Home> Business
Advertisement

Fact Check: ಪ್ಯಾನ್ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತಾ?

ಕೇಂದ್ರ ಸರ್ಕಾರವು ದೇಶದ ಜನರಿಗೆ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ನಡೆಸುತ್ತಿದೆ. ಇಲ್ಲಿ ಜನರ ಮೊಬೈಲ್ ಮತ್ತು ಇ-ಮೇಲ್‍ಗಳಿಗೆ ಬರುವ ಫೇಕ್ ಲಿಂಕ್‌ಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ತಿಳಿಸಲಾಗುತ್ತದೆ.

Fact Check: ಪ್ಯಾನ್ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆ ಕ್ಲೋಸ್ ಆಗುತ್ತಾ?

ನವದೆಹಲಿ: ಡಿಜಿಟಲೀಕರಣದ ಯುಗದಲ್ಲಿ ದೇಶದಲ್ಲಿ ಸೈಬರ್ ಕ್ರೈಮ್ ವೇಗವಾಗಿ ಹೆಚ್ಚುತ್ತಿದೆ. ಇದಲ್ಲದೇ ಫೇಕ್ ನ್ಯೂಸ್ ಕೂಡ ಸಾಕಷ್ಟು ಹರಿದಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅಥವಾ ಇ-ಮೇಲ್‌ನಲ್ಲಿ ಇಂತಹ ಅನೇಕ ಲಿಂಕ್‌ಗಳು ಮತ್ತು ಸುದ್ದಿಗಳು ಬರುತ್ತಿವೆ. ಇವುಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು, ಇದಕ್ಕಾಗಿ ನೀವು ಪ್ರತಿದಿನವೂ ಅಪ್‍ಡೇಟ್ ಆಗಿರಬೇಕು. ಆದರೆ ಮಾಹಿತಿಯ ಕೊರತೆಯಿಂದ ಜನರು ಅನೇಕ ಬಾರಿ ತಪ್ಪು ಲಿಂಕ್‍ಗಳನ್ನು ಕ್ಲಿಕ್ ಮಾಡುತ್ತಾರೆ. ಇದರಿಂದಾಗಿ ಅನೇಕ ಬಾರಿ ಜನರು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ.  

ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್

ಕೇಂದ್ರ ಸರ್ಕಾರವು PIB Fact Check ಟ್ವಿಟರ್ ಹ್ಯಾಂಡಲ್‍ ಮೂಲಕ ಸುಳ್ಳುಸುದ್ದಿಗಳ ಬಗ್ಗೆ  ಜನರಿಗೆ ಅರಿವು ಮೂಡಿಸುತ್ತಿದೆ. ಜನರ ಮೊಬೈಲ್ ಮತ್ತು ಇ-ಮೇಲ್‍ಗಳಿಗೆ ಬರುವ ನಕಲಿ ಲಿಂಕ್‌ಗಳನ್ನು ಪರಿಶೀಲನೆ ನಡೆಸಿ, ಅವುಗಳ ನೈಜತೆಯನ್ನು ತಿಳಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಜನರಿಗೆ ಎಸ್‌ಬಿಐ ಹೆಸರಿನಲ್ಲಿ ಫೇಕ್ ಸಂದೇಶಗಳು ಬರುತ್ತಿವೆ. ಈ ಸಂದೇಶಗಳಲ್ಲಿ ಖಾತೆದಾರರಿಗೆ ಪ್ಯಾನ್ ಸಂಖ್ಯೆಯನ್ನು ಅಪ್‍ಡೇಟ್ ಮಾಡುವಂತೆ ಕೇಳಲಾಗಿದೆ. 

ಇದನ್ನೂ ಓದಿ: Google Pay Fact Check: Google Pay ಗೆ RBI ಪಾವತಿ ವ್ಯವಸ್ಥೆಯ ಪರವಾನಗಿ ನೀಡಿಲ್ಲವೇ? ಇಲ್ಲಿದೆ ಸತ್ಯಾಸತ್ಯತೆ! 

