Home> Business
Advertisement

Investment on Gold: ರಾಜ್ಯದಲ್ಲಿ ಚಿನ್ನ, ವಜ್ರ, ಬೆಳ್ಳಿ ಆಭರಣಗಳ ಮೇಲೆ ಬಂಡವಾಳ ಹೂಡಿಕೆ ಹೆಚ್ಚಳ

Investment on Gold:2015ರಲ್ಲಿ ಒಂದು ಗ್ರಾಂ ಚಿನ್ನಕ್ಕೆ ಸರಾಸರಿ 2,600 ರೂ. ಬೆಲೆ ಇತ್ತು. ಅದು ಈಗ ಪ್ರತಿ ಗ್ರಾಂ ಗೆ  4,650 ರೂ. ಆಗಿದೆ. 5 ವರ್ಷಗಳಲ್ಲಿ ಆಭರಣಗಳ ಮೇಲೆ ಹೂಡಿಕೆ ಮಾಡುತ್ತಿರುವ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 

Investment on Gold: ರಾಜ್ಯದಲ್ಲಿ ಚಿನ್ನ, ವಜ್ರ, ಬೆಳ್ಳಿ ಆಭರಣಗಳ ಮೇಲೆ ಬಂಡವಾಳ ಹೂಡಿಕೆ ಹೆಚ್ಚಳ

ಬೆಂಗಳೂರು:  ಚಿನ್ನದ ಹೂಡಿಕೆಯತ್ತ ಜನರ ಒಲವು ಹೆಚ್ಚಾಗಿದ್ದು, ರಾಜ್ಯದಲ್ಲಿ ವಜ್ರ, ಬೆಳ್ಳಿ ಆಭರಣಗಳ ಮೇಲೆ ಬಂಡವಾಳ (Investment on Gold) ಹೂಡಿಕೆ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಈ ಹಿಂದೆ ಶ್ರೀಮಂತರು ಹಾಗೂ ರಾಜಕೀಯ ಮುಖಂಡರು ಚಿನ್ನಾಭರಣಗಳ ಮೇಲೆ ನೂರಾರು ಕೋಟಿ ರೂ. ಹೂಡಿಕೆ ಮಾಡುತ್ತಿದ್ದರು. ಆದರೆ ಇದೀಗ ಪ್ರತಿಯೊಬ್ಬರು ಬಂಗಾರದ ಮೇಲೆ ಹೂಡಿಕೆ ಮಾಡಲು ಆರಂಭಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಶೇ.20ರಷ್ಟು ಹೆಚ್ಚಳವಾಗಿದೆ. 

ಇದನ್ನೂ ಓದಿ: Petrol, Diesel Prices Today: ಇಂದಿನ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ ನೋಡಿ

2015ರಲ್ಲಿ ಒಂದು ಗ್ರಾಂ ಚಿನ್ನಕ್ಕೆ ಸರಾಸರಿ 2,600 ರೂ. ಬೆಲೆ ಇತ್ತು. ಅದು ಈಗ ಪ್ರತಿ ಗ್ರಾಂ ಗೆ  4,650 ರೂ. ಆಗಿದೆ. 5 ವರ್ಷಗಳಲ್ಲಿ ನಾನಾ ಹಂತದಲ್ಲಿ ಆಭರಣಗಳ ಮೇಲೆ ಹೂಡಿಕೆ ಮಾಡುತ್ತಿರುವ ಸಂಖ್ಯೆಯಲ್ಲಿ (Investment on Gold) ಏರಿಕೆ ಕಂಡುಬಂದಿದೆ. 

 

2015 ರಿಂದ ಇಲ್ಲಿಯವರೆಗೆ ಅಂದರೆ ಕಳೆದ  5 ವರ್ಷಗಳಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವವರ ಸಂಖ್ಯೆ ಶೇ.80 ಹೆಚ್ಚಾಗಿದೆ. ಬೆಲೆಬಾಳುವ ಆಭರಣಗಳ ಮೇಲೆ ಜನರ ಆಸಕ್ತಿ ಹೆಚ್ಚಾದಂತೆ ಬೆಲೆಯೂ ಜಾಸ್ತಿಯಾಗುವುದು ಸಾಮಾನ್ಯ. ಹೂಡಿಕೆ ಪ್ರಮಾಣ (Investment on Gold) ಹೆಚ್ಚಾಗಿದ್ದರಿಂದ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 200-300 ರೂ., ಪ್ರತಿ ಕೆ.ಜಿ ಬೆಳ್ಳಿ ಬೆಲೆಯಲ್ಲಿ 5,400 ರೂ. ಏರಿಕೆಯಾಗಿದೆ. ಪ್ರತಿ ಕ್ಯಾರಟ್‌ ವಜ್ರದ ಮೇಲೆ ಸಾವಿರಕ್ಕೂ ಹೆಚ್ಚು ಏರಿಕೆಯಾಗಿದೆ. 

ಇದನ್ನೂ ಓದಿ: Arecanut Price: ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ದರ

ದೀಪಾವಳಿ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳ ಬೇಡಿಕೆ ಕುಸಿತವಾಗಿತ್ತು. ಇದರ ಪರಿಣಾಮದಿಂದ ಪ್ರತಿ ಗ್ರಾಮ್‌ ಚಿನ್ನದ ಮೇಲೆ 100-200 ರೂ. ಇಳಿಕೆಯಾಗಿತ್ತು. 

Read More