Home> Business
Advertisement

ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ

Torn notes Exchange: ನಿಮ್ಮ ಬಳಿಯೂ ಹರಿದುಹೋದ, ಹಾನಿಗೊಳಗಾದ ನೋಟ್ ಇದ್ಯಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಇಂತಹ ನೋಟುಗಳನ್ನು ನೀವು ಬ್ಯಾಂಕಿನಲ್ಲಿ ಸುಲಭವಾಗಿ ಬದಲಾಯಿಸಬಹುದು. ಆದರೆ ಇದಕ್ಕೂ ಮೊದಲು ಡ್ಯಾಮೇಜ್ ನೋಟುಗಳನ್ನು ಬದಲಾಯಿಸಲು ಆರ್‌ಬಿ‌ಐ ನಿಯಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. 

ನಿಮ್ಮ ಬಳಿಯೂ ಹರಿದ, ಹಾನಿಗೊಳಗಾದ ನೋಟ್ ಇದೆಯೇ? ಈ ರೀತಿ ಬದಲಾಯಿಸಿ

How to exchange torn notes: ಕೆಲವರಿಗೆ ಸಿಕ್ಕ ಸಿಕ್ಕಲ್ಲೆಲ್ಲಾ ಬರೆಯುವ ಕೆಟ್ಟ ಅಭ್ಯಾಸವಿರುತ್ತದೆ. ಇನ್ನೂ ಕೆಲವರು ಏನೂ ಸಿಗದಿದ್ದಾಗ ತಮ್ಮ ಕೈಯಲ್ಲಿರುವ ನೋಟಿನಲ್ಲೇ ಏನಾದರೂ ಬರೆಯುವ ಹವ್ಯಾಸವನ್ನೂ ಹೊಂದಿರುತ್ತಾರೆ. ಇಂತಹ ನೋಟುಗಳನ್ನು ಅಮಾನ್ಯ ನೋಟುಗಳು ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹರಡಿದೆ. ಆದರೆ, ಇವು ಅಮಾನ್ಯ ನೋಟುಗಳಲ್ಲ, ಬದಲಿಗೆ ಇಂತಹ ನೋಟುಗಳ ಚಲಾವಣೆ ಕೊಂಚ ಕಷ್ಟವೆಂದು ಹೇಳಬಹುದು. ಇದಲ್ಲದೆ, ಕೆಲವು ನೋಟುಗಳು ತುಂಬಾ ಕೊಳಗಾಗಿರುತ್ತವೆ. ಅಷ್ಟೇ ಅಲ್ಲದೆ, ಇನ್ನೂ ಕೆಲವು ನೋಟುಗಳು ಹರಿದು ಹೋಗಿರುತ್ತವೆ. ಇಂತಹ ನೋಟುಗಳ ಚಲಾವಣೆಯೂ ಬಲು ಕಷ್ಟವೇ. ಆದರೆ, ನಿಮ್ಮ ಬಳಿಯೂ ಇಂತಹ ನೋಟುಗಳಿದ್ದರೆ ನೀವು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 

ಹೌದು, ನಿಮ್ಮ ಬಳಿ ಹರಿದುಹೋದ, ಹಾಳಾದ ಹಾಗೂ ಕೊಳೆಯಾದ ನೋಟುಗಳಿದ್ದರೆ ಈ ಬಗ್ಗೆ ಖಂಡಿತವಾಗಿಯೂ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ ಸಾರ್ವಜನಿಕ ಬ್ಯಾಂಕುಗಳ ಯಾವುದೇ ಶಾಖೆಗಳಲ್ಲಿ ಈ ನೋಟುಗಳನ್ನು ಸುಲಭವಾಗಿ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ- ಬ್ಯಾಂಕ್ ಸಾಲ ಪಾವತಿಸದಿದ್ದಲ್ಲಿ ದಂಡ ವಿಧಿಸುವಂತಿಲ್ಲ! ಆರ್‌ಬಿಐ ಹೊಸ ನಿಯಮ

