Home> Business
Advertisement

Provident Fund ನಲ್ಲಿ ನೀವೂ ಹಣ ಹೂಡಿಕೆ ಮಾಡುತ್ತೀರಾ? ಇಲ್ಲಿದೆ ಮಹತ್ವದ ಅಪ್ಡೇಟ್!

PF Update: ಪಿಎಫ್ ಚಂದಾದಾರರ ಬಡ್ಡಿ ಪಾವತಿಯಲ್ಲಿನ ವಿಳಂಬದ ಕುರಿತು ಸಚಿವರನ್ನು ಪ್ರಶ್ನಿಸಲಾಗಿ ಮಾರ್ಚ್ 6, 2023ರವರೆಗೆ ಶೇ.98 ರಷ್ಟು ಕೊಡುಗೆ ಸಂಸ್ಥೆಗಳ ಖಾತೆಗೆ ಬಡ್ಡಿಯನ್ನು ಪಾವತಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇಪಿಎಫ್ ಬಡ್ಡಿ ಪಾವತಿ ಪ್ರಕ್ರಿಯೆ ಒಂದು ನಿರಂತರ ಪ್ರಕ್ರಿಯಾಗಿದ್ದು, ನಿಯಮಿತ ಕ್ಲೇಮ್ ಇತ್ಯರ್ಥಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಅದನ್ನು ಅಪ್ಡೇಟ್ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
 

Provident Fund ನಲ್ಲಿ ನೀವೂ ಹಣ ಹೂಡಿಕೆ ಮಾಡುತ್ತೀರಾ? ಇಲ್ಲಿದೆ ಮಹತ್ವದ ಅಪ್ಡೇಟ್!

Provident Fund Latest Update: ಪ್ರತಿ ತಿಂಗಳು ನೌಕರವರ್ಗದ ಜನರ ಪಿಎಫ್ ಕೊಡುಗೆ ಮತ್ತು ಅವರ ಪರವಾಗಿ ಅವರ ಸಂಸ್ಥೆಯ ಕೊಡುಗೆಯನ್ನು ಅವರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಲ್ಲಿ ಒಂದು ಭಾಗವನ್ನು ಉದ್ಯೋಗದಾತರ ಮೂಲಕ ನೀಡಲಾಗುತ್ತದೆ ಮತ್ತು ಇನ್ನೊಂದು ಭಾಗವನ್ನು ಉದ್ಯೋಗಿಯಿಂದ ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಉದ್ಯೋಗದಾತರ ಮೂಲಕ ಪಿಎಫ್‌ನಲ್ಲಿ ಮೊತ್ತವನ್ನು ಜಮಾ ಮಾಡಲು ವಿಳಂಬವಾಗುತ್ತದೆ ಮತ್ತು ಪಿಎಫ್ ಪಾಸ್‌ಬುಕ್ ಅನ್ನು ನವೀಕರಿಸಲಾಗುವುದಿಲ್ಲ. ಹೀಗಿರುವಾಗ ಪಿಎಫ್ ಪಾಸ್ ಬುಕ್ ಅಪ್ ಡೇಟ್ ಆಗದಿದ್ದರೆ ಪಿಎಫ್ ಹಣದಲ್ಲಿ ಇಳಿಕೆಯಾಗುತ್ತದೆಯೇ ಎಂಬ ಗೊಂದಲ ಹಲವರ ಮನದಲ್ಲಿ ಮೂಡುತ್ತದೆ. ಬನ್ನಿ ಈ ಕುರಿತು ಪ್ರಕಟಗೊಂಡ ಹೊಸ ಅಪ್ಡೇಟ್ ಏನು ತಿಳಿದುಕೊಳ್ಳೋಣ...

ಪಿಎಫ್ ಪಾಸ್ಬುಕ್

ನಿಮ್ಮ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯ ಪಾಸ್‌ಬುಕ್ ಅನ್ನು ನವೀಕರಿಸದಿದ್ದರೆ ನಿಮ್ಮ ಪಿಎಫ್ ಖಾತೆಯಲ್ಲಿ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ. ಸರ್ಕಾರದ ಪ್ರಕಾರ, ಇಪಿಎಫ್ ಸದಸ್ಯರ ಪಾಸ್‌ಬುಕ್ ನವೀಕರಣವು ಕೇವಲ ಪ್ರವೇಶ ಪ್ರಕ್ರಿಯೆಯಾಗಿದೆ ಮತ್ತು ಪಾಸ್‌ಬುಕ್‌ನಲ್ಲಿ ಬಡ್ಡಿಯನ್ನು ದಾಖಲಿಸಿದ ದಿನಾಂಕವು ಖಾತೆದಾರರ ಮೇಲೆ  ಯಾವುದೇ ರೀತಿಯ ಆರ್ಥಿಕ ಪರಿಣಾಮಗಳನ್ನು ಬೀರುವುದಿಲ್ಲ. ಲೋಕಸಭೆಯಲ್ಲಿ ಸೋಮವಾರ (ಮಾರ್ಚ್ 13, 2023) ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಪಾಸ್‌ಬುಕ್ ಅನ್ನು ನವೀಕರಿಸದಿದ್ದರೂ ಸಹ ಇಪಿಎಫ್ ಸದಸ್ಯರಿಗೆ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ-ನಿಮ್ಮ ಬಳಿಯೂ ಮೆಡಿಕಲ್ ಇನ್ಸೂರೆನ್ಸ್ ಇದೆಯಾ? ಈ ನೆಮ್ಮದಿಯ ಸುದ್ದಿ ನಿಮಗಾಗಿ

