Home> Business
Advertisement

ಹಿರಿಯ ನಾಗರಿಕರಿಗೆ ಜಾಕ್‌ಪಾಟ್ ! ಹಿರಿಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಮತ್ತಷ್ಟು ಇಳಿಕೆ

Senior citizen concession in Railway Ticket : ಮಹಾರಾಷ್ಟ್ರದಲ್ಲಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಬಸ್ ಟಿಕೆಟ್ ದರದಲ್ಲಿ  ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ. ಈ ಸೌಲಭ್ಯವನ್ನು ಹಿರಿಯ ನಾಗರಿಕರಿಗೆ ಒದಗಿಸಲಾಗಿದೆ

ಹಿರಿಯ ನಾಗರಿಕರಿಗೆ ಜಾಕ್‌ಪಾಟ್ ! ಹಿರಿಯ ಪ್ರಯಾಣಿಕರ ಟಿಕೆಟ್ ದರದಲ್ಲಿ ಮತ್ತಷ್ಟು ಇಳಿಕೆ

Free Travel Facility For Senior Citizen : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತವೆ. ಇದೀಗ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಅದರಂತೆ ರಾಜ್ಯ ಸರ್ಕಾರ ಪ್ರಯಾಣ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಹಾಗಾಗಿ ಇನ್ನು ಮುಂದೆ ಪ್ರಯಾಣದ ಸಮಯದಲ್ಲಿ ಅರ್ಧದಷ್ಟು ಪ್ರಯಾಣ ದರವನ್ನು ಮಾತ್ರ ಪಾವತಿಸಬೇಕಾಗುತ್ತದೆ. ಹಾಗಿದ್ದರೆ  ಯಾವ ರಾಜ್ಯದ ಪ್ರಯಾಣಿಕರು ಅರ್ಧದಷ್ಟು ದರವನ್ನು ಪಾವತಿಸಬೇಕು  ನೋಡೋಣ. 

ಮಹಾರಾಷ್ಟ್ರ ಮತ್ತು ಹರಿಯಾಣ ಸರ್ಕಾರಗಳು ಈ ಸೌಲಭ್ಯವನ್ನು ಇದೀಗ ಪ್ರಾರಂಭಿಸಿದೆ. ಇದರ ಪ್ರಕಾರ ಅರ್ಧದಷ್ಟು ದರವನ್ನು  ಪಾವತಿ ಮಾಡಿದರೆ ಸಾಕು . ಮಹಾರಾಷ್ಟ್ರದಲ್ಲಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ, ಮಹಿಳೆಯರಿಗೆ ಬಸ್ ಟಿಕೆಟ್ ದರದಲ್ಲಿ  ಶೇಕಡಾ 50 ರಷ್ಟು ಕಡಿಮೆ ಮಾಡಲಾಗಿದೆ. ಈ ಸೌಲಭ್ಯವನ್ನು ಹಿರಿಯ ನಾಗರಿಕರಿಗೆ ಒದಗಿಸಲಾಗಿದೆ . ಇದರಲ್ಲಿ 65 ರಿಂದ 75 ವರ್ಷದೊಳಗಿನ ಹಿರಿಯ ನಾಗರಿಕರು ಪ್ರಯೋಜನ ಪಡೆಯುತ್ತಾರೆ. ಅಲ್ಲದೆ, ರಾಜ್ಯ ಸರ್ಕಾರವು 75 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತ ಬಸ್ ಸೇವೆಗಳನ್ನು ಒದಗಿಸುತ್ತದೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಭಾರಿ ಸಂತಸ ನೀಡುವ ಮತ್ತೊಂದು ಹೊಸ ಅಪ್ಡೇಟ್ ಪ್ರಕಟ!

ಬಸ್ ದರದಲ್ಲಿ ರಿಯಾಯಿತಿ : 
ಈ ರಿಯಾಯಿತಿ ಬಸ್ ದರದಲ್ಲಿ ಮಾತ್ರ ಲಭ್ಯವಿದೆ. ಈ ಸೌಲಭ್ಯವನ್ನು ಪ್ರಸ್ತುತ ರಾಜ್ಯ ಸಾರಿಗೆ ಸಂಸ್ಥೆ ಒದಗಿಸುತ್ತಿದೆ. ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವಿಷಯವನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಹರಿಯಾಣ ಸರ್ಕಾರವು ಹಿರಿಯ ನಾಗರಿಕರ ಟಿಕೆಟ್ ದರವನ್ನು ಕಡಿಮೆ ಮಾಡಿದೆ.

ಏಪ್ರಿಲ್ 1ರಿಂದ ಈ ಸೌಲಭ್ಯ ಜಾರಿಗೆ :
ಹಿರಿಯ ನಾಗರಿಕರ ಪ್ರಯಾಣ ದರದಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಆದರೆ, ಈ ಸೌಲಭ್ಯವು ಹರಿಯಾಣ ರಾಜ್ಯದಲ್ಲಿ ವಾಸಿಸುವ ಜನರಿಗೆ ಮಾತ್ರ ಲಭ್ಯವಿದೆ. ಈ ಸೌಲಭ್ಯವನ್ನು ಪಡೆಯಬೇಕಾದರೆ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಟಿಕೆಟ್ ಬುಕ್ ಮಾಡುವಾಗ ನಿಮ್ಮ ಹರಿಯಾಣ ನಿವಾಸದ ಪುರಾವೆಯನ್ನು ತೋರಿಸಬೇಕು. ಈ ವಿಶೇಷ ಸೌಲಭ್ಯವು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. 

ಇದನ್ನೂ ಓದಿ : ಈ ದಿನದಿಂದ ಜಾರಿಯಾಗಲಿದೆ 8th Pay Commission! ನೌಕರರ ವೇತನದಲ್ಲಿ ಆಗುವುದು ಮಹತ್ತರ ಬದಲಾವಣೆ

ಹಲವು ರಾಜ್ಯಗಳಲ್ಲಿ ಉಚಿತ ಬಸ್ ಪ್ರಯಾಣ ಸೌಲಭ್ಯ :
ಈ ಹಿಂದೆ ಹರಿಯಾಣದಲ್ಲಿ ಈ ಸೌಲಭ್ಯವನ್ನು 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಒದಗಿಸಲಾಗಿತ್ತು. ಆದರೆ ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಈ ಪ್ರಯೋಜನವನ್ನು ಪಡೆಯುತ್ತಾರೆ. ಈ ಮಧ್ಯೆ, ದೆಹಲಿ ಮತ್ತು ಪಂಜಾಬ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ  ಕಲ್ಪಿಸಲಾಗಿದೆ. ಇದಲ್ಲದೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹಿರಿಯ ನಾಗರಿಕರಿಗೆ ಬಸ್ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More