Home> Business
Advertisement

Maruti Celerio Offer: ಕೇವಲ 48 ಸಾವಿರ ಪಾವತಿಸಿ ಮನೆಗೆ ತನ್ನಿ ಈ ಹೊಚ್ಚ ಹೊಸ ಕಾರ್

Maruti Celerio Offer:ಒಂದು ವೇಳೆ ನೀವೂ ಕೂಡ ಈ ಕಾರ್ ಖರೀದಿಸುವ ಯೋಜನೆ ರೂಪಿಸುತ್ತಿದ್ದರೆ, ಈ ಕಾರ್ ನ ಆರಂಭಿಕ ಮಾಡೆಲ್ ಅನ್ನು ನೀವು ಕೇವಲ ರೂ.48,000 ಡೌನ್ ಪೇಮೆಂಟ್ ಮಾಡುವ ಮೂಲಕ ಮನೆಗೆ ತರಬಹುದು. ಇದರಲ್ಲಿ ಪೆಟ್ರೋಲ್ ಹಾಗೂ ಎಸ್-ಸಿಎನ್ ಜಿ ಎಂಬ ಎರಡು ಆಯ್ಕೆಗಳು ಇರಲಿವೆ.

Maruti Celerio Offer: ಕೇವಲ 48 ಸಾವಿರ ಪಾವತಿಸಿ ಮನೆಗೆ ತನ್ನಿ ಈ ಹೊಚ್ಚ ಹೊಸ ಕಾರ್

ನವದೆಹಲಿ: Maruti Celerio Offer: ಮಾರುತಿ ಸುಜುಕಿ ಪ್ರಸ್ತುತ 2020 ರ ಕೊನೆಯ ದಿನಗಳಲ್ಲಿ ತನ್ನ ಅನೇಕ Car ಗಳ  ಮೇಲೆ ಆಫರ್‌ಗಳನ್ನು ಜಾರಿಗೆ ತರುತ್ತಿದೆ. ದೇಶದ ದಿಗ್ಗಜ ಕಾರು ಉತ್ಪಾದಕ ಕಂಪನಿ ತನ್ನ  ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರ್ ಆಗಿರುವ ಸೆಲೆರಿಯೊ  ಖರೀದಿಸಲು ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ಹೊತ್ತು ತಂದಿದೆ. ಇದರ ಅಡಿಯಲ್ಲಿ ನೀವು ಈ ಕಾರನ್ನು ಕೇವಲ 48 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ನಲ್ಲಿ ಖರೀದಿಸಬಹುದು. ಈ ಕಾರು ತನ್ನ ಲುಕ್ಸ್ ಹಾಗೂ ವೈಶಿಷ್ಟ್ಯಗಳಿಗಾಗಿ ಭಾರಿ ಜನಮನ್ನಣೆ ಗಳಿಸಿದೆ.

ಇದನ್ನು ಓದಿ- ಡೀಸೆಲ್/ಪೆಟ್ರೋಲ್ ಕಾರುಗಳಲ್ಲಿ ಯಾವುದು ಉತ್ತಮ? Maruti Suzukiಯ ಲೆಕ್ಕಾಚಾರ ಏನು ಗೊತ್ತಾ?

ಗಾತ್ರದಲ್ಲಿ Alto ಗಿಂತಲೂ ದೊಡ್ಡದಾಗಿದೆ
ಮಾರುತಿ ಕಂಪನಿಯ (Maruti Suzuki) ಮತ್ತೊಂದು ಜನಪ್ರೀಯ ಕಾರ್ ಆಗಿರುವ Alto ಗಿಂತಲೂ ಕೂಡ ಗಾತ್ರದಲ್ಲಿ ಈ ಕಾರ್ ದೊಡ್ಡದಾಗಿದೆ. ಗ್ರಾಹಕರಿಗಾಗಿ ಕಂಪನಿ ಈ ಕಾರಿನ ಪೆಟ್ರೋಲ್ ಹಾಗೂ ಎಸ್-ಸಿ.ಎನ್.ಜಿ ಮಾಡೆಲ್ ಗಳನ್ನು ಪರಿಚಯಿಸಿದೆ.  ಈ ಕಾರಿನ ಆರಂಭಿಕ ಮಾಡೆಲ್ LXI (Petrol) ಆವೃತ್ತಿಯ ಬೆಲೆ 4.41 ಲಕ್ಷ ರೂ.(ದೆಹಲಿ ಎಕ್ಸ್ ಷೋರೂಂ ಪ್ರೈಸ್) ಆಗಿದೆ. ಈ ಕಾರಿನಲ್ಲಿ 998 cc ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಇದು ಪ್ರತಿ ಲೀಟರ್ ಪೆಟ್ರೋಲ್ ಗೆ 23.1 ಕಿ.ಮೀ ಮೈಲೇಜ್ ನೀಡುತ್ತದೆ.

ಇದನ್ನು ಓದಿ- ಹೊಚ್ಚ ಹೊಸ Maruti Car ಗಳನ್ನು ಬಾಡಿಗೆಗೆ ಪಡೆಯಬೇಕೆ? ಕಂಪನಿ ಆರಂಭಿಸಿದೆ ಈ ನೂತನ ಸೇವೆ

ಬಡ್ಡಿ ಎಷ್ಟು?
ವಾರ್ಷಿಕವಾಗಿ ಶೇ.9.8 ರಷ್ಟು ಬಡ್ಡಿ ದರದಲ್ಲಿ ನಿಮಗೆ ಸಾಲ ಸಿಗಲಿದೆ. ಒಂದು ವೇಳೆ ನೀವು ಕೂಡ ಕಾರು ಖರೀದಿಸಲು ಯೋಜನೆ ರೂಪಿಸಿದ್ದರೆ. ಕೇವಲ 48 ಸಾವಿರ ರೂಪಾಯಿ ಡೌನ್ ಪೇಮೆಂಟ್ ಮಾಡಿ ಈ ಕಾರನ್ನು ನೀವು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಐದು ವರ್ಷಗಳಲ್ಲಿ ಒಟ್ಟು 1,17,383 ರೂ. ಬಡ್ಡಿ ಸೇರಿದಂತೆ ನೀವು 5,53,980 ರೂ. ಪಾವತಿಸಬೇಕಾಗಲಿದೆ.

ಇದನ್ನು ಓದಿ- Coronavirus: ಕಾರು ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More