ವುದೇ ಹಾನಿ ಇಲ್ಲ
ಸಚಿವರ ಪ್ರಕಾರ, ಇಪಿಎಫ್‌ನ ಮಾಸಿಕ ರನ್ನಿಂಗ್ ಬ್ಯಾಲೆನ್ಸ್ ಅನ್ನು ಯಾವಾಗಲೂ ಆ ವರ್ಷದ ಮುಕ್ತಾಯದ ಬ್ಯಾಲೆನ್ಸ್‌ಗೆ ಸೇರಿಸಲಾಗುತ್ತದೆ. ಆದ್ದರಿಂದ ಪಾಸ್‌ಬುಕ್‌ನಲ್ಲಿ ನಮೂದಿಸಿದ ದಿನಾಂಕವು EPF ಬಡ್ಡಿ ಕ್ರೆಡಿಟ್ ಮೇಲೆ ಪರಿಣಾಮ ಬೀರುವುದಿಲ್ಲ. "ಸದಸ್ಯರ ಪಾಸ್‌ಬುಕ್ ಅನ್ನು ಬಡ್ಡಿಯೊಂದಿಗೆ ನವೀಕರಿಸುವುದು ಕೇವಲ ಪ್ರವೇಶ ಪ್ರಕ್ರಿಯೆಯಾಗಿದೆ, ಸದಸ್ಯನ ಪಾಸ್‌ಬುಕ್‌ನಲ್ಲಿ ಬಡ್ಡಿಯನ್ನು ದಾಖಲಿಸಿದ ದಿನಾಂಕವು ನಿಜವಾದ ಆರ್ಥಿಕ ಪರಿಣಾಮ ಬೀರುವುದಿಲ್ಲ. ಏಕೆಂದರೆ ವರ್ಷಕ್ಕೆ ಗಳಿಸಿದ ಬಡ್ಡಿಯನ್ನು ಯಾವಾಗಲೂ ಅಂತಿಮ ಬಾಕಿಗೆ ಸೇರಿಸಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ. ಆದ್ದರಿಂದ "ಸದಸ್ಯರಿಗೆ ಇದರಿಂದ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ"ಯಾವುದೇ ಆರ್ಥಿಕ ನಷ್ಟವಿಲ್ಲ." ಅಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Big Update: ದೇಶಾದ್ಯಂತ ಪಡಿತರ ವಿತರಣೆಗೆ ಹೊಸ ನಿಯಮ ಜಾರಿ! ನೀವೂ ತಿಳಿದುಕೊಳ್ಳಿ...

ಇಪಿಎಫ್ ಬಡ್ಡಿ ಪಾವತಿಯಲ್ಲಿ ವಿಳಂಬ
ಖಾತೆದಾರರಿಗೆ ಇಪಿಎಫ್ ಬಡ್ಡಿ ಕ್ರೆಡಿಟ್ ವಿಳಂಬದ ಕುರಿತು ಕೇಳಲಾಗಿರುವ ಪ್ರಶ್ನೆಗೆ ಉತ್ತರಿರುವ ಸಚಿವರು, ಮಾರ್ಚ್ 6, 2023 ರವರೆಗೆ 98% ಕೊಡುಗೆ ಸಂಸ್ಥೆಗಳ ಸದಸ್ಯರ ಖಾತೆಗಳಲ್ಲಿ ಬಡ್ಡಿಯನ್ನು ಠೇವಣಿ ಮಾಡಲಾಗಿದೆ ಹೇಳಿದ್ದಾರೆ. ಇಪಿಎಫ್ ಬಡ್ಡಿ ಕ್ರೆಡಿಟ್ ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ನಿಯಮಿತ ಕ್ಲೈಮ್ ಇತ್ಯರ್ಥಕ್ಕೆ ಅಡ್ಡಿಯಾಗದಂತೆ ನಿಗದಿತ ರೀತಿಯಲ್ಲಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Read More