Home> Business
Advertisement

ಮೊಬೈಲ್ ನಂಬರ್ ನೊಂದಣಿಯಾಗದಿದ್ದರೂ ಡೌನ್‌ಲೋಡ್ ಮಾಡಬಹುದು ಆಧಾರ್ ಕಾರ್ಡ್..!

ಮೊಬೈಲ್ ನಂಬರ್ ನೋಂದಾಯಿಸದ ಕಾರಣದಿಂದಾಗಿ, ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ, ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ, ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

 ಮೊಬೈಲ್ ನಂಬರ್ ನೊಂದಣಿಯಾಗದಿದ್ದರೂ ಡೌನ್‌ಲೋಡ್ ಮಾಡಬಹುದು ಆಧಾರ್ ಕಾರ್ಡ್..!

ನವದೆಹಲಿ : Aadhaar Card Latest News : ಆಧಾರ್ ಕಾರ್ಡ್ ಸಾಮಾನ್ಯವಾಗಿ ಎಲ್ಲರ ಬಳಿಯೂ ಇದೆ. ಆದರೆ ಎಲ್ಲರೂ ಆಧಾರ್ ಗೆ (Aadhaar) ಮೊಬೈಲ್ ನಂಬರ್ ನೊಂದಾಯಿಸಿಕೊಂಡಿರುವುದಿಲ್ಲ. ಮೊಬೈಲ್ ನಂಬರ್ ನೋಂದಾಯಿಸದ ಕಾರಣದಿಂದಾಗಿ, ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ (Aadhaar Download) ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ, ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ, ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.

ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಡೌನ್‌ಲೋಡ್ :

ಆಧಾರ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)  ಈ ಮಾಹಿತಿಯನ್ನು ಪ್ರಕಟಿಸಿದೆ. ಮೊಬೈಲ್ ಸಂಖ್ಯೆ ನೋಂದಾಯಿಸದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ (Aadhaar card download) ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿತ್ತು. ಆದರೆ ಈಗ ಮೊಬೈಲ್ ಸಂಖ್ಯೆ ಇಲ್ಲದೆ ಕೂಡಾ, ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು (Aadhaar download without mobile number). 

ಇದನ್ನೂ ಓದಿ :   ಹಿರಿಯ ನಾಗರಿಕರಿಗೆ ಸೂಪರ್‌ಹಿಟ್ ಪಿಂಚಣಿ ಯೋಜನೆ ಆರಂಭ, ಕೈ ಸೇರಲಿದೆ 1.1 ಲಕ್ಷ ರೂಪಾಯಿ

ಆಧಾರ್ ಡೌನ್‌ಲೋಡ್ ಮಾಡುವ ಸುಲಭ ಪ್ರಕ್ರಿಯೆ : 
1. ಇದಕ್ಕಾಗಿ ನೀವು ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು 'My Aadhaar' ಅನ್ನು ಟ್ಯಾಪ್ ಮಾಡಿ. 
2. ಈಗ 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಮೇಲೆ ಕ್ಲಿಕ್ ಮಾಡಿ. 
3. ಈಗ ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. 
4. ಇಲ್ಲಿ ನೀವು ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆ (VID) ಅನ್ನು ಸಹ ನಮೂದಿಸಬಹುದು.
5. ಈ ಪ್ರಕ್ರಿಯೆಯ ನಂತರ, ನಿಮಗೆ ನೀಡಲಾದ ಸೆಕ್ಯೂರಿಟಿ ಅಥವಾ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. 

ಇದನ್ನೂ ಓದಿ :   LIC ಪಾಲಿಸಿದಾರರಿಗೆ ಬಿಗ್ ನ್ಯೂಸ್ : ನಿಮಗೆ ‘ಲಾಭ’ ನೀಡಲು ಸರ್ಕಾರ ಮಾಡಿದೆ ಬಿಗ್ ಪ್ಲಾನ್ !

6. ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದರೆ 'ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
7. ಈಗ ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
8. ಈಗ 'Send OTP' ಮೇಲೆ ಕ್ಲಿಕ್ ಮಾಡಿ
9. ಈಗ ನೀವು ನಮೂದಿಸಿದ ಪರ್ಯಾಯ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. 
10. ಮುಂದೆ, ನೀವು 'ನಿಯಮ ಮತ್ತು ಷರತ್ತುಗಳು' ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ನಂತರ ಅಂತಿಮವಾಗಿ 'ಸಬ್ಮಿಟ್' ಬಟನ್ ಒತ್ತಿ. 
11. ಈಗ ನಿಮ್ಮನ್ನು ಹೊಸ ಪುಟಕ್ಕೆ ರಿಡೈರೆಕ್ಟ್ ಮಾಡಲಾಗುತ್ತದೆ.  
12. ಮರುಮುದ್ರಣದ ಪರಿಶೀಲನೆಗಾಗಿ, ನೀವು ಪ್ರೀವ್ಯು ಆಧಾರ್ ಲೆಟರ್ ಆಯ್ಕೆಯನ್ನು  ಬಳಸಬಹುದು. 
13. ಇದರ ನಂತರ 'ಮೇಕ್ ಪೇಮೆಂಟ್' ಆಯ್ಕೆಯನ್ನು ಆರಿಸಿಕೊಳ್ಳಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More