Home> Business
Advertisement

SBI 4 Free Cash Withdrawals, New Rules : SBI ಗ್ರಾಹಕರೇ ಗಮನಿಸಿ : ಇಂದಿನಿಂದ ಬದಲಾಗಲಿವೆ ಚೆಕ್‌ ಬುಕ್, ATM ಶುಲ್ಕಗಳ ನಿಯಮ!

ಈ ಎಸ್‌ಬಿಐ ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆ, ಚೆಕ್ ಬುಕ್, ವರ್ಗಾವಣೆ ಮತ್ತು ಇತರ ಹಣಕಾಸು ಯೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಿಗೆ ಸಂಬಂಧಿಸಿವೆ.

SBI 4 Free Cash Withdrawals, New Rules : SBI ಗ್ರಾಹಕರೇ ಗಮನಿಸಿ : ಇಂದಿನಿಂದ ಬದಲಾಗಲಿವೆ ಚೆಕ್‌ ಬುಕ್, ATM ಶುಲ್ಕಗಳ ನಿಯಮ!

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಮೂಲ ಉಳಿತಾಯ ಬ್ಯಾಂಕ್ ಠೇವಣಿ (BSBD) ಖಾತೆದಾರರಿಗೆ ಸೇವಾ ಶುಲ್ಕ ಪರಿಷ್ಕರಣೆ ಯನ್ನು ಘೋಷಿಸಿದ್ದು, ಅದು ಇಂದಿನಿಂದ (ಜುಲೈ 1) ಪ್ರಾರಂಭವಾಗಲಿದೆ.

ನಗದು ಹಿಂಪಡೆಯುವಿಕೆಗಾಗಿ, ಶಾಖೆಗಳಲ್ಲಿ ಶುಲ್ಕಗಳನ್ನು 4 ಉಚಿತ ನಗದು ಹಿಂಪಡೆಯುವ ವಹಿವಾಟುಗಳನ್ನು (ಬ್ರಾಂಚ್ ಮತ್ತು ಎಟಿಎಂ ಸೇರಿದಂತೆ) ಮೀರಿ ವಸೂಲಿ ಮಾಡಲಾಗುತ್ತದೆ ಮತ್ತು ಎಟಿಎಂ(ATM Cash Withdrawal)ಗಳಲ್ಲಿ ಶುಲ್ಕಗಳನ್ನು 4 ಉಚಿತ ನಗದು ಹಿಂಪಡೆಯುವ ವಹಿವಾಟು (ಎಟಿಎಂ ಮತ್ತು ಶಾಖೆ ಸೇರಿದಂತೆ) ಮೀರಿ ವಸೂಲಿ ಮಾಡಲಾಗುತ್ತದೆ.ಹೆಚ್ಚುವರಿ ಮೌಲ್ಯವರ್ಧಿತ ಸೇವೆಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತಿಳಿಸಿದೆ.

ಇದನ್ನೂ ಓದಿ : PPF, KVP, SSY, NSC: ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಸಂತಸದ ಸುದ್ದಿ

ಈ ಎಸ್‌ಬಿಐ(State Bank of India) ಶುಲ್ಕಗಳು ಶಾಖೆಗಳಲ್ಲಿ ಮತ್ತು ಎಟಿಎಂಗಳಲ್ಲಿ ನಗದು ಹಿಂಪಡೆಯುವಿಕೆ, ಚೆಕ್ ಬುಕ್, ವರ್ಗಾವಣೆ ಮತ್ತು ಇತರ ಹಣಕಾಸು ಯೇತರ ವಹಿವಾಟುಗಳಿಗೆ ಸಂಬಂಧಿಸಿದ ಶುಲ್ಕಗಳಿಗೆ ಸಂಬಂಧಿಸಿವೆ.

