳು ಕೂಡ ಶಾಮೀಲಾಗಿವೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಒಂದು ವೇಳೆ ನೀವು SBI ಶಾಖೆಯಿಂದ ಅಥವಾ ATM ಗಳಿಂದ ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ವಿಥ್ ಡ್ರಾ ಮಾಡಿದರೆ, ನೀವು ರೂ.15+GST ಪಾವತಿಸಬೇಕು. ಈ ಶುಲ್ಕ ಪ್ರತಿ ಹೆಚ್ಚುವರಿ ವಹಿವಾಟಿಗೆ ವಿಧಿಸಲಾಗುವುದು.

ATM ಗಳಲ್ಲಿಯೂ ಕೂಡ 4 ಬಾರಿ ಮಿತಿ
ಬಿಎಸಬಿಡಿ ಗ್ರಾಹಕರು SBI ATM ಹಾಗೂ SBIಯೇತರ ATMಗಳಲ್ಲಿ ನಾಲ್ಕು ಬಾರಿಗಿಂತ ಹೆಚ್ಚು ಬಾರಿಗೆ ಹಣ ಹಿಂಪಡೆದರೆ, ಅವರಿಗೂ ಕೂಡ ಈ ಸೇವಾ ಶುಲ್ಕ ಅನ್ವಯವಾಗಲಿದೆ. ಇದು ಕೂಡ ರೂ.15 + GST ಆಗಿರಲಿದೆ.

ಚೆಕ್ ಬುಕ್ ಗಾಗಿ ಕೂಡ ಶುಲ್ಕ ಪಾವತಿಸಬೇಕು
ಭಾರತೀಯ ಸ್ಟೇಟ್ ಬ್ಯಾಂಕ್ BSBD ಗ್ರಾಹಕರಿಂದ 10 ಚೆಕ್ ಬುಕ್ ಗಳವರೆಗೆ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಆದರೆ, 10ಕ್ಕಿಂತ ಹೆಚ್ಚು ಚೆಕ್ ಬುಕ್ ಗಳನ್ನು ಪಡೆದರೆ ಪ್ರತಿ ಚೆಕ್ ಬುಕ್ ಗೆ ರೂ.40 +GST ಪಾವತಿಸಬೇಕು. ಇನ್ನೊಂದೆಡೆ 25 ಚೆಕ್ ಗಳಿರುವ ಚೆಕ್ ಬುಕ್ ಗಾಗಿ ರೂ.75 ಹಾಗೂ ಎಮರ್ಜೆನ್ಸಿ ಚೆಕ್ ಬುಕ್ ಗಳಿಗೆ ರೂ.50 ಪಾವತಿಸಬೇಕು. ಇವುಗಳಿಗೆ GST ಪ್ರತ್ಯೇಕವಾಗಿ ಪಾವತಿಸಬೇಕು. ಹಿರಿಯ ನಾಗರಿಕರಿಗೆ ಇದರಿಂದ ಹೊರಗಿಡಲಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ- SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ

ಏನಿದು SBI BSBD Account?
ಸರಳ ಭಾಷೆಯಲ್ಲಿ BSBD ಖಾತೆಗಳನ್ನು ಝೀರೋ ಬ್ಯಾಲೆನ್ಸ್ ಖಾತೆ ಎಂದು ಕರೆಯಲಾಗುತ್ತದೆ. ಈ ಉಳಿತಾಯ ಖಾತೆಯ ಹಲವು ವಿಶೇಷತೆಗಳಿವೆ. ಈ ಖಾತೆಗಳಿಗೆ SBIನ ಸಾಮಾನ್ಯ ಉಳಿತಾಯ ಖಾತೆಗಳಿಗೆ ಸಿಗುವ ಬಡ್ಡಿ ಸಿಗುತ್ತದೆ. ಇದರ ಜೊತೆಗೆ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗಿಂತ ಹೆಚ್ಚಿನ ವಿಶೇಷ ಸವಲತ್ತುಗಳನ್ನು ಈ ಖಾತೆಗಳಿಗೆ ನೀಡಲಾಗುತ್ತದೆ. ಈ ಖಾತೆಗಳಲ್ಲಿ ಗ್ರಾಹಕರು ಕನಿಷ್ಠ ಠೇವಣಿ ಕಾಪಾಡಬೇಕಾಗಿಲ್ಲ. ಉಚಿತ ATM ಅಥವಾ ಡೆಬಿಟ್ ಕಾರ್ಡ್ ಹಾಗೂ ಅತ್ಯಧಿಕ ಬ್ಯಾಲೆನ್ಸ್ ಮಿತಿ ಇವುಗಳಿಗೆ ಇರುವುದಿಲ್ಲ.

ಇದನ್ನೂ ಓದಿ-Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ

BSBD ಖಾತೆಯನ್ನು ಯಾರು ತೆರೆಯಬಹುದು?
SBI BSBD ಖಾತೆಯನ್ನು SBI Net Banking ಅಥವಾ SBI Online ಮೂಲಕ KYC ಔಪಚಾರಿಕತೆಯನ್ನು ಪೂರ್ಣಗೊಳಿಸುವ ಮೂಲಕ ತೆರೆಯಬಹುದು. ಯಾರ ಬಳಿ ಅಧಿಕೃತ KYC ದಾಖಲೆಗಳಿವೆಯೋ ಅವರು ಈ ಖಾತೆಯನ್ನು ತೆರೆಯಬಹುದು. ಈ ಖಾತೆಯನ್ನು ವೈಯಕ್ತಿಕ, ಜಂಟಿ ಅಥವಾ ಉತ್ತರಾಧಿಕಾರಿ ಆಧಾರದ  ಮೇಲೆ ತೆರೆಯಬಹುದು. ಭಾರತೀಯ ಸ್ಟೇಟ್ ಬ್ಯಾಂಕ್ ವೆಬ್ ಸೈಟ್ ಪ್ರಕಾರ, ಪ್ರಸ್ತುತ ಬೇಸಿಕ್ ಸೇವಿಂಗ್ ಬ್ಯಾಂಕ್ ಡಿಪಾಸಿಟ್ ಖಾತೆಯ ಮೇಲೆ ಶೇ.3.75 ರಷ್ಟು ವಾರ್ಷಿಕ ಬಡ್ಡಿ ಪಾವತಿಸಲಾಗುತ್ತಿದೆ.  

ಇದನ್ನೂ ಓದಿ-Good News: 7th Pay Commission - ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಹೆಚ್ಚುವರಿ ಸ್ಯಾಲರಿ! ಎಷ್ಟು ತಿಳಿಯಲು ಈ ಸುದ್ದಿ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More