Home> Business
Advertisement

PhonePe ಬಳಕೆದಾರರಿಗೆ 24K ಗೋಲ್ಡ್ ಎಸ್ಐಪಿ ಬಿಡುಗಡೆ, ಏನಿದರ ಹೂಡಿಕೆಯ ಲಾಭ?

Phone Pay Gold SIP: ಗೋಲ್ಡ್ SIP ಪ್ರಾರಂಭಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ ಮತ್ತು ಒಮ್ಮೆ ಮಾತ್ರ ಮಾಡಬೇಕಾಗಿದೆ. ಇದರ ನಂತರ, ನಿಯಮಿತ ಮಧ್ಯಂತರದಲ್ಲಿ ನಿಮ್ಮ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಸ್ವಯಂ ಚಾಲಿತವಾಗಿ ಕಡಿತಗೊಳ್ಳಲಿದೆ. 
 

PhonePe ಬಳಕೆದಾರರಿಗೆ 24K ಗೋಲ್ಡ್ ಎಸ್ಐಪಿ ಬಿಡುಗಡೆ, ಏನಿದರ ಹೂಡಿಕೆಯ ಲಾಭ?

Gold SIP - PhonePe 24K ಚಿನ್ನದ SIP: ಡಿಜಿಟಲ್ ಪಾವತಿ ಕಂಪನಿ PhonePe ಚಿನ್ನದಲ್ಲಿ ಹೂಡಿಕೆ ಮಾಡಲು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (SIP) ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿಯಲ್ಲಿ, ಬಳಕೆದಾರರು ಈಗ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು 24 ಕ್ಯಾರೆಟ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಅಡಿಯಲ್ಲಿ, ಹೂಡಿಕೆದಾರರು ತಮ್ಮ ಚಿನ್ನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಲಿದ್ದಾರೆ ಮತ್ತು ಅವರು ಅದನ್ನು ಯಾವುದೇ ಸಮಯದಲ್ಲಿ ಮಾರಾಟ ಮಾಡಬಹುದು ಮತ್ತು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಪಡೆಯಬಹುದು.

ಇದನ್ನೂ ಓದಿ-PM Kisan : ರೈತರೆ ಗಮನಿಸಿ, ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್!

ಈ ಯೋಜನೆಯ ವಿಶೇಷತೆ ಏನು?
ಚಿನ್ನದ SIP ಯಲ್ಲಿ PhonePe ನಲ್ಲಿ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮೂಲಕ ಹೂಡಿಕೆ ಮಾಡಬಹುದು. ಗೋಲ್ಡ್ SIP ಅನ್ನು ಆರಂಭಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ ಮತ್ತು ಒಮ್ಮೆ ಮಾತ್ರ ಮಾಡಬೇಕಾಗಿದೆ. ನಂತರ, ನಿಯಮಿತ ಮಧ್ಯಂತರದಲ್ಲಿ ನಿಮ್ಮ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ, ಬಳಕೆದಾರರು ತಿಂಗಳಿಗೆ 100 ರೂ.ಗಳಿಂದ ಹೂಡಿಕೆಯನ್ನು ಆರಂಭಿಸಬಹುದು. ಪ್ರಸ್ತುತ, Grow ಮತ್ತು MobiKwik SIP ಮೂಲಕ ಚಿನ್ನದಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಹೊಂದಿರುವ ಇತರ ಕೆಲವು ವೇದಿಕೆಗಳಾಗಿವೆ.

ಇದನ್ನೂ ಓದಿ-ನೀವು ಆಧಾರ್ ಕಾರ್ಡ್ ಮೂಲಕ ಹಣ ಗಳಿಸಬಹುದು! ಹೇಗೆ ಇಲ್ಲಿದೆ

ಕಂಪನಿ ಹೇಳಿದ್ದೇನು?
ಈ ಕುರಿತು ಮಾತನಾಡಿರುವ PhonePe ನ ಹೂಡಿಕೆಯ ಮುಖ್ಯಸ್ಥ ಟೆರೆನ್ಸ್ ಲೂಸಿನ್, “PhonePe ತನ್ನ 380 ಮಿಲಿಯನ್ ಬಳಕೆದಾರರ ವೈವಿಧ್ಯಮಯ ಹೂಡಿಕೆ ಅಗತ್ಯಗಳನ್ನು ಪೂರೈಸುವ ಉತ್ಪನ್ನಗಳನ್ನು ಮತ್ತು ಕೊಡುಗೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಭಾರತೀಯರು ಚಿನ್ನವನ್ನು ಖರೀದಿಸಲು ಉತ್ತಮವಾದ ಮಾರ್ಗಗಳನ್ನು ಹುಡುಕುತ್ತಿರುವುದರಿಂದ, UPI ಮೂಲಕ ಗೋಲ್ಡ್ SIP ಅನ್ನು ಪ್ರಾರಂಭಿಸುವ ಆಯ್ಕೆಯನ್ನು ನಮ್ಮ ಬಳಕೆದಾರರಿಗೆ ನೀಡಲು ನಾವು ಸಂತಸ ವ್ಯಕ್ತಪಡಿಸುತ್ತೇವೆ. ಬಳಕೆದಾರರು PhonePe ನ ಗೋಲ್ಡ್ SIP ನಲ್ಲಿ ಸಣ್ಣ ಮತ್ತು ನಿಯಮಿತ ಮಾಸಿಕ ಹೂಡಿಕೆಗಳನ್ನು ಮಾಡಲು ಇದರಿಂದ ಸಾಧ್ಯವಾಗಲಿದೆ. ಇದರ ಮೂಲಕ 24K ಚಿನ್ನವನ್ನು ಖರೀದಿಸುವಾಗ ಯಾವುದೇ ತೊಂದರೆಯಿಲ್ಲದೆ ದೀರ್ಘಾವಧಿಯಲ್ಲಿ ಹೂಡಿಕೆ ಮಾಡಬಹುದು" ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Read More