Home> Business
Advertisement

OMG! ತನ್ನ ನೌಕರನೊಬ್ಬನಿಗೆ 1500 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ ಮುಕೇಶ್ ಅಂಬಾನಿ!

Reliance Industries Ltd: ಒಂದು ವೇಳೆ ನಿಮ್ಮ ಕಂಪನಿಯ ಮಾಲೀಕರು ಕೂಡ ನಿಮಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದರೆ ಹೇಗಿರುತ್ತದೆ ಒಮ್ಮೆ ಯೋಚಿಸಿ ನೋಡಿ. ಬಹುಶಃ ನೀವು ನಿಮ್ಮ ಅದೃಷ್ಟವನ್ನು ನಂಬದೆ ಇರಬಹುದು. ಆದರೆ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಈ ಔದಾರ್ಯ ಮೆರೆದಿದ್ದು, 1500 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
 

OMG! ತನ್ನ ನೌಕರನೊಬ್ಬನಿಗೆ 1500 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ ಮುಕೇಶ್ ಅಂಬಾನಿ!

Mukesh Ambani Gift To Manoj Modi: ಹೆಚ್ಚಿನ ಕಂಪನಿಗಳಲ್ಲಿ ಇನ್‌ಕ್ರಿಮೆಂಟ್ ಸಮಯ ನಡೆಯುತ್ತಿದೆ. ದಿನಗಳು ಹತ್ತಿರ ಬರುತ್ತಿದ್ದಂತೆ ನೀವೂ ಕೂಡ ಸಂಬಳದ ಹೆಚ್ಚಳದ ನಿರೀಕ್ಷೆಯಲ್ಲಿರಬೇಕು. ಆದರೆ ನಿಮ್ಮ ಕಂಪನಿಯ ಮಾಲೀಕರು ನಿಮಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದರೆ ಹೇಗೆ ಎಂಬುದನ್ನೂ ಒಮ್ಮೆ ಯೋಚಿಸಿ ನೋಡಿ? ಬಹುಶಃ ಮೊದಲಿಗೆ ನಿಮ್ಮ ಅದೃಷ್ಟದ ಮೇಲೆ ನಂಬಿಕೆಯಾಗದೆ ಇರಬಹುದು. ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ತಮ್ಮ ಹಿರಿಯ ಉದ್ಯೋಗಿ ಮತ್ತು ಸ್ನೇಹಿತ ಮನೋಜ್ ಮೋದಿಗೆ 1500 ಕೋಟಿ ರೂಪಾಯಿ ಮೌಲ್ಯದ 22 ಅಂತಸ್ತಿನ ಐಷಾರಾಮಿ ಕಟ್ಟಡವನ್ನು ಉಡುಗೊರೆಯಾಗಿ ನೀಡಿ ಔದಾರ್ಯವನ್ನು ಮೆರೆದಿದ್ದಾರೆ. 

ಮನೆ ಮುಂಬೈನ ಪ್ರೀಮಿಯಂ ಸ್ಥಳದಲ್ಲಿದೆ

ಅಂಬಾನಿ ತೆಗೆದುಕೊಂಡ ಈ ನಿರ್ಧಾರದ ಬಳಿಕ  ಅವರು ಕೇವಲ ದೊಡ್ಡ ಉದ್ಯಮಿ ಮಾತ್ರವಲ್ಲ, ದೊಡ್ಡ ಹೃದಯವನ್ನೂ ಹೊಂದಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಮನೋಜ್ ಮೋದಿ ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಎಂಡಿ ಮುಖೇಶ್ ಅಂಬಾನಿ ಅವರಿಗೆ ತುಂಬಾ ಹತ್ತಿರದವರಾಗಿದ್ದಾರೆ ಮತ್ತು ಕಂಪನಿಯ ಪ್ರಗತಿಯಲ್ಲಿ ಅವರ ಪ್ರಮುಖ ಪಾತ್ರವಹಿಸಿದ್ದರೆ.  ಮುಕೇಶ್ ಅಂಬಾನಿಯವರು ಮನೋಜ್ ಮೋದಿಗೆ ಉಡುಗೊರೆಯಾಗಿ ನೀಡಿದ 22 ಅಂತಸ್ತಿನ ಕಟ್ಟಡವು ಮುಂಬೈನ ಪ್ರೀಮಿಯಂ ಸ್ಥಳದಲ್ಲಿದೆ. ಈ ಆಸ್ತಿಯು ಮುಂಬೈನ ನೇಪಿಯನ್ ಸಮುದ್ರ ರಸ್ತೆಯಲ್ಲಿದೆ. ಅವರು ಇತ್ತೀಚೆಗೆ ಮನೋಜ್ ಮೋದಿಗೆ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಆಸ್ತಿಗೆ ವೃಂದಾವನ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ-RBI: ಮತ್ತೊಂದು ಬ್ಯಾಂಕಿನ ಲೈಸನ್ಸ್ ರದ್ದುಗೊಳಿಸಿದೆ ಆರ್ಬಿಐ

ಅಂಬಾನಿ ಯಶಸ್ಸಿನ ಹಿಂದೆ ಮನೋಜ್ ಮೋದಿ
ಮನೋಜ್ ಮೋದಿ ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್‌ನ ನಿರ್ದೇಶಕರಾಗಿ ದೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಮನೋಜ್ ಮೋದಿ ಮುಖೇಶ್ ಅಂಬಾನಿಯ ಆಪ್ತರಲ್ಲಿ ಗುರುತಿಸಿಕೊಂಡಿದ್ದಾರೆ. ರಿಲಯನ್ಸ್‌ನ ಎಲ್ಲಾ ವ್ಯವಹಾರ ಒಪ್ಪಂದಗಳ ಹಿಂದೆ ಮನೋಜ್ ಮೋದಿ ಇದ್ದಾರೆ. ಮುಖೇಶ್ ಅಂಬಾನಿ ಅವರು ಉಡುಗೊರೆಯಾಗಿ ನೀಡಿದ ಕಟ್ಟಡವನ್ನು 1.7 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಆ ಸ್ಥಳದಲ್ಲಿ ದರಗಳು ಪ್ರತಿ ಚದರ ಅಡಿಗೆ 45,100 ರಿಂದ 70,600 ರೂ.

ಇದನ್ನೂ ಓದಿ-Stock Market Update: ಎರಡನೇ ದಿನವೂ ಭಾರಿ ವೇಗ ಪಡೆದುಕೊಂಡ ಷೇರು ಮಾರುಕಟ್ಟೆ, 60 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಲೈಮ್‌ಲೈಟ್‌ನಿಂದ ದೂರವಿರುವ ಮನೋಜ್ ಮೋದಿ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಕ್ರಿಯವಾಗಿಲ್ಲ. ಅವರು ಹಾಜಿರಾ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್, ಜಾಮ್‌ನಗರ ರಿಫೈನರಿ, ಟೆಲಿಕಾಂ ಬಿಸಿನೆಸ್, ರಿಲಯನ್ಸ್ ರಿಟೇಲ್ ಮುಂತಾದ ಹೆಚ್ಚಿನ ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಅಧಿಕಾರದ ವಿಚಾರದಲ್ಲಿ ಸಿಇಒ ಅವರಷ್ಟೇ ಅಧಿಕಾರ ಹೊಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More