Home> Business
Advertisement

SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ

SBI YONO App: ಎಸ್‌ಬಿಐ ಯೋನೊ ಅಪ್ಲಿಕೇಶನ್ ಈಗ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಹೆಚ್ಚುತ್ತಿರುವ ಆನ್‌ಲೈನ್ ಬ್ಯಾಂಕಿಂಗ್ ವಂಚನೆಯ ದೃಷ್ಟಿಯಿಂದ, ಎಸ್‌ಬಿಐ ಯೋನೋ ಅಪ್ಲಿಕೇಶನ್‌ನಲ್ಲಿ ಸಿಮ್ ಬೈಂಡಿಂಗ್ ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ.

SBI YONO App: ಆನ್‌ಲೈನ್ ಬ್ಯಾಂಕಿಂಗ್ ನಿಯಮಗಳನ್ನು ಬದಲಾಯಿಸಿದ ಎಸ್‌ಬಿಐ

ನವದೆಹಲಿ: SBI YONO App- ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಖಾತೆದಾರರಾಗಿದ್ದರೆ, ನಿಮಗಾಗಿ ಪ್ರಮುಖ ಸುದ್ದಿ ಇದೆ. ಎಸ್‌ಬಿಐ ತನ್ನ ಬ್ಯಾಂಕಿಂಗ್ ಅಪ್ಲಿಕೇಶನ್ ಯೋನೊಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ. ಈ ಬದಲಾವಣೆಯ ನಂತರ, ಎಸ್‌ಬಿಐನ ಆನ್‌ಲೈನ್ ಬ್ಯಾಂಕಿಂಗ್ ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಈ ಬದಲಾವಣೆಗಳು ಯಾವುವು ಮತ್ತು ಅದರ ಲಾಭ ಪಡೆಯಲು ನೀವು ಏನು ಮಾಡಬೇಕು ಎಂದು ತಿಳಿಯೋಣ...

SBI ಟ್ವೀಟ್ :

ಹೊಸ ಸಿಮ್ ಬೈಂಡಿಂಗ್ ವೈಶಿಷ್ಟ್ಯವನ್ನು ಪ್ರಾರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಈ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಒಂದು ಟ್ವೀಟ್ ಮಾಡಿದೆ. ಇದರಲ್ಲಿ ಈಗ ಎಸ್‌ಬಿಐಯೊಂದಿಗೆ ಆನ್‌ಲೈನ್ ಬ್ಯಾಂಕಿಂಗ್ ಮೊದಲಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದ್ದು, ಇತ್ತೀಚಿನ YONO ಲೈಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ  ಎಂದು ಬರೆಯಲಾಗಿದೆ.

ಇದನ್ನೂ ಓದಿ- SBI ಗ್ರಾಹಕರಿಗೆ ಸಿಹಿ ಸುದ್ದಿ : FD ಬಡ್ಡಿ ಸರ್ಟಿಫಿಕೇಟ್ ಅನ್ನ ಆನ್‌ಲೈನ್‌ನಲ್ಲಿ ಪಡೆಯಬಹುದು : ಹೇಗೆ ಇಲ್ಲಿದೆ ನೋಡಿ

ಏನಿದು ಸಿಮ್ ಬೈಂಡಿಂಗ್ ವೈಶಿಷ್ಟ್ಯ?
ಸಿಮ್ ಬೈಂಡಿಂಗ್ ವೈಶಿಷ್ಟ್ಯವು ಒಂದು ಹೊಸ ತಂತ್ರಜ್ಞಾನವಾಗಿದ್ದು, ಇದರ ಮೂಲಕ ನೋಂದಾಯಿತ ಮೊಬೈಲ್‌ನಿಂದ ಕೇವಲ ಒಂದು ಸಾಧನಕ್ಕೆ ಲಾಗ್-ಇನ್ ಮಾಡಬಹುದು. ಬೇರೆ ಯಾವುದೇ ಐಚ್ಛಿಕ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಅಂದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಸಿಮ್ ಇರುವ ಅದೇ ಫೋನ್‌ನಿಂದ ನೀವು ಲಾಗಿನ್ ಆಗಲು ಸಾಧ್ಯವಾಗುತ್ತದೆ. ಬೇರೆ ಯಾವುದೇ ಫೋನ್‌ನಿಂದ ನಿಮ್ಮ ಅಪ್ಲಿಕೇಶನ್‌ಗೆ ಲಾಗಿನ್ ಆಗಲು ನಿಮಗೆ ಸಾಧ್ಯವಾಗುವುದಿಲ್ಲ. ಎಸ್‌ಬಿಐ ಗ್ರಾಹಕರು ಬೇರೆ ಯಾವುದೇ ಸಂಖ್ಯೆಯಿಂದ ಲಾಗಿನ್ ಆಗಲು ಪ್ರಯತ್ನಿಸಿದರೆ ಅವರಿಗೆ ಯಾವುದೇ ರೀತಿಯ ಟ್ರಾನ್ಸಕ್ಶನ್ ಮಾಡಲು ಅವಕಾಶವಿರುವುದಿಲ್ಲ.

