Home> Business
Advertisement

LPG Cylinder Booking : ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಲ್ಲಿ ನೀವು ₹10,000 ಚಿನ್ನ ಗೆಲ್ಲಬಹುದು : ಹೇಗೆ? ಇಲ್ಲಿದೆ ನೋಡಿ

ಇದು ಹಬ್ಬದ ಸೀಸನ್ ದೃಷ್ಟಿಯಿಂದ, LPG ಕಂಪನಿ ಹಿಂದುಸ್ತಾನ್ ಪೆಟ್ರೋಲಿಯಂ ಗ್ಯಾಸ್ ಲಿಮಿಟೆಡ್ (HPCL) ತನ್ನ ಗ್ರಾಹಕರಿಗೆ ಈ ಕೊಡುಗೆಯನ್ನು ಆರಂಭಿಸಿದೆ.

LPG Cylinder Booking : ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಲ್ಲಿ ನೀವು ₹10,000 ಚಿನ್ನ ಗೆಲ್ಲಬಹುದು : ಹೇಗೆ? ಇಲ್ಲಿದೆ ನೋಡಿ

ನವದೆಹಲಿ : ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ. ಸಿಲಿಂಡರ್‌ಗಳ ಬೆಲೆ ಏರಿಕೆಯ ನಡುವೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಈಗ ನೀವು ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ನಲ್ಲಿ 10001 ರೂಪಾಯಿಯ ಚಿನ್ನ ಗೆಲ್ಲಬಹುದು. ಇದು ಹಬ್ಬದ ಸೀಸನ್ ದೃಷ್ಟಿಯಿಂದ, LPG ಕಂಪನಿ ಹಿಂದುಸ್ತಾನ್ ಪೆಟ್ರೋಲಿಯಂ ಗ್ಯಾಸ್ ಲಿಮಿಟೆಡ್ (HPCL) ತನ್ನ ಗ್ರಾಹಕರಿಗೆ ಈ ಕೊಡುಗೆಯನ್ನು ಆರಂಭಿಸಿದೆ.

ಕೊಡುಗೆ ಎಷ್ಟು ಸಮಯ

ಈ ಕುರಿತು ಕಂಪನಿಯು ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ನವರಾತ್ರಿಯ ಸಂದರ್ಭದಲ್ಲಿ, ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಖರೀದಿ(LPG Cylinder Booking)ಯಲ್ಲಿ 10,000 ರೂಗಳವರೆಗೆ ಪೇಟಿಎಂ ಮೂಲಕ ಚಿನ್ನವನ್ನು ಗೆಲ್ಲುವ ಅವಕಾಶವನ್ನು ನೀಡಲಾಗುತ್ತಿದೆ ಎಂದು ಹೇಳಿದೆ. ಈ ಕೊಡುಗೆ ಅಕ್ಟೋಬರ್ 7 ರಿಂದ 16 ರವರೆಗೆ ಮಾನ್ಯವಾಗಿರುತ್ತದೆ. ನೀವು ಇದರ ಲಾಭವನ್ನು ಪಡೆಯದಿದ್ದರೆ, ಚಿಂತೆ ಮಾಡಬೇಕಾಗಿಲ್ಲ. 10 ಸಾವಿರ ರೂ. ಚಿನ್ನ ಗೆಲ್ಲಲು ನಿಮಗೆ ಇನ್ನೂ 3 ದಿನಗಳಿವೆ. ಈ ಕೊಡುಗೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : Credit Card Statement: ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಚೆಕ್ ಮಾಡುವುದು ಏಕೆ ಮುಖ್ಯ? 

ಕೊಡುಗೆ ಏನು?

ಬಳಕೆದಾರರು ಆನ್‌ಲೈನ್ ಪಾವತಿ ಸೇವೆಯಾದ Paytm ಮೂಲಕ ಗ್ಯಾಸ್ ಬುಕಿಂಗ್(Gas Booking) ಮಾಡಿದರೆ, ಅವರು 10 ಸಾವಿರ ಒಂದು ರೂಪಾಯಿವರೆಗೆ ಚಿನ್ನ ಗೆಲ್ಲುವ ಅವಕಾಶವನ್ನು ಪಡೆಯಬಹುದು ಎಂದು ಕಂಪನಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ನವರಾತ್ರಿ ಗೋಲ್ಡ್ ಆಫರ್ ಅಡಿಯಲ್ಲಿ ಪ್ರತಿದಿನ 5 ಅದೃಷ್ಟ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಇದರ ನಂತರ, ವಿಜೇತರಿಗೆ 10,001 ರೂ. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಪೇಟಿಎಂನಿಂದ ನೀಡಲಾಗುವುದು.

ಈ ರೀತಿಯ ಬುಕಿಂಗ್ ಮಾಡಿ

- ಸಿಲಿಂಡರ್ ಬುಕ್ ಮಾಡಲು, ಮೊದಲು ಪೇಟಿಎಂ(Paytm) ಆಪ್ ನಲ್ಲಿ ಬುಕ್ ಗ್ಯಾಸ್ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ.
- ಇದರ ನಂತರ ಗ್ಯಾಸ್ ಪ್ರೊವೈಡರ್ ಅನ್ನು ಆಯ್ಕೆ ಮಾಡಿ.
- ಇದರ ನಂತರ ಮೊಬೈಲ್ ಸಂಖ್ಯೆ, LPG ID ಮತ್ತು ಗ್ರಾಹಕ ಸಂಖ್ಯೆಯನ್ನು ನಮೂದಿಸಿ.
- ಈಗ ನೀವು ನಿಮ್ಮ ಪಾವತಿ ಮೋಡ್ ಅನ್ನು ಆರಿಸಬೇಕಾಗುತ್ತದೆ. ಪೇಟಿಎಂ ವಾಲೆಟ್, ಪೇಟಿಎಂ - ಯುಪಿಐ, ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್‌ನಿಂದ ನೀವು ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು.
- ನೀವು ಪಾವತಿ ಮಾಡಿದ ತಕ್ಷಣ ನಿಮ್ಮ ಗ್ಯಾಸ್ ಸಿಲಿಂಡರ್ ಬುಕ್ ಆಗುತ್ತದೆ.
- ಪೇಟಿಎಂನಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಮತ್ತು ಪಾವತಿಗೆ ಮಾತ್ರ ಈ ಕೊಡುಗೆ ಅನ್ವಯವಾಗುತ್ತದೆ.

ಇದನ್ನೂ ಓದಿ : Cooking Oil Price : ಸಾಮಾನ್ಯ ಜನತೆಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ₹15 ಇಳಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More