ಎಂತಹ ನೋಟನ್ನು ಮತ್ತು ಎಷ್ಟು ರೂ. ಮೌಲ್ಯದ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಲು ಸಾಧ್ಯ?
ಹಾಳಾದ, ಹರಿದ, ತುಂಡಾದ, ಸಿರೀಯಲ್ ನಂಬರ್ ಇಲ್ಲದ 2000 ರೂಪಾಯಿ, 500 ರೂಪಾಯಿ, 200 ರೂಪಾಯಿ, 100 ರೂಪಾಯಿ, 50 ರೂ, 20 ರೂ, ಅಥವಾ 10 ರೂಪಾಯಿ ಹೀಗೆ ಯಾವುದೇ ನೋಟನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದು. ಆದರೆ, ಇದಕ್ಕೆ ಆರ್‌ಬಿ‌ಐ ಮಾರ್ಗಸೂಚಿಗಳನ್ನು ಅನುಸರಿಸುವುದು ತುಂಬಾ ಮುಖ್ಯ. 

ಒಂದು ಬಾರಿಗೆ ಗರಿಷ್ಠ ಎಷ್ಟು ನೋಟ್ ಬದಲಾಯಿಸಬಹುದು?
ಆರ್‌ಬಿ‌ಐ ಮಾರ್ಗಸೂಚಿಯ ಪ್ರಕಾರ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ವಲಯದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಬಳಿಯಿರುವ ಡ್ಯಾಮೇಜ್ ಆದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಹಾನಿಗೊಳಗಾದ ನೋಟ್ ಗಳನ್ನು ಬದಲಾಯಿಸಲು ಯಾವುದೇ ಬ್ಯಾಂಕ್ ಕೂಡ ನಿರಾಕರಿಸುವಂತಿಲ್ಲ. ಆದರೆ, ಒಬ್ಬ ವ್ಯಕ್ತಿ ಒಂದು ಬಾರಿಗೆ ಗರಿಷ್ಠ 20 ನೋಟುಗಳನ್ನು ಮಾತ್ರ ಎಕ್ಸ್‌ಚೇಂಜ್‌ ಮಾಡಿಕೊಳ್ಳಬಹುದು. ಇದರ ಮಿತಿ 5000 ರೂಪಾಯಿವಗಳನ್ನು ಮೀರಬಾರದು ಎಂದು ಆರ್‌ಬಿ‌ಐ ಮಿತಿಯನ್ನು ನಿಗದಿಗೊಳಿಸಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ ಹಾನಿಗೊಳಗಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಯಾವುದೇ ರೀತಿಯ ಶುಲ್ಕವನ್ನು ಕೂಡ ವಿಧಿಸುವುದಿಲ್ಲ. 

ಇದನ್ನೂ ಓದಿ- ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಸಿಗಲಿದೆ ಭರ್ಜರಿ ಬೋನಸ್, ಜೊತೆಗೆ ವೇತನದಲ್ಲಿಯೂ ಹೆಚ್ಚಳ

5000 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ನೋಟುಗಳನ್ನು ವಿನಿಮಯ ಮಾಡಬಹುದೇ? ಒಂದೊಮ್ಮೆ ನಿಮ್ಮ ಬಳಿ 5,000 ರೂ.ಗಳಿಗಿಂತ ಇನ್ನೂ ಹೆಚ್ಚಿನ ಡ್ಯಾಮೇಜ್ ನೋಟುಗಳಿದ್ದರೆ ನೀವು ಅದನ್ನು ಕೂಡ ವಿನಿಮಯ ಮಾಡಿಕೊಳ್ಳಬಹುದು. ಆದರೆ, ಅಧಿಕ ಮೌಲ್ಯವನ್ನು ಹೊಂದಿರುವ ನೋಟುಗಳಾದರೆ ಮೊದಲು ಬ್ಯಾಂಕ್‌ ಅದನ್ನು ವೈಕ್ತಿಯ ಖಾತೆಗೆ ಡೆಪಾಸಿಟ್ ಮಾಡುತ್ತದೆ. 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಬದಲಾವಣೆಗೆ ಅಧಿಕ ಸಮಯ ತೆಗೆದುಕೊಳ್ಳುತ್ತದೆ.

ಆದರೆ, ನೆನಪಿಡಿ ಅತೀ ಹೆಚ್ಚು ತುಂಡಾದ ನೋಟುಗಳನ್ನು ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ನೋಟುಗಳನ್ನು ನೀವು ಆರ್‌ಬಿ‌ಐ ಕಚೇರಿಯಲ್ಲಷ್ಟೇ ಬದಲಾಯಿಸಿಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More