Home> Business
Advertisement

RS 2000 Note: ‘3 ವರ್ಷಗಳ ಹಿಂದೆಯೇ 2 ಸಾವಿರ ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತ’!

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಬ್ಯಾಂಕ್‍ಗಳಿಗೆ 2000 ರೂ. ಮುಖಬೆಲೆಯ ನೋಟಿನ ವಹಿವಾಟು ನಡೆಸದಂತೆ ಮತ್ತು ಮುದ್ರಣ ನಿಲ್ಲಿಸುವಂತೆ ನಾವು ಯಾವುದೇ ರೀತಿಯ ಸೂಚನೆ ನೀಡಿಲ್ಲವೆಂದು’ ಹೇಳಿದ್ದರು.

RS 2000 Note: ‘3 ವರ್ಷಗಳ ಹಿಂದೆಯೇ 2 ಸಾವಿರ ರೂ. ನೋಟುಗಳ ಪ್ರಿಂಟಿಂಗ್ ಸ್ಥಗಿತ’!

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಶಾಕಿಂಗ್ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. 3 ವರ್ಷಗಳ ಹಿಂದೆಯೇ ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000 ರೂ. ಮುಖಬೆಲೆಯ ನೋಟುಗಳ ಮುದ್ರಣ ನಿಲ್ಲಿಸಿದೆ ಅಂತಾ ಬಿಹಾರದ ಬಿಜೆಪಿ ಸಂಸದರು ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಮಾತನಾಡಿರುವ ಸುಶೀಲ್ ಮೋದಿ, ‘ATMಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಈ ನೋಟುಗಳ ಚಲಾವಣೆಯಲ್ಲಿಲ್ಲವೆಂದು ಜನಸಾಮಾನ್ಯರೇ ಮಾತನಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಸರ್ಕಾರವೇ ಸ್ಪಷ್ಟನೆ ನೀಡಬೇಕು. ಕಳೆದ 3 ವರ್ಷಗಳ ಹಿಂದೆಯೇ RBI 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಸರ್ಕಾರ ಹಂತಹಂತವಾಗಿ ಈ ನೋಟುಗಳನ್ನು ರದ್ದುಗೊಳಿಸಬೇಕು. ಈ ನೋಟುಗಳನ್ನು ಹೊಂದಿರುವವರಿಗೆ ಬ್ಯಾಂಕ್‍ಗಳಲ್ಲಿ ವಿನಿಮಯ ಮಾಡಿಕೊಳ್ಳಲು 2 ವರ್ಷಗಳ ಕಾಲ ಸಮಯ ನೀಡಬೇಕು’ ಅಂತಾ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Best Mileage Scooters: ಅತ್ಯುತ್ತಮ ಮೈಲೇಜ್ ನೀಡುವ ಸ್ಕೂಟರ್ ಯಾವುದು ಗೊತ್ತಾ... ವರದಿ ಓದಿ

ದೇಶದಲ್ಲಿ 500 ಮತ್ತು 1000 ಸಾವಿರ ರೂ. ಮುಖಬೆಲೆಯ ನೋಟು ಬ್ಯಾನ್ ಮಾಡಿದ ಬಳಿಕ ಹೊಸ 500 ಮತ್ತು 2000 ನೋಟುಗಳನ್ನು ಚಲಾವಣೆಗೆ ತರಲಾಯಿತು. 1000 ಸಾವಿರ ರೂ. ನೋಟು ಇರುವಾಗ 2000 ನೋಟುಗಳನ್ನು ಚಲಾವಣೆಗೆ ತಂದಿದ್ದು ತಪ್ಪು, ಇದರ ಹಿಂದೆ ಯಾವುದೇ ರೀತಿಯ ತರ್ಕವಿಲ್ಲ. 2000 ರೂ. ನೋಟುಗಳು ಮಾದಕವಸ್ತು, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿ ಮತ್ತು ಕಪ್ಪು ಹಣಕ್ಕೆ ಸುಲಭವಾಗಿ ಬಳಕೆಯಾಗುತ್ತಿದೆ ಎಂದು ಸುಶೀಲ್ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಅತಿಹೆಚ್ಚು ಮುಖಬೆಲೆಯ ನೋಟಾಗಿರುವ 2000 ರೂ. ಕಪ್ಪು ಹಣಕ್ಕೆ ಸಮಾನವಾಗಿದೆ. ನಾವು ಅಮೆರಿಕ, ಚೀನಾ, ಜರ್ಮನಿ, ಜಪಾನ್‌ನಂತಹ ಪ್ರಮುಖ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳನ್ನು ನೋಡಿದರೆ, ಅವರ ಬಳಿ 100 ರೂ.ಗಿಂತ ಹೆಚ್ಚಿನ ಕರೆನ್ಸಿ ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರವು ಈ ಬಗ್ಗೆ ಯೋಚಿಸಬೇಕು ಮತ್ತು ಅದನ್ನು ಹಂತ ಹಂತವಾಗಿ ನಿಷೇಧಿಸಬೇಕು. ಕಪ್ಪುಹಣಕ್ಕೆ ಕಡಿವಾಣ ಹಾಕಲು 2000 ರೂ. ಮುಖಬೆಲೆಯ ನೋಟು ಮುದ್ರಿಸುವುದನ್ನು ನಿಲ್ಲಿಸಬೇಕು ಎಂದು ಸುಶೀಲ್ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ನಿಮ್ಮ ಬಳಿಯೂ ಈ ರೀತಿಯ 5 ರೂ. ಮುಖಬೆಲೆಯ ನೋಟು ಇದ್ದರೆ, ರಾತ್ರೋ ರಾತ್ರಿ ಲಕ್ಷಾಧಿಪತಿ ಆಗಬಹುದು! 

ಕಳೆದ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಬ್ಯಾಂಕ್‍ಗಳಿಗೆ 2000 ರೂ. ಮುಖಬೆಲೆಯ ನೋಟಿನ ವಹಿವಾಟು ನಡೆಸದಂತೆ ಮತ್ತು ಮುದ್ರಣ ನಿಲ್ಲಿಸುವಂತೆ ನಾವು ಯಾವುದೇ ರೀತಿಯ ಸೂಚನೆ ನೀಡಿಲ್ಲವೆಂದು’ ಹೇಳಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More