ಸಂದೇಶದಲ್ಲಿ ಏನಿದೆ?

ಪಿಐಬಿ ಫ್ಯಾಕ್ಟ್ ಚೆಕ್‌ನ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ‘ಎಸ್‌ಬಿಐ ಹೆಸರಿನಲ್ಲಿ ಗ್ರಾಹಕರಿಗೆ ಕಳುಹಿಸಿರುವ ಸಂದೇಶದಲ್ಲಿ ಪ್ಯಾನ್ ಸಂಖ್ಯೆಯನ್ನು ನವೀಕರಿಸಲು ಹೇಳಲಾಗಿದೆ. ಒಂದು ವೇಳೆ ಪ್ಯಾನ್ ಅಪ್‍ಡೇಟ್ ಮಾಡದಿದ್ದರೆ ಖಾತೆಯನ್ನು ಬ್ಲಾಕ್ ಮಾಡಲಾಗುವುದು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಇಂತಹ ಇಮೇಲ್‌ಗಳು ಮತ್ತು ಎಸ್‌ಎಂಎಸ್‌ಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಬ್ಯಾಂಕ್ ಎಂದಿಗೂ ನಿಮ್ಮ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳನ್ನು SMSನಲ್ಲಿ ಕೇಳುವುದಿಲ್ಲವೆಂದು ಹೇಳಲಾಗಿದೆ. ಹೀಗಾಗಿ ಎಸ್‍ಬಿಐ ವಿಚಾರವಾಗಿ ಬಂದಿರುವ ಪ್ಯಾನ್‍ ಅಪ್‍ಡೇಟ್‍ ಸಂದೇಶ ನಕಲಿ ಎಂದು ಹೇಳಲಾಗಿದೆ. ಗ್ರಾಹಕರಿಗೆ ಅರಿವು ಮೂಡಿಸವ ನಿಟ್ಟಿನಲ್ಲಿ ಈ ವಿಷಯವನ್ನು ಹಂಚಿಕೊಳ್ಳಲಾಗಿದೆ.  

ಪಿಐಬಿ ಫ್ಯಾಕ್ಟ್ ಚೆಕ್ ಎಂದರೇನು?

PIB ಫ್ಯಾಕ್ಟ್ ಚೆಕ್(PIB Fact Check) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ನಕಲಿ ಸಂದೇಶ ಅಥವಾ ಪೋಸ್ಟ್‍ಗಳನ್ನು ಗುರುತಿಸಿ ಜನರಿಗೆ ಅರಿವು ಮೂಡಿಸುತ್ತದೆ. ಇದರೊಂದಿಗೆ ನಕಲಿ ಸುದ್ದಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸಲಹೆ ನೀಡಲಾಗಿದೆ. ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಮೇಲಿನ ತಪ್ಪು ಮಾಹಿತಿಯ ಇದರಿಂದ ಜನರಿಗೆ ಗೊತ್ತಾಗುತ್ತದೆ. ಯಾವುದೇ ವೈರಲ್ ಸಂದೇಶದ ಸತ್ಯವನ್ನು ನೀವು ತಿಳಿದುಕೊಳ್ಳಲು ಬಯಸಿದರೆ 918799711259 ಅಥವಾ socialmedia@pib.gov.inಗೆ ಮೇಲ್ ಮಾಡಬೇಕು. ಬಳಿಕ ನಿಮಗೆ ಸಂದೇಹವಿರುವ ಸಂದೇಶವು ಸತ್ಯವೋ ಅಥವಾ ಸುಳ್ಳೋ ಎಂಬುದರ ಬಗ್ಗೆ ಉತ್ತರ ಸಿಗುತ್ತದೆ.

ಇದನ್ನೂ ಓದಿ: ಗ್ರಾಹಕರಿಗೆ ಕೆಎಂಎಫ್ ತುಪ್ಪದ ಬರೆ: ನಂದಿನ ತುಪ್ಪದ ದರ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More