Home> Business
Advertisement

Budget 2024: ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ

Union Budget: ಆದಾಯ ತೆರಿಗೆದಾರರಿಗಾಗಿ ಮಹತ್ವದ ಘೋಷಣೆಯನ್ನು ಪ್ರಕಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಮ ವರ್ಗದವರಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. 

Budget 2024: ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ,  ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ

Union Budget New Tax Slab: ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆಗೆ (Income Tax) ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.  ಮಧ್ಯಮ ವರ್ಗದ ಬಹುಕಾಲದ ಬೇಡಿಕೆಯಾಗಿದ್ದ ತೆರಿಗೆ ಸ್ಲ್ಯಾಬ್‌ (Tax Slab) ಬದಲಾವಣೆಗೆ ಸಂಬಂಧಿಸಿದಂತೆ ಸರ್ಕಾರ ಪರಿಹಾರವನ್ನು ನೀಡಿದೆ. 

ಬಜೆಟ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman), ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ 4 ಕೋಟಿ ತೆರಿಗೆದಾರರಿಗೆ ನೇರವಾಗಿ ಲಾಭವಾಗಲಿದ್ದು, ಸರ್ಕಾರಕ್ಕೆ,  37000 ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ವಿತ್ತ ಸಚಿವರು ವಿವರಿಸಿದರು. 

ಇದನ್ನೂ ಓದಿ- ಸಬ್ ಕಾ ಸಾತ್! ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ 9 ಆದ್ಯತೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ

2024-25ನೇ ಸಾಲಿನ ಬಜೆಟ್ (Budget) ಮಂಡನೆ ವೇಳೆ ಹೊಸ ತೆರಿಗೆ ಪದ್ಧತಿಯನ್ನು ಸರ್ಕಾರ ಸರಳಗೊಳಿಸುತ್ತಿದೆ ಎಂದು ಘೋಷಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮೂರನೇ ಎರಡರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯ (New Tax Slab) ಅಡಿಯಲ್ಲಿ ಬಂದಿದ್ದಾರೆ ಎಂದು ತಿಳಿಸಿದರು. 

ಇದನ್ನೂ ಓದಿ- Budget 2024 : ಇನ್ನು ಮುಂದೆ ಚಿನ್ನ, ಬೆಳ್ಳಿ ಅಗ್ಗ : ಬಜೆಟ್ ನಲ್ಲೇ ಆಯಿತು ಘೋಷಣೆ 

ಹೊಸ ತೆರಿಗೆ ಸ್ಲ್ಯಾಬ್‌ ಈ ಕೆಳಕಂಡಂತಿದೆ: 
ಹೊಸ ತೆರಿಗೆ ಪದ್ಧತಿಯ ತೆರಿಗೆ ಸ್ಲ್ಯಾಬ್‌ ಪ್ರಕಾರ,  ಮೂರು ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗುವುದಿಲ್ಲ. 3 ಲಕ್ಷದಿಂದ 7 ಲಕ್ಷ ರೂ.ವರೆಗಿನ ಆದಾಯದ ಮೇಲೆ 5% ತೆರಿಗೆ ಪಾವತಿಸಬೇಕಾಗುತ್ತದೆ. ಅಂತೆಯೇ, 7 ರಿಂದ 10 ಲಕ್ಷ ರೂ. ಆದಾಯದ ಮೇಲೆ 10%, 10 ರಿಂದ 12 ಲಕ್ಷ ರೂ., ವರೆಗಿನ ಆದಾಯದ ಮೇಲೆ 15%, 12ರಿಂದ 15ಲಕ್ಷದವರೆಗಿನ ಆದಾಯದ ಮೇಲೆ 20% ಹಾಗೂ 15 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು 30% ತೆರಿಗೆ ಪಾವತಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More