YONO ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ:
ಈ ಅಪ್ಲಿಕೇಶನ್‌ಗೆ ಹೊಸ ಭದ್ರತಾ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಈ ಹೊಸ ವೈಶಿಷ್ಟ್ಯದೊಂದಿಗೆ, ಆನ್‌ಲೈನ್ ಬ್ಯಾಂಕಿಂಗ್ (Online Banking) ಸೌಲಭ್ಯವು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಇದನ್ನು ಬಳಸಲು, ಗ್ರಾಹಕರು ತಮ್ಮ YONO ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ. ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮೂಲಕ ಹೊಸ ನಿಯಮದ ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ಗ್ರಾಹಕರು ಯೋನೊ ಲೈಟ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ತಿಳಿಸಿದೆ. 

ಇದನ್ನೂ ಓದಿ- SBI: ತನ್ನ 44 ಕೋಟಿ ಗ್ರಾಹಕರಿಗೆ ವಿಡಿಯೋ ಸಂದೇಶ ನೀಡಿರುವ ಎಸ್‌ಬಿಐ ಹೇಳಿದ್ದೇನು?

ಎಸ್‌ಬಿಐ ಯೋನೊ ಲೈಟ್ ಅಪ್ಲಿಕೇಶನ್‌ನಲ್ಲಿ ನೋಂದಣಿ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಮಾಹಿತಿ:-
>> ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಪ್ಲೇ ಸ್ಟೋರ್‌ನಿಂದ ಎಸ್‌ಬಿಐ ಯೋನೊ ಲೈಟ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
>> ಲಗತ್ತಿಸಲಾದ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ (ಸಿಮ್ -1 ಸಿಮ್ -2).
>> ಒಂದೇ ಸಿಮ್ ಇದ್ದರೆ ಯಾವುದೇ ಸಿಮ್ ಆಯ್ಕೆ ಮಾಡಬೇಕಾಗುತ್ತದೆ.
>> ಪರದೆಯ ಮೇಲೆ ಸಂದೇಶ ಕಾಣಿಸುತ್ತದೆ. ಮುಂದುವರಿಯಿರಿ ಕ್ಲಿಕ್ ಮಾಡುವಾಗ, SMS ಮೂಲಕ ಕೋಡ್ ಕಳುಹಿಸಲಾಗುತ್ತದೆ.
>> ನೋಂದಣಿ ಪರದೆಯಲ್ಲಿ ನಿಮ್ಮ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರ, REGISTER ಆಯ್ಕೆಯನ್ನು ಕ್ಲಿಕ್ ಮಾಡಿ
>> ಪದ ಮತ್ತು ಷರತ್ತುಗಳನ್ನು ಒಪ್ಪಿಕೊಂಡ ನಂತರ, OK ಬಟನ್ ಕ್ಲಿಕ್ ಮಾಡಿ.
>> ಇದರ ನಂತರ ನೀವು ಸಕ್ರಿಯಗೊಳಿಸುವ ಕೋಡ್ ಅನ್ನು ಪಡೆಯುತ್ತೀರಿ. ಈ ಸಕ್ರಿಯಗೊಳಿಸುವ ಕೋಡ್ 30 ನಿಮಿಷಗಳವರೆಗೆ ಮಾತ್ರ ಸಕ್ರಿಯವಾಗಿರುತ್ತದೆ
ಅಪ್ಲಿಕೇಶನ್‌ನಲ್ಲಿ ಈ ಕೋಡ್ ಬರೆದ ನಂತರ, ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಬಳಕೆದಾರರು ಈಗ ಯೋನೊ ಲೈಟ್ ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More