Home> Business
Advertisement

LPG Gas Connection: ಅಡ್ರೆಸ್ ಪ್ರೂಫ್ ಇಲ್ಲದೆಯೇ ಸಿಗುತ್ತದೆ ಗ್ಯಾಸ್ ಕನೆಕ್ಷನ್ ಹೇಗೆ ತಿಳಿಯಿರಿ

ಇಂಡೇನ್‌ನ ವಿತರಕರ ನೆಟ್ ವರ್ಕ್ ಅಥವಾ ಇಂಡಿಯನ್ ರೀಟೆಲ್ ಔಟ್ ಲೆಟ್ ಗಳಲ್ಲಿ ಈ ಸಿಲಿಂಡೆರ್ ಅನ್ನು ಪಡೆಯ ಬಹುದು. ಈ ಸಿಲಿಂಡರ್ ಗಾಗಿ ಗುರುತಿನ ಚೀಟಿಯನ್ನು ಒದಗಿಸಬೇಕು ಮತ್ತು ಬೆಲೆ ಪಾವತಿಸಬೇಕು. 

LPG Gas Connection: ಅಡ್ರೆಸ್ ಪ್ರೂಫ್ ಇಲ್ಲದೆಯೇ ಸಿಗುತ್ತದೆ ಗ್ಯಾಸ್ ಕನೆಕ್ಷನ್ ಹೇಗೆ ತಿಳಿಯಿರಿ

ನವದೆಹಲಿ : ನೀವು LPG ಸಂಪರ್ಕವನ್ನು ಪಡೆಯಲು ಬಯಸಿದ್ದು, ನಿಮ್ಮ ಬಳಿ ಅಡ್ರೆಸ್ ಪ್ರೋಫ್ ಇಲ್ಲದಿದ್ದರೂ (LPG Gas Connectionwithout address proof) , ಈಗ LPG ಸಿಲಿಂಡರ್ ಪಡೆಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಇಲ್ಲಿ 5 ಕೆಜಿ ಎಲ್ಪಿಜಿ ಸಿಲಿಂಡರ್ ಸಂಪರ್ಕವನ್ನು ಪಡೆಯಬಹುದು. ಇದನ್ನು ಶಾರ್ಟ್ ಗ್ಯಾಸ್ ಸಿಲಿಂಡರ್ ಎನ್ನುತ್ತಾರೆ. ಈ ಸೌಲಭ್ಯವನ್ನು ಇಂಡಿಯನ್ ಆಯಿಲ್‌ನ ಇಂಡೇನ್ ನೀಡುತ್ತದೆ. ಇದು 5 ಕೆಜಿ ಎಫ್‌ಟಿಎಲ್ (Free trade LPG) ಸಿಲಿಂಡರ್ ಆಗಿದೆ. ಇದರ ಕನೆಕ್ಷನ್ ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ವಿಳಾಸ ಪುರಾವೆ ಇಲ್ಲದೆ ಸಿಗುತ್ತದೆ. 

LPG ಸಿಲಿಂಡರ್ ಅನ್ನು ಎಲ್ಲಿ ಪಡೆಯಬೇಕು :

ಇಂಡೇನ್‌ನ (Indane) ವಿತರಕರ ನೆಟ್ ವರ್ಕ್ ಅಥವಾ ಇಂಡಿಯನ್ ರೀಟೆಲ್ ಔಟ್ಲೆಟ್ ಗಳಲ್ಲಿ ಈ ಸಿಲಿಂಡೆರ್ ಅನ್ನು ಪಡೆಯ ಬಹುದು. ಈ ಸಿಲಿಂಡರ್ ಗಾಗಿ ಗುರುತಿನ ಚೀಟಿಯನ್ನು ಒದಗಿಸಬೇಕು ಮತ್ತು ಬೆಲೆ ಪಾವತಿಸಬೇಕು. ಇದನ್ನು ರೀಫಿಲ್ ಕೂಡಾ ಮಾಡಬಹುದು. ದೇಶಾದ್ಯಂತದ ಯಾವುದೇ ಸೇಲ್ಸ್ ಸೆಂಟರ್ ಮತ್ತು ವಿತರಕರಿಂದ ಇದನ್ನು ಮಾಡಬಹುದು. 

