Home> Business
Advertisement

Singal chargeನಲ್ಲಿ 500 ಕಿಮೀ ವರೆಗೆ ಚಲಿಸುತ್ತದೆ Maruti Suzuki ಎಲೆಕ್ಟ್ರಿಕ್ SUV

ಇದೀಗ ಕಂಪನಿ ಪೆಟ್ರೋಲ್ ಜೊತೆಗೆ ಸಿಎನ್‌ಜಿ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಉಳಿದ ಕಾರು ನಿರ್ಮಾಣ ಕಂಪನಿಗಳಿಗೆ ಸಾಕಷ್ಟು ಸವಾಲಾಗಿ ಪರಿಣಮಿಸಿದೆ.  
 

Singal chargeನಲ್ಲಿ 500 ಕಿಮೀ ವರೆಗೆ ಚಲಿಸುತ್ತದೆ Maruti Suzuki ಎಲೆಕ್ಟ್ರಿಕ್ SUV

ನವದೆಹಲಿ : ಮಾರುತಿ ಸುಜುಕಿ (Maruti Suzuki) ಭಾರತೀಯ ಗ್ರಾಹಕರ ಹೃದಯವನ್ನು ಗೆದ್ದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೀಗ ಕಂಪನಿ ಪೆಟ್ರೋಲ್ ಜೊತೆಗೆ ಸಿಎನ್‌ಜಿ (CNG) ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಉಳಿದ ಕಾರು ನಿರ್ಮಾಣ ಕಂಪನಿಗಳಿಗೆ ಸಾಕಷ್ಟು ಸವಾಲಾಗಿ ಪರಿಣಮಿಸಿದೆ.   ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಇಂಟರ್ನೆಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಾರುತಿ ಸುಜುಕಿ ಕಂಪನಿಯ ಮೊದಲ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿಯನ್ನು (Maruti Suzuki Electric SUV) ಟೊಯೋಟಾ ಜೊತೆಗಿನ ಪಾಲುದಾರಿಕೆಯ ಅಡಿಯಲ್ಲಿ ಮಾರುಕಟ್ಟೆಗೆ ತರಲಿದೆ. ಇದರ  Code name ಅನ್ನು YY8 ಎಂದು ಇರಿಸಲಾಗಿದೆ.

ಹ್ಯುಂಡೈ ಕ್ರೆಟಾಗಿಂತ ದೊಡ್ಡದು ಮತ್ತು ಅಗಲ : 

ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ SUV ಅನ್ನು ಬ್ರ್ಯಾಂಡ್‌ನ ಹೊಸ ವಿನ್ಯಾಸದ ಫಿಲೋಸೋಫಿ ಮೇಲೆ ನಿರ್ಮಿಸಲಾಗುತ್ತಿದೆ (Maruti Suzuki Electric SUV). ಇದು ನೋಟದಲ್ಲಿ ಅತ್ಯಾಕರ್ಷಕವಾಗಿದ್ದು, ಮತ್ತು ಭವಿಷ್ಯದಲ್ಲಿ ಬರುವ ವಾಹನಗಳಂತೆ  ವಿನ್ಯಾಸಗೊಳಿಸಲಾಗಿದೆ. . ಈ ಎಲೆಕ್ಟ್ರಿಕ್ ಎಸ್‌ಯುವಿಯನ್ನು (Electric SUV) ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ  ವಿನ್ಯಾಸಗೊಳಿಸಲಾಗುವುದು.  ಏಕೆಂದರೆ ಟೊಯೊಟಾ ತನ್ನ ಬ್ಯಾಡ್ಜಿಂಗ್‌ನೊಂದಿಗೆ ಅದನ್ನು ಮಾರಾಟ ಮಾಡಲಿದೆ. ಇದರ ಒಟ್ಟಾರೆ ಉದ್ದವು ಸುಮಾರು 4.2 ಮೀಟರ್ ಆಗಿರಲಿದ್ದು, ಇದು ಹುಂಡೈ ಕ್ರೆಟಾಕ್ಕಿಂತ (hyundai creta) ದೊಡ್ಡದಾಗಿ ದೆ ಮತ್ತು ಅಗಲವಾಗಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು MG ZS EV ಯೊಂದಿಗೆ ಸ್ಪರ್ಧಿಸಲಿದೆ.

