Home> Business
Advertisement

Online Money Transfer:ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯೋದ್ರಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ?

Online Money Transfer without Internet: ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್‌ವರ್ಕ್‌ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್‌ಲೈನ್‌ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗಲಿದೆ. 
 

Online Money Transfer:ಇಂಟರ್ನೆಟ್ ಇಲ್ಲದೆಯೇ ಚಿಟಿಕೆ ಹೊಡೆಯೋದ್ರಲ್ಲಿ ಹಣ ವರ್ಗಾವಣೆ ಮಾಡುವುದು ಹೇಗೆ?

ನವದೆಹಲಿ: Steps for Online Money Transfer without Internet - ಇತ್ತೀಚಿನ ದಿನಗಳಲ್ಲಿ UPI ಪಾವತಿಗಳ ಮೇಲೆಯೇ ಜನ ಹೆಚ್ಚು ಅವಲಂಬಿತರಾಗಿರುತ್ತಾರೆ. ಹಲವು ಬಾರಿ  UPI ಮೂಲಕ ಪಾವತಿ ಮಾಡುವ ವೇಳೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ನಿಧಾನವಾದ ಇಂಟರ್ನೆಟ್ ವೇಗ ಅಥವಾ ಕಳಪೆ ನೆಟ್‌ವರ್ಕ್‌ನಿಂದಾಗಿ ಪೇಮೆಂಟ್ ವಿಫಲವಾಗಬಹುದು. ಆದರೆ ಆಫ್‌ಲೈನ್‌ನಲ್ಲಿಯೂ UPI ಪೇಮೆಂಟ್ ಮಾಡುವುದು ಸಾಧ್ಯವಾಗುತ್ತದೆ. ಬಳಕೆದಾರರು ತಮ್ಮ ಫೋನ್‌ಗಳ ಮೂಲಕ  ಪಾವತಿಗಳನ್ನು ಮಾಡಬಹುದಾಗಿದ್ದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು.

ಯಾವುದೇ ಸಮಸ್ಯೆಯಿಲ್ಲದೆ ಪಾವತಿ ಮಾಡಲು ಕನಿಷ್ಟ ನೆಟ್‌ವರ್ಕ್ ಕವರೇಜ್ ಇದ್ದರು ಸಾಕಾಗುತ್ತದೆ.  ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಫೋನ್‌ನಲ್ಲಿ *99# USSD ಕೋಡ್ ಅನ್ನು ಡಯಲ್ ಮಾಡಬೇಕು. ನಿಮ್ಮ ಫೋನ್‌ನನಲ್ಲಿ *99# ಅನ್ನು ಹಾಕಿ Dial ಬಟನ್ ಮೇಲೆ ಒತ್ತಿ. ಬಳಿಕ ನಿಮ್ಮ ಬ್ಯಾಂಕ್ (Bank) ಅನ್ನು ಆಯ್ಕೆ ಮಾಡಲು ಪಾಪ್-ಅಪ್ ಬರುತ್ತದೆ. ಆಗ ಪಟ್ಟಿಯಿಂದ ಬ್ಯಾಂಕ್ ಖಾತೆಯನ್ನು  ಆಯ್ಕೆ ಮಾಡಬೇಕು.

ಇದನ್ನೂ ಓದಿ-Largest Comet Towards Earth: ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಇದುವರೆಗಿನ ಅತಿ ದೊಡ್ಡ ಧೂಮಕೇತು

1.ಈಗ, ನಿಮ್ಮ UPI ಪಿನ್ ಅನ್ನು ರಚಿಸಿ ಮತ್ತು ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ ಆರು  ಅಂಕಿಗಳನ್ನು ನಮೂದಿಸಿ. 
2. ನಿಮ್ಮ ಡೆಬಿಟ್ ಕಾರ್ಡ್‌ನ ಮುಕ್ತಾಯ ದಿನಾಂಕವನ್ನು ನಮೂದಿಸಿ. 
3. ನಿಮ್ಮ ಆರು-ಅಂಕಿಯ UPI ಪಿನ್ ಅನ್ನು ಹಾಕಿ ಕಂಫರ್ಮ್ ಮಾಡಿ. 
4. ಈಗ ನಿಮ್ಮ UPI ಪಿನ್ ಅನ್ನು ಹೊಂದಿಸಲಾಗುವುದು. 
5. ಈಗ ಮತ್ತೆ *99# ಅನ್ನು ಡಯಲ್ ಮಾಡಿ, 
6. ನೀವು ಬಹಳಷ್ಟು ಆಯ್ಕೆಗಳಿರುವ ಮತ್ತೊಂದು ಪಟ್ಟಿಯನ್ನು ಪಡೆಯುವಿರಿ. 

ಇದನ್ನೂ ಓದಿ -Share Market: 1100ಕ್ಕೂ ಹೆಚ್ಚು ಅಂಕಗಳಿಂದ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರ 3 ಲಕ್ಷ ಕೋಟಿ ರೂ.ಗುಳುಂ

7. ನೀವು ಹಣವನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದರೆ 1 ನಂಬರ್ ಟೈಪ್ ಮಾಡಿ ಮತ್ತು ಸೆಂಡ್ ಮಾಡಿ. 
8. ಪಾವತಿ ಸ್ವೀಕರಿಸುವವರ  ಸಂಖ್ಯೆಯನ್ನು ಟೈಪ್ ಮಾಡಿ ಸೆಂಡ್ ಮಾಡಿ.
9. ಈಗ, ನಿಮ್ಮ UPI ಖಾತೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸೆಂಡ್ ಮೇಲೆ ಟ್ಯಾಪ್ ಮಾಡಿ. 
10. ಮೊತ್ತವನ್ನು ಹಾಕಿ ಸೆಂಡ್ ಮಾಡಿ. 
11. ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ UPI ಪಿನ್ ನಮೂದಿಸಿ. ಇಷ್ಟು ಮಾಡಿದರೆ ಸಾಕು ಇಂಟರ್ನೆಟ್ ಇಲ್ಲದೆಯೇ ನಿಮ್ಮ UPI ವಹಿವಾಟು ಪೂರ್ಣಗೊಳ್ಳುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More