ಇದನ್ನೂ ಓದಿ : PM-KISAN Scheme: ನೀವೂ ಈ ತಪ್ಪು ಮಾಡಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ, ಇಲ್ಲವಾದರೆ ಖಾತೆ ಸೇರುವುದಿಲ್ಲ ಹಣ

ಮಿಸ್ಡ್ ಕಾಲ್ ಮತ್ತು ವಾಟ್ಸಾಪ್ ಮೂಲಕ ಬುಕ್ ಮಾಡಬಹುದು :
ನೀವು ಮಿಸ್ಡ್ ಕಾಲ್ ಮತ್ತು ವಾಟ್ಸಾಪ್ (Whatsapp) ಮೂಲಕವೂ ಈ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಕಂಪನಿಯು ವಿಶೇಷ ನಂಬರ್ ಆಗಿರುವ 8454955555ಕ್ಕೆ ಮಿಸ್ಡ್ ಕಾಲ್ ನೀಡುವ ಮೂಲಕ ಸಿಲಿಂಡರ್ ಬುಕ್ (LPG book) ಮಾಡಿಕೊಳ್ಳಬಹುದು. ವಾಟ್ಸಾಪ್ ಮೂಲಕ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ವಾಟ್ಸಾಪ್ ಮೆಸೇಜ್ ನಲ್ಲಿ 'ರೀಫಿಲ್' ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಸಂಖ್ಯೆಗೆ ಕಳುಹಿಸಿದರೆ ಸಾಕು ಸಿಲಿಂಡರ್ ಬುಕ್ ಆಗಿ ಬಿಡುತ್ತದೆ. ಇನ್ನು 7718955555 ನಂಬರ್‌ಗೆ ಕರೆ ಮಾಡುವ ಮೂಲಕ ಕೂಡಾ ಸಿಲಿಂಡರ್‌ಗಳನ್ನು ಸಹ ಬುಕ್ ಮಾಡಬಹುದು.

ಈ ಸಿಲಿಂಡರ್‌ನ ರಿಫಿಲ್ ನಂತರ ಹೋಂ ಡೆಲಿವೆರಿ ಕೂಡಾ ನೀಡಲಾಗುತ್ತದೆ. ಆದರೆ ಇದಕ್ಕೆ 25 ರೂ.ಗಳ ಹೆಚ್ಚುವರಿ ವಿತರಣಾ ಶುಲ್ಕವನ್ನು (Delivery charge) ಪಾವತಿಸಬೇಕಾಗುತ್ತದೆ. ಇನ್ನು ನೀವು ವಾಸಿಸುವ ನಗರದಿಂದ ಬೇರೆ ನಗರಕ್ಕೆ ಶಿಫ್ಟ್ ಆಗುತ್ತಿದ್ದರೆ, ಸಿಲಿಂಡರ್ ಅನ್ನು ಹಿಂತಿರುಗಿಸಬಹುದು. 5 ವರ್ಷಗಳು ಪೂರ್ಣಗೊಳ್ಳುವ ಮೊದಲು ಈ ಸಿಲಿಂಡರ್ ಅನ್ನು ಹಿಂತಿರುಗಿಸಿದರೆ, ಸಿಲಿಂಡರ್ ವೆಚ್ಚದ 50 ಪ್ರತಿಶತವನ್ನು ಮರುಪಾವತಿಸಲಾಗುತ್ತದೆ. 5 ವರ್ಷಗಳು ಮುಗಿದ ನಂತರ ನೀವು ಅದನ್ನು ಹಿಂದಿರುಗಿಸಿದರೆ, ರಿಟರ್ನ್ ಮೌಲ್ಯವು ಕೇವಲ 100 ರೂಗಳಿಗೆ ಇಳಿಯುತ್ತದೆ.

ಇದನ್ನೂ ಓದಿ : ಈ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸಿದ RBI : ಇದರಲ್ಲಿ ನಿಮ್ಮ ಹಣವಿದೆಯೇ? ಬ್ಯಾಂಕ್ ಯಾವುದು ಚೆಕ್ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More