Home> Business
Advertisement

Ration Card: ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ? ಮೊಬೈನಲ್ಲೇ ಚೆಕ್‌ ಮಾಡಿ

Ration Card Updates: ಆನ್‌ಲೈನ್‌ನಲ್ಲಿ ರೇಶನ್ ಕಾರ್ಡ್‌ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಅದರಲ್ಲಿ ಇದೆಯಾ? ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು.

Ration Card: ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ? ಮೊಬೈನಲ್ಲೇ ಚೆಕ್‌ ಮಾಡಿ

Ration Card Updates: ದೇಶದ ಕಡುಬಡವರೂ ಮೂರು ಹೊತ್ತು ನೆಮ್ಮದಿಯಿಂದ ಊಟ ಮಾಡಿಲಿ ಅನ್ನೋ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಷನ್‌ ಕಾರ್ಡ್‌ ವಿತರಿಸುವ ಯೋಜನೆಯನ್ನು ಶುರು ಮಾಡಿದವು. ಇದರಿಂದ ಕೋಟ್ಯಂತರ ಜನರಿಗೆ ಅನುಕೂಲ ಆಗುತ್ತಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಡವರ್ಗದ ಜನರಿಗೆ ಎರಡು ರೀತಿಯ ರೇಶನ್ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಬಡತನದ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಬಡತನದ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.

ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಸರ್ಕಾರದಿಂದ ಅನೇಕ ರೀತಿಯ ಪ್ರಯೋಜನಗಳು ಸಿಗುತ್ತದೆ. ಉಚಿತ ಆಹಾರ ಧಾನ್ಯಗಳು, ಉಚಿತ ಆರೋಗ್ಯ ಸೇವೆ, ಸರ್ಕಾರದ ಸವಲತ್ತುಗಳು ಹೀಗೆ ಅನೇಕ ಸೇವೆಗಳು ಬಿಪಿಎಲ್ ರೇಷನ್ ಕಾರ್ಡ್‌ ಹೊಂದಿರುವವರಿಗೆ ಸಿಗುತ್ತಿವೆ. ಇದೇ ಕಾರಣಕ್ಕೆ ಬಡತನದಲ್ಲಿರುವ ಜನರು ರೇಷನ್ ಕಾರ್ಡ್‌ ಮಾಡಿಸಿಕೊಂಡು ಸರ್ಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ: Gruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣ

ಆದರೆ ನಮ್ಮ ದೇಶದಲ್ಲಿ ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ರೇಶನ್ ಕಾರ್ಡ್ ಸಿಕ್ಕಿರುವುದಿಲ್ಲ. ಕೆಲವರು ತಪ್ಪು ಮಾಹಿತಿಗಳನ್ನು ಕೊಟ್ಟು ರೇಷನ್ ಕಾರ್ಡ್‌ ಮಾಡಿಸಿಕೊಂಡಿರುತ್ತಾರೆ. ಕೆಲವು ಸಾರಿ ರೇಷನ್ ಕಾರ್ಡ್ ವಿತರಣೆ ವೇಳೆ ಆಗುವ ಕೆಲ ದೋಷಗಳಿಂದ ಕುಟುಂಬದ ಕೆಲವು ವ್ಯಕ್ತಿಗಳ ಹೆಸರುಗಳು ರೇಷನ್ ಕಾರ್ಡ್‌ನಿಂದ ಮಿಸ್ ಆಗಿರುತ್ತದೆ. ಇವೆಲ್ಲಾ ಕಾರಣಗಳಿಂದ ಅರ್ಹ ಫಲಾನುಭವಿಗಳಿಗೆ ರೇಷನ್‌ ಕಾರ್ಡ್‌ ಸಿಗದೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ. ಇದೇ ಕಾರಣಕ್ಕೆ ಸರ್ಕಾರ ಕಾಲಕಾಲಕ್ಕೆ ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಅವಕಾಶ ನೀಡುತ್ತಿರುತ್ತದೆ. 

ಅದರಂತೆ ಕೆಲವರು ಆನ್‌ಲೈನ್‌ನಲ್ಲಿ ರೇಶನ್ ಕಾರ್ಡ್‌ಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದು, ಇದೀಗ ರೇಷನ್ ಕಾರ್ಡ್‌ಗೆ ಹೆಸರು ಸೇರ್ಪಡೆ ಆಗಿರುವವರ ಪಟ್ಟಿ ಬಿಡುಗಡೆ ಆಗಿದೆ. ಈ ಪಟ್ಟಿಯನ್ನು ಪರಿಶೀಲಿಸಿ ನಿಮ್ಮ ಹೆಸರು ಅದರಲ್ಲಿ ಇದೆಯಾ? ಅನ್ನೋದರ ಬಗ್ಗೆ ತಿಳಿದುಕೊಳ್ಳಬಹುದು. ಕರ್ನಾಟಕ ಪಡಿತರ ಚೀಟಿ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ? ಎಂದು ಪರಿಶೀಲಿಸುವುದು ಹೇಗೆ ಎಂದು ತಿಳಿಯಿರಿ..

ಇದನ್ನೂ ಓದಿ: ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌

ರೇಷನ್ ಕಾರ್ಡ್‌ನಲ್ಲಿ ಹೆಸರು ಅಪ್‌ಡೇಟ್‌ ಆಗಿರುವ ಬಗ್ಗೆ ತಿಳಿಯುವ ವಿಧಾನ   

  • ಮೊದಲಿಗೆ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್‌ https://ahara.kar.nic.in/Home/EServices ಗೆ ಭೇಟಿ ನೀಡಬೇಕು.
  • Home ಪೇಜ್‌ನಲ್ಲಿ ಬರುವ ಮೆನುವಿನಲ್ಲಿ ಇ-ಸೇವೆಗಳು ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಬೇಕು.
  • ನಂತರ ಇ-ರೇಷನ್ ಕಾರ್ಡ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಬೇಕು.
  • ಈಗ ಗ್ರಾಮ ಪಟ್ಟಿ ಎನ್ನುವ ಇನ್ನೊಂದು ಆಪ್ಶನ್ ಸೆಲೆಕ್ಟ್ ಮಾಡಬೇಕು.
  • ಈಗ ಬರುವ ಪಟ್ಟಿಯಲ್ಲಿ ಈ ನಿಮ್ಮ ಜಿಲ್ಲೆಯ ಹೆಸರು, ತಾಲೂಕಿನ ಹೆಸರು, ಗ್ರಾಮ ಪಂಚಾಯಿತಿ ಹೆಸರು ಮತ್ತು ಗ್ರಾಮದ ಹೆಸರನ್ನು ಭರ್ತಿ ಮಾಡಿರಿ.

ಈ ಎಲ್ಲಾ ಮಾಹಿತಿಗಳನ್ನು ನಮೂದಿಸಿದ ನಂತರ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ರೇಷನ್‌ ಕಾರ್ಡ್‌ ಪಟ್ಟಿ ಬರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ? ಎಂದು ಪರಿಶೀಲಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More