Home> Business
Advertisement

SBI ಡೆಬಿಟ್ ಕಾರ್ಡ್ EMI ಸೌಲಭ್ಯದ ಬಗ್ಗೆ ತಿಳಿದಿದೆಯಾ? ಗ್ರಾಹಕರಿಗೆ ಸಿಗಲಿದೆ ಭಾರೀ ಲಾಭ

ಬ್ಯಾಂಕಿನ  ಈ ಸೌಲಭ್ಯದಡಿಯಲ್ಲಿ, ಗ್ರಾಹಕರು  ದುಬಾರಿ ವಸ್ತುಗಳನ್ನು ಖರೀದಿಸುವಾಗ ಒಮ್ಮೆಲೆ ಹಣ ಪಾವತಿಸಬೇಕಾಗಿಲ್ಲ. ಇಎಂಐ ಮೂಲಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಹಣ ಪಾವತಿಸಬಹುದು. 

SBI ಡೆಬಿಟ್ ಕಾರ್ಡ್ EMI ಸೌಲಭ್ಯದ ಬಗ್ಗೆ ತಿಳಿದಿದೆಯಾ? ಗ್ರಾಹಕರಿಗೆ ಸಿಗಲಿದೆ ಭಾರೀ ಲಾಭ

ನವದೆಹಲಿ : ಶಾಪಿಂಗ್ ಮಾಡಲು ಶುರು ಮಾಡಿದರೆ ಇನ್ನೊಂದು ವಸ್ತು, ಇನ್ನೊಂದು ವಸ್ತು ಎಂದು ಎಷ್ಟು ಖರೀದಿ ಮಾಡಿದರೂ ಸಾಕಾಗುವುದೇ ಇಲ್ಲ. ಹೀಗೆ ಖರೀದಿ ಮಾಡುತ್ತಾ ಮಾಡುತ್ತಾ ಅಕೌಂಟ್ ನಲ್ಲಿರುವ ಹಣ ಖಾಲಿಯಾದರೆ ವೇನು ಮಾಡುವುದು? ನಿಮ್ಮಲ್ಲಿ ಎಸ್ ಬಿಐ (SBI) ಡೆಬಿಟ್ ಕಾರ್ಡ್ ಇದ್ದರೆ ನೀವು ಈ ಯೋಚನೆ ಮಾಡಬೇಕಾಗಿಲ್ಲ. ಎಸ್ ಬಿಐ ಡೆಬಿಟ್ ಕಾರ್ಡ್ ಮೇಲೆ ಕೂಡಾ ಇಎಂಐ (EMI) ಸೇವೆ ಒದಗಿಸಲಿದೆ. 

ಬ್ಯಾಂಕಿನ (Bank) ಈ ಸೌಲಭ್ಯದಡಿಯಲ್ಲಿ, ಗ್ರಾಹಕರು  ದುಬಾರಿ ವಸ್ತುಗಳನ್ನು ಖರೀದಿಸುವಾಗ ಒಮ್ಮೆಲೆ ಹಣ ಪಾವತಿಸಬೇಕಾಗಿಲ್ಲ. ಇಎಂಐ (EMI) ಮೂಲಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಹಣ ಪಾವತಿಸಬಹುದು.  ಲಭ್ಯ ಮಾಹಿತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಖಾತೆದಾರರಿಗೆ ಡೆಬಿಟ್ ಕಾರ್ಡ್‌ ಮೇಲೆ Pre approved ಇಎಂಐ ಸೌಲಭ್ಯವನ್ನು ನೀಡುತ್ತಿದೆ. ನಿಮಗೂ ಈ ಸೌಲಭ್ಯದ ಲಾಭ ಸಿಗಲಿದೆಯೇ ಇಲ್ಲವೇ ಎನ್ನುವುದನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಬಹುದು. 

ಇದನ್ನೂ ಓದಿ : TVS XL100 Offer: ದಿನವೊಂದಕ್ಕೆ ಕೇವಲ 51 ರೂ. ಪಾವತಿಸಿ TVS ಕಂಪನಿಯ ಈ ದ್ವಿಚಕ್ರ ವಾಹನ ಮನೆಗೆ ತನ್ನಿ

ನಿಮಗೂ ಸಿಗಲಿದೆಯೇ ಈ ಸೌಲಭ್ಯ : 
ನೀವು ಕೂಡಾ ಈ ಸೌಲಭ್ಯದ ಲಾಭ ಪಡೆಯಲು ಅರ್ಹರೇ ಎನ್ನುವುದನ್ನು ಸುಲಭವಾಗಿ ಕಂಡುಕೊಳ್ಳಬಹುದು. ಇದಕ್ಕಾಗಿ, ನಿಮ್ಮ ನೋಂದಾಯಿತ ಮೊಬೈಲ್ (Mobile) ಸಂಖ್ಯೆಯಿಂದ 567676ಗೆ ಮೆಸೇಜ್ ಮಾಡಬೇಕು.  DCEMI ಎಂದು ಬರೆದು 567676 ನಂಬರಿಗೆ ಮೆಸೇಜ್ (Message) ಮಾಡಿದರೆ, ನಿಮಗೆ ಈ ಡೆಬಿಟ್ ಕಾರ್ಡ್ ಇಎಂಐ (debit card EMI) ಸೌಲಭ್ಯ ಸಿಗಲಿದೆಯೇ ಎನ್ನುವುದು ಗೊತ್ತಾಗುತ್ತದೆ.

ತಕ್ಷಣ ಸಿಗಲಿದೆ ಸಾಲ : 
ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ (SBI Debit card) ಇಎಂಐ ಮೂಲಕ ನೀವು 1 ಲಕ್ಷ ರೂಪಾಯಿಗಳವರೆಗೆ ಖರೀದಿ ಮಾಡಬಹುದು. ಇದರಲ್ಲಿ, ನೀವು 6 ತಿಂಗಳು, 9,12 ಮತ್ತು 18 ತಿಂಗಳ ಇಎಂಐಯ ಆಯ್ಕೆಯನ್ನು ಪಡೆಯಬಹುದು. ಇದರ ಇನ್ನೊಂದು ವಿಶೇಷವೆಂದರೆ, ಇದರ ಮೇಲೆ ಯಾವುದೇ ಪ್ರೊಸೆಸಿಂಗ್ ಚಾರ್ಜ್ ಪಾವತಿಸಬೇಕಾಗಿಲ್ಲ. ಅಲ್ಲದೆ, ನಿಮ್ಮ ಉಳಿತಾಯ ಖಾತೆಯ ಮೊತ್ತವನ್ನು ಕೂಡಾ ಬ್ಲಾಕ್ ಮಾಡಲಾಗುವುದಿಲ್ಲ. 

ಇದನ್ನೂ ಓದಿ :  Paytmನಲ್ಲೂ ಲಭ್ಯವಿದೆ COVID-19 ಲಸಿಕೆ ಸ್ಲಾಟ್, ಅದನ್ನು ಈ ರೀತಿ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More