Home> Business
Advertisement

ಉಳಿತಾಯ ಖಾತೆಯ ಬಡ್ಡಿ ದರ ಇಳಿಸಿದ ಬ್ಯಾಂಕ್ , ಸೆ. ಒಂದರಿಂದ ಜಾರಿಯಾಗಲಿದೆ ಹೊಸ ನಿಯಮ

PNB Savings Account : ಸೆಪ್ಟೆಂಬರ್ 1 ರಿಂದ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಹೊಡೆತ ಬೀಳಲಿದೆ. ನೀವು  ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಲಿದೆ.

ಉಳಿತಾಯ ಖಾತೆಯ ಬಡ್ಡಿ ದರ ಇಳಿಸಿದ ಬ್ಯಾಂಕ್ , ಸೆ. ಒಂದರಿಂದ ಜಾರಿಯಾಗಲಿದೆ ಹೊಸ ನಿಯಮ

ನವದೆಹಲಿ : PNB Savings Account : ಸೆಪ್ಟೆಂಬರ್ 1 ರಿಂದ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಹೊಡೆತ ಬೀಳಲಿದೆ. ನೀವು  ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ (PNB) ಉಳಿತಾಯ ಖಾತೆ ಹೊಂದಿದ್ದರೆ, ಇದು ನಿಮಗೆ ಪ್ರಮುಖ ಸುದ್ದಿಯಾಗಲಿದೆ. ಯಾಕೆಂದರೆ, ಇನ್ನು ಮುಂದೆ ಬ್ಯಾಂಕ್ ಉಳಿತಾಯ ಖಾತೆಯ (Bank saving account) ಮೇಲೆ ಕಡಿಮೆ ಬಡ್ಡಿ ನೀಡಲಿದೆ. ಸೆಪ್ಟೆಂಬರ್ 1 ರಿಂದ ಉಳಿತಾಯ ಖಾತೆಯ ಬಡ್ಡಿದರಗಳನ್ನು ಕಡಿಮೆ ಮಾಡಲು ಬ್ಯಾಂಕ್ ನಿರ್ಧರಿಸಿದೆ. 

ಉಳಿತಾಯ ಖಾತೆಯ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿದ PNB : 

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab national bank) ಅಧಿಕೃತ ವೆಬ್ಸೈಟ್ https://www.pnbindia.in/Interest-Rates-Deposit.html ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು (interest rate) ಸೆಪ್ಟೆಂಬರ್ 1 ರಿಂದ ಕಡಿತಗೊಳಿಸಲಾಗುವುದು. ಉಳಿತಾಯ ಖಾತೆಗಳ ಬಡ್ಡಿದರವನ್ನು ವಾರ್ಷಿಕ ಶೇ. 3 ರಿಂದ 2.90 ಕ್ಕೆ ಇಳಿಸಲು  PNB  ನಿರ್ಧರಿಸಿದೆ. PNBಯ ಈ ನಿರ್ಧಾರವು ಬ್ಯಾಂಕಿನ ಹೊಸ ಮತ್ತು ಹಳೆಯ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : EPFO New Rule: ಸೆಪ್ಟೆಂಬರ್‌ನಿಂದ ಬದಲಾಗಲಿರುವ ಈ ಪಿಎಫ್ ನಿಯಮದ ಬಗ್ಗೆ ನಿಮಗೂ ತಿಳಿದಿರಲಿ

ಎಸ್‌ಬಿಐ ಕೂಡ ಬಡ್ಡಿದರಗಳನ್ನು ಕಡಿಮೆ ಮಾಡಿದೆ:
ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡುವ ಏಕೈಕ ಬ್ಯಾಂಕ್ PNB ಅಲ್ಲ. ಇದಕ್ಕೂ ಮುನ್ನ ದೇಶದ ಅತಿದೊಡ್ಡ ಬ್ಯಾಂಕ್ SBI ಕೂಡ ಬಡ್ಡಿದರವನ್ನು ಕಡಿತಗೊಳಿಸಿದೆ. SBI ಉಳಿತಾಯ ಖಾತೆಯ ಬಡ್ಡಿದರವನ್ನು ವಾರ್ಷಿಕವಾಗಿ 2.70 ಪ್ರತಿಶತಕ್ಕೆ ಇಳಿಸಿದೆ. ಎಸ್‌ಬಿಐ ಮತ್ತು ಪಿಎನ್‌ಬಿ ದೇಶಗಳಲ್ಲಿ ನಂಬರ್ ಒನ್ ಮತ್ತು ನಂಬರ್ 2 ಅತಿ ದೊಡ್ಡ ಬ್ಯಾಂಕ್‌ಗಳಾಗಿವೆ. IDBI, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ (Bank of Baroda) ಈ ಎರಡು ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ. ಕೋಟಕ್ ಮಹೀಂದ್ರಾ ಮತ್ತು ಇಂಡಸ್ಇಂಡ್ ಬ್ಯಾಂಕ್ ಉಳಿತಾಯ ಖಾತೆಗಳಿಗೆ ವಾರ್ಷಿಕ 4 ರಿಂದ 6 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತವೆ.

ಸರ್ಕಾರಿ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯ ಬಡ್ಡಿ ದರಗಳು :
IDBI ಬ್ಯಾಂಕ್ ತನ್ನ ಗ್ರಾಹಕರಿಗೆ ಉಳಿತಾಯ ಖಾತೆಗಳ ಮೇಲೆ ವಾರ್ಷಿಕವಾಗಿ 3 ರಿಂದ 3.4% ವರೆಗಿನ ಬಡ್ಡಿಯನ್ನು ನೀಡುತ್ತದೆ. ಕೆನರಾ ಬ್ಯಾಂಕ್  (canara bank) 2.90 ಶೇಕಡದಿಂದ 3.20 ಪ್ರತಿಶತದವರೆಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಬ್ಯಾಂಕ್ ಆಫ್ ಬರೋಡಾ ಕೂಡ  2.75 ಶೇಕಡದಿಂದ 3.20 ಶೇಕಡಾ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 3.10 ಶೇಕಡಾ ಬಡ್ಡಿ ನೀಡುತ್ತದೆ. 

ಇದನ್ನೂ ಓದಿ : Indian Railways: ರೈಲು ಟಿಕೆಟ್ ಬುಕ್ ಮಾಡಿ ಉಡುಗೊರೆ ಪಡೆದು, ಚಲಿಸುವ ರೈಲಿನಲ್ಲಿ ಉಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More