Home> Business
Advertisement

LIC Policy : ಕಡಿಮೆ ಹೂಡಿಕೆ ಅಧಿಕ ಲಾಭ, ಬಂದಿದೆ ಎಲ್ಐ ಸಿಯ ಹೊಸ ಪಾಲಿಸಿ ಬಿಮಾ ಜ್ಯೋತಿ

ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಎಲ್‌ಐಸಿ ನೂತನ ಪಾಲಿಸಿಯನ್ನು ಹೊರ ತಂದಿದೆ. ಬಿಮಾ ಜ್ಯೋತಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಭವಿಷ್ಯವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಬಹುದು.

LIC Policy : ಕಡಿಮೆ ಹೂಡಿಕೆ ಅಧಿಕ ಲಾಭ,  ಬಂದಿದೆ ಎಲ್ಐ ಸಿಯ ಹೊಸ ಪಾಲಿಸಿ ಬಿಮಾ ಜ್ಯೋತಿ

ನವದೆಹಲಿ : ಭಾರತೀಯ ಜೀವ ವಿಮಾ ನಿಗಮ (LIC) ಹೊಸ ಪಾಲಿಸಿಯೊಂದನ್ನು (New policy) ಬಿಡುಗಡೆ ಮಾಡಿದೆ. ಅದರ ಹೆಸರು ಬಿಮಾ ಜ್ಯೋತಿ (Bima Jyoti).  ಇದರಿಂದ ಗ್ರಾಹಕರಿಗೆ ಡಬ್ಬಲ್ ಲಾಭ ಇದೆ. ವಿಮೆಯ ಜೊತೆಗೆ ಉಳಿತಾಯದ ಆಪ್ಶನ್ (option) ಕೂಡಾ ಇಲ್ಲಿದೆ.  ಇದರಿಂದ ಹೂಡಿಕೆದಾರರಿಗೆ ಅಧಿಕ ಲಾಭವಾಗಲಿದೆ. 

ಬಿಮಾ ಜ್ಯೋತಿ ಲಾಭ ಏನು.?

ಬಿಮಾ ಜ್ಯೋತಿ (Bima Jyoti) ಮೇಲೆ ಹೂಡಿಕೆ ಮಾಡಿದರೆ ಮಚ್ಯೂರಿಟಿ ಆಗುವಾಗ ಒಂದು ದೊಡ್ಡ ರಖಂ ಸಿಗುತ್ತದೆ. ಇದಲ್ಲದೆ ಪಾಲಿಸಿದಾರ (policy holder) ಅಕಾಲಿಕ ನಿಧನರಾದ ಸಂದರ್ಭದಲ್ಲಿ ಅವರ ಆಶ್ರಿತರಿಗೆ ಹಣಕಾಸು ನೆರವು ಕೂಡಾ ಸಿಗಲಿದೆ.  ಇದರ ಜೊತೆ ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಸಾವಿರಕ್ಕೆ 50 ರೂಪಾಯಿ ಲೆಕ್ಕದಲ್ಲಿ ದುಡ್ಡು ನಿಮ್ಮ ವಿಮೆಯ (Insurance) ಮೊತ್ತಕ್ಕೆ ಸೇರ್ಪಡೆಯಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು. ಆದರೆ, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. 

ಇದನ್ನೂ ಓದಿ : Privatisation News: ಖಾಸಗೀಕರಣದತ್ತ ಈ ಸರ್ಕಾರಿ ವಿಮಾ ಕಂಪನಿ!

ಯಾರೆಲ್ಲಾ ಈ ವಿಮೆ ಮಾಡಿಸಬಹುದು
15 ರಿಂದ 20 ವರ್ಷಕ್ಕೆ ಈ ಪಾಲಿಸಿ (Policy) ಮಾಡಿಸಬಹುದು. 90 ದಿನಗಳ ಮಗುವಿನಿಂದ ಹಿಡಿದು 60 ವರ್ಷದವರೆಗಿನ ವಯಸ್ಸಿನವರು ಈ ಪಾಲಿಸಿ ಪಡೆಯಬಹುದು. ಇದರಿಂದ ಪಾಲಿಸಿದಾರರಿಗೆ (Policy holder) ವಿಮೆ ಸಿಗಲಿದೆ. ಜೊತೆಗೆ ಉಳಿತಾಯದ ಮಾರ್ಗ ದೊರೆಯಲಿದೆ. ಭವಿಷ್ಯ ಕೂಡಾ ಸೇಫ್ ಆಗಿರುತ್ತದೆ. 

ಬಿಮಾ ಜ್ಯೋತಿಯಿಂದ ಸಾಕಷ್ಟು ಲಾಭಗಳಿವೆ. ನಿಮ್ಮ ಪ್ರಿಮಿಯಂ (premium) ದುಡ್ಡಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಭವಿಷ್ಯ ಕೂಡಾ ಸೇಫ್ ಇರುತ್ತದೆ. ನಿಮಗೆ ಗೊತ್ತಿರಲಿ ಶೀಘ್ರದಲ್ಲಿ ಎಲ್ಐಸಿ ಐಪಿಒ (LIC IPO) ಕೂಡಾ ಹೊರತರುತ್ತಿದೆ.

ಇದನ್ನೂ ಓದಿ : ಪಿಎಫ್ ಖಾತೆದಾರರೇ EPFOದ ಹೊಸ ಮಾರ್ಗಸೂಚಿಗಳನ್ನು ತಪ್ಪದೇ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More