Home> Business
Advertisement

SBI-HDFC-ICICI ಬ್ಯಾಂಕ್ ಗ್ರಾಹಕರೇ ಗಮನಿಸಿ: ದಂಡ ತಪ್ಪಿಸಲು ಇಂದೇ ಈ ಕೆಲಸ ಮಾಡಿ

ನಿಮ್ಮ ಹೊಂದಿರುವ ಬ್ಯಾಂಕ್ ಖಾತೆಯಲ್ಲಿ ನೀವು ಕನಿಷ್ಠ ಸರಾಸರಿ ಬ್ಯಾಲೆನ್ಸ್ ನಿರ್ವಹಿಸಬೇಕು. ಇಲ್ಲದಿದ್ದರೆ ನಿಮಗೆ ಬ್ಯಾಂಕ್ ದಂಡ ವಿಧಿಸುತ್ತದೆ.

SBI-HDFC-ICICI ಬ್ಯಾಂಕ್ ಗ್ರಾಹಕರೇ ಗಮನಿಸಿ: ದಂಡ ತಪ್ಪಿಸಲು ಇಂದೇ ಈ ಕೆಲಸ ಮಾಡಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಎಚ್‌ಡಿಎಫ್‌ಸಿ (HDFC) ಅಥವಾ ಐಸಿಐಸಿಐ(ICICI) ಬ್ಯಾಂಕ್‌ನಲ್ಲಿ ನೀವು ಖಾತೆ ತೆರೆದಿದ್ದರೆ ಈ ಸುದ್ದಿ ನಿಮ್ಮ ಉಪಯೋಗಕ್ಕೆ ಬರುತ್ತದೆ. ಖಾತೆ ತೆರೆದ ಮೇಲೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಪರವಾಗಿ ಗ್ರಾಹಕರಿಗೆ ಹಲವು ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ ಈ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು ನೀವು ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಸಹ ಗಮನಿಸಬೇಕು.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕು

ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದ ನಂತರ ನಿಮ್ಮ ಖಾತೆಯಲ್ಲಿ ಕನಿಷ್ಟ ಸರಾಸರಿ ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳುವುದು ಅವಶ್ಯಕ. ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅಡಿ ಬ್ಯಾಂಕ್ ನಿಗದಿಪಡಿಸಿದ ಬ್ಯಾಲೆನ್ಸ್ ಅನ್ನು ಖಾತೆಯಲ್ಲಿ ನಿರ್ವಹಿಸಬೇಕು. ಈ ಬ್ಯಾಲೆನ್ಸ್ ನಿರ್ವಹಿಸಲು ನಿಮಗೆ ಸಾಧ್ಯವಾಗದಿದ್ದರೆ ಬ್ಯಾಂಕ್‌ನಿಂದ ದಂಡ ವಿಧಿಸಲಾಗುತ್ತದೆ. ಪ್ರತಿ ಬ್ಯಾಂಕ್ ಸರಾಸರಿ ಮಿತಿಯನ್ನು ನಿಗದಿಪಡಿಸುತ್ತದೆ. ಗ್ರಾಹಕರು ಯಾವಾಗಲೂ ಆ ಮಿತಿಯವರೆಗೂ ಹಣವನ್ನು ಖಾತೆಯಲ್ಲಿ ಇರಿಸಬೇಕಾಗುತ್ತದೆ.

ಇದನ್ನೂ ಓದಿ: ಪಡಿತರ ಚೀಟಿದಾರರಿಗೆ ಬಿಗ್‌ ನ್ಯೂಸ್‌.! ಸೇರ್ಪಡೆಯಾಗುತ್ತಿದೆ ಹೊಸ ಸೌಲಭ್ಯ, ಪ್ರತಿಯೊಬ್ಬ ಫಲಾನುಭವಿಗೂ ಈ ಭಾಗ್ಯ

ಕೆಲವು ಬ್ಯಾಂಕ್‌ಗಳ ಮಿತಿ ಒಂದೇ ಆಗಿರುತ್ತದೆ

ಬ್ಯಾಂಕ್‌ಗಳು ತಮ್ಮದೇ ಆದ ಸರಾಸರಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸುತ್ತವೆ. ಆದಾಗ್ಯೂ ಕೆಲವು ಬ್ಯಾಂಕುಗಳು ಒಂದೇ ಮಿತಿಯನ್ನು ಹೊಂದಿದ್ದರೆ ಕೆಲವು ವಿಭಿನ್ನವಾಗಿರುತ್ತವೆ. ದೇಶದ ದೈತ್ಯ ಬ್ಯಾಂಕ್‌ಗಳಾದ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಕನಿಷ್ಠ ಬ್ಯಾಲೆನ್ಸ್ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತ ನೀಡುತ್ತಿದ್ದೇವೆ.

