Home> Business
Advertisement

YouTube Earning: ಈ 4 ಕೆಲಸ ಮಾಡಿದ್ರೆ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಗಳಿಸಬಹುದು!

ನೀವು ಮಾಡುವ ವಿಡಿಯೋಗಳು ಇತರರಿಗಿಂತಲೂ ಡಿಫರಂಟ್ ಆಗಿರಬೇಕು. ಆವಾಗಲೇ ಹೆಚ್ಚಿನ ಜನರು ನಿಮ್ಮ ಚಾನಲ್ ಅನ್ನು Subscribe ಮಾಡುತ್ತಾರೆ.

YouTube Earning: ಈ 4 ಕೆಲಸ ಮಾಡಿದ್ರೆ ಯೂಟ್ಯೂಬ್‌ನಲ್ಲಿ ಲಕ್ಷ ಲಕ್ಷ ಗಳಿಸಬಹುದು!

ನವದೆಹಲಿ: ನೀವು ಮನಸ್ಸು ಮಾಡಿದ್ರೆ YouTube ನಿಂದ ಕೈತುಂಬಾ ಹಣ ಗಳಿಸಬಹುದು. YouTube ತನ್ನ ಬಳಕೆದಾರರಿಗೆ ವಿಡಿಯೋಗಳ ಮೂಲಕ ಹಣ ಗಳಿಸುವ ಅವಕಾಶ ನೀಡುತ್ತಿದೆ. ಆದರೆ ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ತಿಳಿಯದೆ ನೀವು ನಿರಂತರವಾಗಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರೆ ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಂದು ನಾವು ಯೂಟ್ಯೂಬ್ ವಿಡಿಯೋಗಳನ್ನು ಮಾಡುವ ಮೂಲಕ ಹಣ ಗಳಿಸುವ ಮಾರ್ಗಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ವಿವಾದಾತ್ಮಕ ವಿಷಯ(Controversial Content) ಹಾಕಬೇಡಿ

ವಿವಾದಾತ್ಮಕ ವಿಷಯವು ನಿಮ್ಮ YouTube ವಿಡಿಯೋದ ಹಣ ಗಳಿಕೆಯನ್ನು ನಿರ್ಬಂಧಿಸಬಹುದು. ನೀವು ನಿರಂತರವಾಗಿ Controversial Content  ಹಾಕುತ್ತಿದ್ದರೆ ನೀವು ಅಂದುಕೊಂಡಷ್ಟು ಹಣ ಗಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಜನರಿಗೆ ಇಷ್ಟವಾಗುವ ಉತ್ತಮ ವಿಷಯಗಳ Contentಗಳ ವಿಡಿಯೋ ಮಾಡುವುದು ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.

ಇದನ್ನೂ ಓದಿ: ITR Filing: ಆದಾಯ ತೆರಿಗೆ ರಿಟರ್ನ್‌ನಲ್ಲಿ ಪೂರ್ಣ ಹಣ ಬಂದಿಲ್ಲವೇ?

ವಿಡಿಯೋದ ಸಮಯಕ್ಕೆ ಮಹತ್ವ ನೀಡಿ

ನೀವು ಯೂಟ್ಯೂಬ್‍ನಲ್ಲಿ ಹಾಕುವ ವಿಡಿಯೋದ ಸಮಯದ ಬಗ್ಗೆ ಕಾಳಜಿ ವಹಿಸದಿದ್ದರೆ ಹಣ ಗಳಿಸಲು ಸಾಧ್ಯವಿಲ್ಲ. ನೀವು ಉತ್ತಮ ಹಣ ಗಳಿಸಲು ಬಯಸಿದರೆ ಯಾವಾಗಲೂ ವಿಡಿಯೋವನ್ನು 3 ನಿಮಿಷಗಳಿಗಿಂತ ಹೆಚ್ಚು ಮಾಡಿ. ಹೀಗೆ ಮಾಡಿದ್ದಲ್ಲಿ ನೀವು ನಿಮ್ಮ ವಿಡಿಯೋಗಳಿಗೆ ಹೆಚ್ಚಿನ ಜಾಹೀರಾತುಗಳನ್ನು ಪಡೆಯುತ್ತೀರಿ ಮತ್ತು ನಿಮ್ಮ ಗಳಿಕೆಯು ಹೆಚ್ಚಾಗುತ್ತದೆ.

ನಿಯಮಿತವಾಗಿ ವಿಡಿಯೋ ಪೋಸ್ಟ್ ಮಾಡಿ

YouTubeನ ಪ್ರಮುಖ ನಿಯಮವೆಂದರೆ ನಿರಂತರವಾಗಿ ವಿಡಿಯೋಗಳನ್ನು ಹಾಕುವುದು. ಏಕೆಂದರೆ ವಿಡಿಯೋಗಳು ನಿಯಮಿತವಾಗಿ ಬರದಿದ್ದರೆ ನಿಮ್ಮ ಚಾನಲ್ ಬೆಳೆಯುವುದಿಲ್ಲ. ಪ್ರತಿದಿನವೂ ನೀವು ವಿಡಿಯೋಗಳನ್ನು ಹಾಕುತ್ತಾ ಬಂದರೆ ಹೆಚ್ಚು ಜನರು ನಿಮ್ಮ ಚಾನಲ್ ಅನ್ನು Subscribe ಮಾಡುತ್ತಾರೆ. ಇದರಿಂದ ನಿಮಗೆ ಉತ್ತಮ ಆದಾಯ ಸಿಗುತ್ತದೆ.  

ಇದನ್ನೂ ಓದಿ: Mahindra Scorpioಯಿಂದ Boleroವರೆಗೆ 1.79 ಲಕ್ಷ ರಿಯಾಯಿತಿ ದರದಲ್ಲಿ ಸಿಗುತ್ತಿವೆ ಈ ಕಾರುಗಳು

 ಗ್ರಾಫಿಕ್ಸ್ ಮತ್ತು ಅನಿಮೇಷನ್ ಬಳಸಿ

ನೀವು ಮಾಡುವ ವಿಡಿಯೋಗಳು ಇತರರಿಗಿಂತಲೂ ಡಿಫರಂಟ್ ಆಗಿರಬೇಕು. ಆವಾಗಲೇ ಹೆಚ್ಚಿನ ಜನರು ನಿಮ್ಮ ಚಾನಲ್ ಅನ್ನು Subscribe ಮಾಡುತ್ತಾರೆ. ನೀವು ತಯಾರಿಸುವ ವಿಡಿಯೋಗಳಲ್ಲಿ ಉತ್ತಮವಾಗಿ ಗ್ರಾಫಿಕ್ಸ್ ಮತ್ತು ಅನಿಮೇಷನ್ ಬಳಸಬೇಕು. ಇದು ಜನರ ಗಮನ ಸೆಳೆಯುವಂತಿರಬೇಕು. ಇದರಿಂದ ಹೆಚ್ಚಿನ ಜನರು ನಿಮ್ಮ ಚಾನಲ್‍ಗೆ ಬರಲಿದ್ದು, ನಿಮ್ಮ ಆದಾಯವೂ ಹೆಚ್ಚುತ್ತದೆ.  ಈ ಎಲ್ಲಾ ಕೆಲಸ ಮಾಡಿದರೆ ನೀವು 20 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೂ ಗಳಿಸಬಹುದು. ಉತ್ತಮವಾದ ಕಂಟೆಂಟ್ ನಿಮ್ಮ ಬಳಿ ಇದ್ದರೆ ಲಕ್ಷ ಲಕ್ಷ ಹಣವನ್ನು ಸುಲಭವಾಗಿ ಗಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More