Home> Business
Advertisement

LPG Gas Cylinder Price: ಅಡುಗೆ ಅನಿಲ ಬೆಲೆಯಲ್ಲಿ ರೂ.73.50 ಏರಿಕೆ, ಈ ತಿಂಗಳ ದರ ಎಷ್ಟು?

LPG Gas Cylinder Price - ಸರ್ಕಾರಿ ತೈಲ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.1,500 ರಿಂದ ರೂ.1623 ರೂ.ಗೆ ಹೆಚ್ಚಳವಾಗಿದೆ.

LPG Gas Cylinder Price: ಅಡುಗೆ ಅನಿಲ ಬೆಲೆಯಲ್ಲಿ ರೂ.73.50 ಏರಿಕೆ, ಈ ತಿಂಗಳ ದರ ಎಷ್ಟು?

ನವದೆಹಲಿ: LPG Gas Cylinder Price - ಆಗಸ್ಟ್ ತಿಂಗಳಾರಂಭದ ಮೊದಲ ದಿನವೆ, ಜನಸಾಮಾನ್ಯರ ಜೇಬಿಗೆ ಭಾರಿ ಹೊಡೆತಬಿದ್ದಿದೆ. ಗ್ಯಾಸ್ ಸಿಲಿಂಡರ್ ಬೆಲೆಗಳು (LPG Gas Cylinder Price) ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ (Gas Cylinder Price Today) ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 73.5 ರೂ. ಹೆಚ್ಚಿಸಿವೆ. ಆದರೆ. ಈ  ತಿಂಗಳು ಕೇವಲ ವಾಣಿಜ್ಯ ಅಡುಗೆ ಅನಿಲ ಬೆಲೆಗಳನ್ನು ಮಾತ್ರ ಹೆಚ್ಚಿಸಲಾಗಿದೆ. ಮನೆಗಳಲ್ಲಿ ಬಳಕೆಯಾಗುವ ಅಡುಗೆ ಅನಿಲ ಸಿಲಿಂಡರ್ ಬೆಲೆಗಳು ಹಾಗೆಯೇ ಇರುತ್ತವೆ. ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ ರೂ .1500 ರಿಂದ ರೂ. 1623 ಕ್ಕೆ ಏರಿಕೆಯಾಗಿದೆ.

ಅಂದರೆ, ಮನೆಗಳಲ್ಲಿ ಬಳಕೆಯಾಗುವ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಕಳೆದ ತಿಂಗಳಿನಂತೆಯೇ ಇರಲಿದೆ. ಜುಲೈ ತಿಂಗಳಲ್ಲಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 25.50 ಹೆಚ್ಚಿಸಿದ್ದವು. ದೆಹಲಿಯಲ್ಲಿ  14.2 ಕೆಜಿ ಸಬ್ಸಿಡಿ ಸಹಿತ ಸಿಲಿಂಡ ಬೆಲೆ 834.50 ರೂ. ಇತ್ತು. ಇದಲ್ಲದೆ ಕೊಲ್ಕತ್ತಾದಲ್ಲಿ ಈ ಸಬ್ಸಿಡಿಯೊಂದಿಗೆ ಸಿಗುವ ಸಿಲಿಂಡರ್ ಬೆಲೆ ರೂ.861 ಆಗಿದ್ದರೆ, ಮುಂಬೈನಲ್ಲಿ ರೂ.834.50 ಹಾಗೂ ಚೆನ್ನೈನಲ್ಲಿ 850.50 ಆಗಿತ್ತು.

19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಹೊಸ ಬೆಲೆ  (19 KG LPG Cylinder Price)
>> ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 73 ರೂ. ಹೆಚ್ಚಾಗಿ ರೂ.1623ಕ್ಕೆ  ತಲುಪಿದೆ.
>> ಕೋಲ್ಕತ್ತಾದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 72.50 ರೂ. ಹೆಚ್ಚಾಗಿ  ರೂ.1629 ಕ್ಕೆ ತಲುಪಿದೆ.
>> ಚೆನ್ನೈ 73.50 ರೂ ಹೆಚ್ಚಾಗಿದೆ, ನಂತರ ಸಿಲಿಂಡರ್ ಬೆಲೆ ರೂ. 1761ಕ್ಕೆ ತಲುಪಿದೆ.
>> ಮುಂಬೈನಲ್ಲಿ, ಇದು ಪ್ರತಿ ಸಿಲಿಂಡರ್‌ಗೆ 72.50 ರೂ. ಹೆಚ್ಚಾಗಿ  ರೂ. 1579.50 ಕ್ಕೆ ತಲುಪಿದೆ.

