Home> Business
Advertisement

Petrol Price: ದೇಶದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

Petrol And Diesel Price in India: ನವದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 96.72 ರೂ. ಮತ್ತು ಡೀಸೆಲ್ 89.62 ರೂ.ನಂತೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 106.31 ರೂ. ಮತ್ತು ಡೀಸೆಲ್ 94.27 ರೂ.ಗೆ ಮಾರಾಟವಾಗುತ್ತಿದೆ.

Petrol Price: ದೇಶದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ

ನವದೆಹಲಿ: ತೈಲ ಕಂಪನಿಗಳು ಮಂಗಳವಾರ(ಆಗಸ್ಟ್ 29)ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಬಿಡುಗಡೆ ಮಾಡಿದೆ. ದೇಶದ ಕೆಲವು ನಗರಗಳಲ್ಲಿ ಇಂಧನ ದರದಲ್ಲಿ ಬದಲಾವಣೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ 14 ಪೈಸೆ ಮತ್ತು ಡೀಸೆಲ್ 13 ಪೈಸೆಯಷ್ಟು ಏರಿಕೆಯಾಗಿದೆ. ಮಹಾನಗರಗಳಾದ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಇಂಧನ ದರಗಳು ಸ್ಥಿರವಾಗಿವೆ.

ನವದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 96.72 ರೂ. ಮತ್ತು ಡೀಸೆಲ್ 89.62 ರೂ.ನಂತೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 106.31 ರೂ. ಮತ್ತು ಡೀಸೆಲ್ 94.27 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‍ಗೆ 106.03 ರೂ. ಮತ್ತು ಡೀಸೆಲ್ 92.76 ರೂ.ನಂತೆ ಮಾರಾಟವಾಗತ್ತಿದೆ. ಇನ್ನು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 101.94 ರೂ. ಮತ್ತು ಡೀಸೆಲ್ 87.89 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಹೊಸ ಟೊಯೊಟಾ ರುಮಿಯಾನ್ ಬುಕಿಂಗ್ ಗೆ ಚಾಲನೆ, ಆರಂಭಿಕ ಬೆಲೆ ಎಷ್ಟು ಗೊತ್ತೇ?

 ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ!

ಮಂಗಳವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. WTI ಕಚ್ಚಾ ತೈಲವು ಶೇ.0.04ರಷ್ಟು ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 80.07 ಡಾಲರ್‍ನಂತೆ ವಹಿವಾಟು ನಡೆಸುತ್ತಿದೆ. ಇನ್ನು ಬ್ರೆಂಟ್ ಕಚ್ಚಾ ತೈಲವು ಶೇ.0.04ರಷ್ಟು ಇಳಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 84.39 ಡಾಲರ್‍ನಂತೆ ಮಾರಾಟವಾಗುತ್ತಿದೆ.   

ದೇಶದ ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್ & ಡೀಸೆಲ್ ದರ

ನಗರ ಪೆಟ್ರೋಲ್

ಡೀಸೆಲ್

ಬೆಂಗಳೂರು

101.94 87.89
ನವದೆಹಲಿ ₹96.72 ₹89.62
ಮುಂಬೈ ₹106.31 ₹94.27
ಕೋಲ್ಕತ್ತಾ ₹106.03 ₹92.76
ಲಕ್ನೋ ₹96.57 ₹89.76
ನೋಯ್ಡಾ ₹96.79 ₹89.96
ಗುರುಗ್ರಾಮ ₹97.18 ₹90.05
ಚಂಡೀಗಢ ₹96.20 ₹84.26
ಪಾಟ್ನಾ ₹107.24 ₹94.04

ಇಂಧನ ದರವನ್ನು ಈ ರೀತಿ ತಿಳಿದುಕೊಳ್ಳಿ

ನಿಮ್ಮ ನಗರದ ಪ್ರತಿದಿನದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಿಳಿದುಕೊಳ್ಳಲು ಬಯಸಿದರೆ, HPCL ಗ್ರಾಹಕರು HPPRICE <ಡೀಲರ್ ಕೋಡ್>ನ್ನು 9222201122 ನಂಬರ್‍ಗೆ  ಕಳುಹಿಸಬೇಕು. ಮತ್ತೊಂದೆಡೆ ಇಂಡಿಯನ್ ಆಯಿಲ್‌ನ ಗ್ರಾಹಕರು RSP <ಡೀಲರ್ ಕೋಡ್>ನ್ನು 9224992249 ಸಂಖ್ಯೆಗೆ ಕಳುಹಿಸಬೇಕು. BPCLನ ಗ್ರಾಹಕರಿಗೆ ಬೆಲೆಯನ್ನು ತಿಳಿಯಲು <ಡೀಲರ್ ಕೋಡ್>ನ್ನು 9223112222ಗೆ ಕಳುಹಿಸಬೇಕು. ಕೆಲವೇ ನಿಮಿಷಗಳಲ್ಲಿ ನೀವು ಇತ್ತೀಚಿನ ಇಂಧನ ದರಗಳ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ರೈಲಿನ ಪೂರ್ತಿ ಕೋಚ್ ಅನ್ನು ಸುಲಭವಾಗಿ ಬುಕ್ ಮಾಡಲು ಈ ವೆಬ್ ಸೈಟ್ ಬಳಸಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More