ಎಸ್‌ಬಿಐನಲ್ಲಿ ಎಷ್ಟು ಬ್ಯಾಲೆನ್ಸ್ ಇರಿಸಬೇಕು..?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಉಳಿತಾಯ ಖಾತೆಯಲ್ಲಿ ಇರಿಸಬೇಕಾದ ಕನಿಷ್ಠ ಬ್ಯಾಲೆನ್ಸ್ ಎಷ್ಟು? ಇದು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಎಸ್‌ಬಿಐ ಖಾತೆಯಲ್ಲಿ ಕನಿಷ್ಠ ಮಿತಿಯು ನಗರ ಪ್ರದೇಶದಲ್ಲಿ 1 ಸಾವಿರ ರೂ.ನಿಂದ 3 ಸಾವಿರ ರೂ.ವರೆಗೆ ಇರುತ್ತದೆ. ಗ್ರಾಮೀಣ ಪ್ರದೇಶಗಳಿಗೆ ಇದು 1,000 ರೂ., ನೀವು ಅರೆ-ನಗರ ಪ್ರದೇಶದ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದರೆ 2 ಸಾವಿರ ರೂ. ಮತ್ತು ಮೆಟ್ರೋ ನಗರದಲ್ಲಿ 3 ಸಾವಿರ ರೂ. ಮಿತಿ ಇರುತ್ತದೆ.

ಇದನ್ನೂ ಓದಿATM Withdrawal money: ಎಟಿಎಂನಲ್ಲಿ ಹಣ ಡ್ರಾ ಮಾಡುವವರು ತಪ್ಪದೇ ಈ ಸುದ್ದಿ ಓದಿ

HDFC ಖಾತೆಯ ಸರಾಸರಿ ಕನಿಷ್ಠ ಮೊತ್ತ

HDFC ಬ್ಯಾಂಕಿನ ಖಾತೆಯಲ್ಲಿ ಸರಾಸರಿ ಕನಿಷ್ಠ ಬ್ಯಾಲೆನ್ಸ್‌ನ ಮಿತಿಯು ನೀವು ವಾಸಿಸುವ ಪ್ರದೇಶಗಳ ಮೇಲೆ ಅವಲಂಬಿತವಾಗಿರುತ್ತದೆ. ನಗರಗಳಲ್ಲಿ ಈ ಮಿತಿ 10,000 ರೂ. ಇದ್ದರೆ, ಅರೆ ನಗರ ಪ್ರದೇಶಗಳಲ್ಲಿ 5,000 ರೂ. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 2,500 ರೂ. ಮಿತಿ ಇರುತ್ತದೆ.

ಐಸಿಐಸಿಐ ಬ್ಯಾಂಕ್‌ನ ಮಿತಿ

ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸಬೇಕು. ಇಲ್ಲಿ ನಗರ ಪ್ರದೇಶದ ಖಾತೆದಾರರಿಗೆ 10,000 ರೂ., ಅರೆ ನಗರಕ್ಕೆ 5,000 ರೂ. ಮತ್ತು ಗ್ರಾಮೀಣ ಪ್ರದೇಶಕ್ಕೆ 2,500 ರೂ.ಗಳ ಮಿತಿಯನ್ನು ನಿರ್ವಹಿಸುವುದು ಅಗತ್ಯವಾಗಿದೆ.

ಕೆಲವು ವಿಶೇಷ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮ ಅನ್ವಯಿಸುವುದಿಲ್ಲ. ಇಂತಹ ಬ್ಯಾಂಕ್ ಖಾತೆಗಳಲ್ಲಿ ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ಗೆ ಲಿಂಕ್ ಮಾಡಲಾದ ಖಾತೆಗಳು, ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳು, ಪಿಂಚಣಿದಾರರ ಉಳಿತಾಯ ಖಾತೆಗಳು, ಸಂಬಳ ಖಾತೆಗಳು ಮತ್ತು ಅಪ್ರಾಪ್ತ ವಯಸ್ಕರ ಉಳಿತಾಯ ಖಾತೆಗಳು ಸೇರಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More