Home> Business
Advertisement

ಡಿಸೆಂಬರ್ 1 ರಿಂದ ಬದಲಾಗಲಿವೆ ಹಲವು ನಿಯಮಗಳು, ಇವುಗಳನ್ನು ನೆನಪಿನಲ್ಲಿಡಿ

ಡಿಸೆಂಬರ್ 1 ರಿಂದ ಜನಸಾಮಾನ್ಯರ ಜೀವನಕ್ಕೆ ನೇರವಾಗಿ ಸಂಬಂಧಿಸಿರುವ ಅನೇಕ ಪ್ರಮುಖ ಬದಲಾವಣೆಗಳು ನಡೆಯಲಿವೆ. 

ಡಿಸೆಂಬರ್ 1 ರಿಂದ ಬದಲಾಗಲಿವೆ ಹಲವು ನಿಯಮಗಳು, ಇವುಗಳನ್ನು ನೆನಪಿನಲ್ಲಿಡಿ

ಬೆಂಗಳೂರು: ಡಿಸೆಂಬರ್ 1, 2020 ರಿಂದ ಜನಸಾಮಾನ್ಯರ ನಿತ್ಯ ಜೀವನಕ್ಕೆ ಸಂಬಂಧಿಸಿದ ನಾಲ್ಕು ಪ್ರಮುಖ ನಿಯಮಗಳು ಬದಲಾಗಲಿವೆ. ಅದು ನಿಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಹೊಸ ನಿಯಮಗಳಿಂದ ನೀವು ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಆದರೆ ನೀವು ಕೆಲವು ವಿಷಯಗಳ ಬಗ್ಗೆ ಸರಿಯಾಗಿ ಗಮನ ಹರಿಸದಿದ್ದರೆ ಆರ್ಥಿಕ ನಷ್ಟವನ್ನೂ ಅನುಭವಿಸಬಹುದು. ಗ್ಯಾಸ್ ಸಿಲಿಂಡರ್‌ಗಳು, ವಿಮಾ ಕಂತುಗಳು, ರೈಲ್ವೆಗಳು ಮತ್ತು ಹಣದ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳು ಇವುಗಳಲ್ಲಿ ಸೇರಿವೆ. ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಈ ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿಯೋಣ...

ದೇಶೀಯ ಅನಿಲ ಬೆಲೆಗಳು ಬದಲಾಗುತ್ತವೆ:

fallbacks
ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸುತ್ತವೆ. ಎಲ್‌ಪಿಜಿ ಸಿಲಿಂಡರ್ (Gas Cylinder) ಬೆಲೆ ಡಿಸೆಂಬರ್ 1 ರಿಂದ ಬದಲಾಗುತ್ತದೆ. ತೆರಿಗೆ ದರಗಳು ಪ್ರತಿ ರಾಜ್ಯದಲ್ಲಿ ವಿಭಿನ್ನವಾಗಿವೆ ಮತ್ತು ಇದರ ಪ್ರಕಾರ ಎಲ್‌ಪಿಜಿ ಬೆಲೆ ಬದಲಾಗುತ್ತದೆ. ಪ್ರಸ್ತುತ ಒಂದು ವರ್ಷದಲ್ಲಿ ಪ್ರತಿ ಮನೆಗೆ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಗ್ರಾಹಕರು ಇದಕ್ಕಿಂತ ಹೆಚ್ಚಿನ ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು ಬಯಸಿದರೆ, ಅವರು ಅವುಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬೇಕಾಗುತ್ತದೆ.

ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೊರತಾಗಿ ಪಡೆಯಿರಿ ಕ್ಯಾಶ್‌ಬ್ಯಾಕ್, ಇಲ್ಲಿದೆ ವಿಧಾನ

ವಿಮಾದಾರರಿಗೆ ಪ್ರೀಮಿಯಂ ಕಡಿತಗೊಳಿಸುವ ಸೌಲಭ್ಯ:
fallbacks

ಕರೋನಾ ಅವಧಿಯಲ್ಲಿ ಅನೇಕ ಜನರು ವಿಮೆ (Insurance) ಯತ್ತ ಆಕರ್ಷಿತರಾಗಿದ್ದಾರೆ, ಆದರೆ ಪ್ರೀಮಿಯಂ ಬಗ್ಗೆಯೂ ಕಾಳಜಿ ಹೆಚ್ಚಾಗಿದೆ. ಈಗ ಐದು ವರ್ಷಗಳ ನಂತರ ವಿಮಾದಾರನು ಪ್ರೀಮಿಯಂ ಮೊತ್ತವನ್ನು ಕಡಿತಗೊಳಿಸಬಹುದು. ಅವರು ತಮ್ಮ ಪ್ರೀಮಿಯಂ ಅನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ವಿಮಾದಾರರಿಗೆ ದೊಡ್ಡ ಪರಿಹಾರ ನೀಡುತ್ತದೆ. ಇದರೊಂದಿಗೆ ವಿಮಾ ಹೊಂದಿರುವವರು ಅರ್ಧದಷ್ಟು ಕಂತಿನೊಂದಿಗೆ ಪಾಲಿಸಿಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ದೊಡ್ಡ ಮೊತ್ತವನ್ನು ವರ್ಗಾಯಿಸಲು ಕಾಯಬೇಕಾಗಿಲ್ಲ :
fallbacks
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗ್ರಾಹಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಮತ್ತೊಂದು ಪ್ರಮುಖ ಘೋಷಣೆ ಮಾಡಿದೆ. 2020 ರ ಡಿಸೆಂಬರ್‌ನಿಂದ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಸ್ಥೆಯನ್ನು 24 ಗಂಟೆಗಳ ಕಾಲ ಏಳು ದಿನಗಳವರೆಗೆ ಇರಿಸಿಕೊಳ್ಳಲು ಆರ್‌ಬಿಐ ಘೋಷಿಸಿತ್ತು. ಈಗ ಇದನ್ನು ಡಿಸೆಂಬರ್ 1 ರಿಂದ ಜಾರಿಗೆ ತರಲಾಗುವುದು. ದೇಶಾದ್ಯಂತ ಡಿಜಿಟಲ್ ಬ್ಯಾಂಕಿಂಗ್ ಉತ್ತೇಜಿಸಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

ಡಿಸೆಂಬರ್ 1 ರಿಂದ ಬದಲಾಗಲಿವೆ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಈ ನಿಯಮಗಳು

ಡಿಸೆಂಬರ್ 1 ರಿಂದ  ಹೊಸ ರೈಲುಗಳು ಪ್ರಾರಂಭವಾಗಲಿವೆ :
fallbacks
ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ರೈಲ್ವೆ (Indian Railways) ವಿಶೇಷ ರೈಲುಗಳನ್ನು ಓಡಿಸಿತು. ಈಗ ಡಿಸೆಂಬರ್ 1, 2020 ರಿಂದ ರೈಲ್ವೆ ಅನೇಕ ಹೊಸ ರೈಲುಗಳನ್ನು ಓಡಿಸಲಿದೆ. ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಾಲ್ಕು ದಿನಗಳ ನಂತರ ಹೆಚ್ಚಿನ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಲಿವೆ. ಇದರಲ್ಲಿ ಜೀಲಮ್ ಎಕ್ಸ್‌ಪ್ರೆಸ್ ಮತ್ತು ಪಂಜಾಬ್ ಮೇಲ್ ರೈಲುಗಳೂ ಸೇರಿವೆ.

 

Read More