ಇದನ್ನೂ ಓದಿ : Ukraine-Russia ಉದ್ವಿಗ್ನತೆ ಹಿನ್ನೆಲೆ, ಗೋತಾ ಹೊಡೆದ ಷೇರು ಮಾರುಕಟ್ಟೆ, 5 ನಿಮಿಷದಲ್ಲಿ 6.65 ಲಕ್ಷ ಕೋಟಿ ಸ್ವಾಹಾ

ಬೆಲೆ 13-15 ಲಕ್ಷ ರೂ :
ಹೊಸ ಮಾರುತಿ ಸುಜುಕಿ YY8 ಬೆಲೆಯು 13-15 ಲಕ್ಷ ರೂಪಾಯಿಗಳಿಲಿರಬಹುದು ಎಂದು ಅಂದಾಜಿಸಲಾಗಿದೆ. ಇದು ZS EV ಗಿಂತ ಕಡಿಮೆಯಿರುತ್ತದೆ ಮತ್ತು ಈ ಬೆಲೆಯ ಪ್ರಕಾರ, ಹೊಸ ಎಲೆಕ್ಟ್ರಿಕ್ SUV ಟಾಟಾ ನೆಕ್ಸಾನ್ EV ಯೊಂದಿಗೆ ಸ್ಪರ್ಧಿಸಲಿದೆ.  ಕಂಪನಿಯ ಹೊಸ EV ನಮ್ಮ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಗ್ರಾಹಕರ ಯೋಚನೆ ಮತ್ತು ಮಾರುಕಟ್ಟೆ ಪರಿಸರ ಎರಡನ್ನೂ ಬದಲಾಯಿಸಬಹುದು. ಏಕೆಂದರೆ ಜನರು ಈ ಬ್ರ್ಯಾಂಡ್‌ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. Tata Nexon EV ಯ ಮಾರಾಟ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ , ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರು (Maruti Suzuki Electric car) ಗೇಮ್ ಚೇಂಜರ್ ಆಗುವ ಎಲ್ಲಾ ಸಾಧ್ಯತೆಗಳಿವೆ. 
 
1 ಚಾರ್ಜ್‌ನಲ್ಲಿ 500 ಕಿಮೀ ವರೆಗೆ ರೇಂಜ್ :

YY8 ಅನ್ನು 27PL ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇದು ದ್ವಿಚಕ್ರ ಮತ್ತು 4-ಚಕ್ರ ಡ್ರೈವ್‌ನೊಂದಿಗೆ ಬರುತ್ತದೆ. ಇದರ 2WD ರೂಪಾಂತರವು 48 kW-R ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಇದು ಒಂದೇ ಚಾರ್ಜ್‌ನಲ್ಲಿ 400 ಕಿಮೀ ವರೆಗೆ ಓಡಲು ಸಾಧ್ಯವಾಗುತ್ತದೆ. ಆದರೆ 4WD ರೂಪಾಂತರವು 59 kW-R ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಈ ರೂಪಾಂತರವು ಒಂದೇ ಚಾರ್ಜ್‌ನಲ್ಲಿ 500 ಕಿಮೀ ವರೆಗೆ ವ್ಯಾಪ್ತಿಯನ್ನು ಕ್ರಮಿಸಲಿದೆ.  

ಇದನ್ನೂ ಓದಿ : Indian Railways: ರೈಲ್ವೆ ಪ್ರಯಾಣಿಕರೇ ಗಮನಿಸಿ! ಇಂದಿನಿಂದ ಮತ್ತೆ ಸಿಗಲಿದೆ ಈ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More