14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ  (14.2 KG LPG Cylinder Price)
>> ದೆಹಲಿಯಲ್ಲಿ ಪ್ರತಿ ಸಿಲಿಂಡರ್‌ಗೆ 834.50
>> ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 861 ರೂ
>> ಮುಂಬೈನಲ್ಲಿ ಪ್ರತಿ ಸಿಲಿಂಡರ್‌ಗೆ 834.50 ರೂ
>> ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 850.50 ರೂ

ಇದನ್ನೂ ಓದಿ-Karnataka New Guidelines : ಈ ರಾಜ್ಯಗಳಿಂದ ಬರುವವರಿಗೆ RT-PCR ಟೆಸ್ಟ್ ಕಡ್ಡಾಯ : ಬಸ್ ಸಂಚಾರ ಬಂದ್!

ಈ ರೀತಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಪರಿಶೀಲಿಸಿ (LPG Cylinder Price Today)
ಸರ್ಕಾರಿ ತೈಲ ಕಂಪನಿಗಳ ವೆಬ್‌ಸೈಟ್‌ನಲ್ಲಿ ನೀವು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಬಹುದು. ಪ್ರತಿ ತಿಂಗಳ ಮೊದಲ ದಿನ, ಕಂಪನಿಗಳು ಗ್ಯಾಸ್ ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ.  IOCL (https://iocl.com/Products/IndaneGas.aspx) ನ ಅಧಿಕೃತ ಲಿಂಕ್‌ ಗೆ ಭೇಟಿ ನೀಡುವ ಮೂಲಕ ನೀವು ಬೆಲೆಗಳನ್ನು ಪರಿಶೀಲಿಸಬಹುದು.

ಇದನ್ನೂ ಓದಿ-PF News Today: ಶೀಘ್ರದಲ್ಲಿಯೇ ಸರ್ಕಾರ ನಿಮ್ಮ PF ಖಾತೆಗೆ ಹಣ ವರ್ಗಾಯಿಸಲಿದೆ, ಬ್ಯಾಲೆನ್ಸ್ ಪರಿಶೀಲಿಸುವ 4 ವಿಧಾನಗಳು ಇಲ್ಲಿವೆ

ನಿಮ್ಮ ವಿತರಕರನ್ನು ನೀವೇ ಆಯ್ಕೆ ಮಾಡಿ
ಇದೀಗ ಅಡುಗೆ ಅನಿಲ ಬಳಕೆದಾರರು (LPG customers) ತಮ್ಮ LPG ಗ್ಯಾಸ್ ಸಿಲಿಂಡರ್ ವಿತರಣೆ (LPG Refill) ಮಾಡುವ ವಿತರಕರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಇದಕ್ಕೂ ಮೊದಲು ಗ್ರಾಹಕರು ಕೇವಲ ನಿರ್ಧಿಷ್ಟ ವಿತರಕರಿಂದ ಮಾತ್ರ ಸಿಲಿಂಡರ್ ಅನ್ನು ಪಡೆಯಬಹುದಾಗಿತ್ತು. ಆದರೆ, ಪ್ರಸ್ತುತ ಈ ಸೇವೆಯನ್ನು ದೇಶದ ಕೆಲವೇ ನಗರಗಳಲ್ಲಿ ಆರಂಭಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಈ ಸೌಕರ್ಯವನ್ನು ಚಂಡಿಗಡ್, ಕೊಯಂಬತ್ತೂರ್, ಗುರುಗ್ರಾಮ್, ಪುಣೆ ಹಾಗೂ ರಾಂಚಿ ಗ್ರಾಹಕರಿಗಾಗಿ ಮಾತ್ರ ಆರಂಭಿಸಲಾಗಿದೆ.

ಇದನ್ನೂ ಓದಿ-Unclaimed Amount In Banks: ಬ್ಯಾಂಕುಗಳಲ್ಲಿ 50 ಸಾವಿರ ಕೋಟಿ ರೂ. ಹಣವಿಟ್ಟು ಮರೆತ್ಹೋದ ಜನ, ನಿಬ್ಬೇರಗಾದ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More