ಇದನ್ನೂ ಓದಿ : PM Kisan FPO Yojana : ರೈತರಿಗೆ ಸರ್ಕಾರ ನೀಡಲಿದೆ 15 ಲಕ್ಷ ರೂ. ಅರ್ಜಿ ಸಲ್ಲಿಸುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ನಗದು ಹಿಂಪಡೆಯುವಿಕೆಗಾಗಿ ಬಿಎಸ್ ಬಿಡಿ(Basic Savings Bank Deposit) ಖಾತೆದಾರರು ಈ ಶುಲ್ಕಗಳನ್ನು ಅನುಸರಿಸಬೇಕಾಗುತ್ತದೆ :

- ಬ್ರಾಂಚ್ ಚಾನೆಲ್ /ATMನಲ್ಲಿ ಪ್ರತಿ ನಗದು ಹಿಂಪಡೆಯುವ ವಹಿವಾಟಿಗೆ ರೂ 15 ಮತ್ತು GST(Goods and Services Tax).

ಇದನ್ನೂ ಓದಿ : Good News: DA ಹಣ ಸಿಗುವ ದಿನಾಂಕ ಫಿಕ್ಸ್, ನೌಕರರಿಗೆ ಅರಿಯರ್ ಲಾಭ ಕೂಡ ಸಿಗಲಿದೆ

- ಎಸ್ ಬಿಐ ಎಟಿಎಂ(SBI ATM)ಗಳು: ರೂ 15 +GST

- ಇತರ ಬ್ಯಾಂಕ್(Banks) ಗಳ ಎಟಿಎಂಗಳು: ರೂ 15 + ಜಿಸ್ಟ್

ಇದನ್ನೂ ಓದಿ : 800 ರೂಪಾಯಿ ದಾಟಲಿದೆ ಗ್ಯಾಸ್ ಸಿಲಿಂಡರ್..ಆದರೂ ನೀವು 300 ರೂ. ಉಳಿಸಬಹುದು..!

- ಚೆಕ್ ಬುಕ್(Cheque Book) ಗೆ ಈ ಕೆಳಗಿನ ಶುಲ್ಕಗಳನ್ನು ವಿಧಿಸಲಾಗುತ್ತದೆ. ಅಂದರೆ ಮೊದಲ 10 ಚೆಕ್ ಗಳು ಒಂದು ಆರ್ಥಿಕ ವರ್ಷದಲ್ಲಿ ಉಚಿತವಾಗಿದ್ದು, ತದನಂತರ ಚೆಕ್ ಬುಕ್ ರೂ. 40/- + GST

- 25 ಚೆಕ್ ಬುಕ್ ರೂ. 75/- + GST ತುರ್ತು ಚೆಕ್ ಬುಕ್ ರೂ. 50/- + 10 GST. ಹಿರಿಯ ನಾಗರಿಕ ಗ್ರಾಹಕರಿಗೆ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ : Government Scheme: ಕೇವಲ 7 ರೂ. ಉಳಿಸಿ ಮಾಸಿಕ 5,000 ರೂ. ಪಿಂಚಣಿ ಪಡೆಯಿರಿ

ಬ್ರಾಂಚ್ ಚಾನೆಲ್/ATM/CDM ನಲ್ಲಿ ನ ಹಣಕಾಸು ಯೇತರ ವಹಿವಾಟುಗಳು ಎಸ್‌ಬಿಐ(SBI) ಮತ್ತು ಇತರ ಬ್ಯಾಂಕ್ ಗಳೆರಡರಲ್ಲೂ ಬಿಎಸ್ ಬಿಡಿ ಖಾತೆದಾರರಿಗೆ ಉಚಿತವಾಗಿರುತ್ತದೆ. ಬಿಎಸ್ ಬಿಡಿ ಖಾತೆದಾರರ ವರ್ಗಾವಣೆ ವಹಿವಾಟುಗಳು ಶಾಖೆ ಮತ್ತು ಪರ್ಯಾಯ ಚಾನೆಲ್ ಗಳಿಗೆ ಉಚಿತವಾಗಿರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More