Home> Business
Advertisement

Petrol Diesel Price Hike: ಪೆಟ್ರೋಲ್-ಡೀಸೆಲ್ ಮತ್ತೆ ದುಬಾರಿ

Petrol-Diesel Price: ಕಳೆದ 16 ದಿನಗಳಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಬುಧವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಹೆಚ್ಚಳವಾಗಿದೆ ಎಂಬುದನ್ನು ತಿಳಿಯೋಣ. 

Petrol Diesel Price Hike: ಪೆಟ್ರೋಲ್-ಡೀಸೆಲ್ ಮತ್ತೆ ದುಬಾರಿ

Petrol-Diesel Price: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. 16 ದಿನಗಳಲ್ಲಿ 14ನೇ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಕಳೆದ 16 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 10 ರೂ. ಹೆಚ್ಚಳವಾಗಿದೆ.  

ಡೀಸೆಲ್-ಪೆಟ್ರೋಲ್ ಬೆಲೆ ತುಂಬಾ ಹೆಚ್ಚಾಗಿದೆ:

ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ (Petrol Diesel) ಎರಡಕ್ಕೂ ಲೀಟರ್‌ಗೆ 80 ಪೈಸೆ ಹೆಚ್ಚಳ ಘೋಷಿಸಿವೆ. ಇದು 16 ದಿನಗಳಲ್ಲಿ 14 ನೇ ಹೆಚ್ಚಳವಾಗಿದೆ. ಈ ಏರಿಕೆಯೊಂದಿಗೆ ಇಲ್ಲಿಯವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 10 ರೂ. ಈ ಏರಿಕೆಯೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 105.41 ರೂ ಆಗ.ಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 96.67 ರೂ. ಆಗಿದೆ.

ಇದನ್ನೂ ಓದಿ- PM Free Silai Machine Yojana: ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಇಲ್ಲಿದೆ ಸುಲಭ ಮಾರ್ಗ

ಮುಂಬೈನಲ್ಲಿ ಪೆಟ್ರೋಲ್ ದರ (Petrol Price) 80 ಪೈಸೆ ಹೆಚ್ಚಳದ ನಂತರ ಲೀಟರ್‌ಗೆ 106.21 ರೂ ಮತ್ತು ಡೀಸೆಲ್ ಬೆಲೆ 104.7ರೂ. ತಲುಪಿದೆ.

ಬೆಲೆ ಏರಿಕೆಯ ಮಧ್ಯೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಇತರ ದೇಶಗಳಿಗೆ ಹೋಲಿಸಿದರೆ ಇಂಧನ ಬೆಲೆ ಏರಿಕೆಯ ವಿಷಯದ ಬಗ್ಗೆ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು. ಭಾರತದಲ್ಲಿ ಇಂಧನ ಬೆಲೆಗಳು ಇತರ ದೇಶಗಳ ಬೆಲೆಗಳ 1/10 ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ- Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ

ಏಪ್ರಿಲ್ 2021 ಮತ್ತು ಮಾರ್ಚ್ 2022 ರ ನಡುವಿನ ಗ್ಯಾಸೋಲಿನ್ (ಪೆಟ್ರೋಲ್) ಬೆಲೆಗಳನ್ನು ಹೋಲಿಸಿದರೆ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಲ್ಲಿನ ಬೆಲೆಗಳು ಶೇಕಡಾ 51 ರಷ್ಟು, ಕೆನಡಾದಲ್ಲಿ ಶೇಕಡಾ 52 ರಷ್ಟು, ಜರ್ಮನಿಯಲ್ಲಿ ಶೇಕಡಾ 55 ರಷ್ಟು, ಯುನೈಟೆಡ್ ಕಿಂಗ್‌ಡಮ್ (ಯುಕೆ) ಶೇ. 55, ಫ್ರಾನ್ಸ್ ಶೇ 50, ಸ್ಪೇನ್ ಶೇ. 58ರಷ್ಟು ಏರಿಕೆಯಾಗಿದೆ. ಆದರೆ ಭಾರತದಲ್ಲಿ ಕೇವಲ 5 ಪ್ರತಿಶತವಷ್ಟೇ ಹೆಚ್ಚಳವಾಗಿದೆ ಎಂದು ಪುರಿ ಲೋಕಸಭೆಯಲ್ಲಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More