Home> Business
Advertisement

LIC Kanyadan Policy : LIC ಈ ಹೊಸ ಯೋಜನೆಯಲ್ಲಿ ಕೇವಲ ₹121 ಪಾವತಿಸಿ : ಮಗಳ ಮದುವೆ ವೇಳೆಗೆ ಸಿಗಲಿದೆ 27 ಲಕ್ಷ ರೂ.

ಈ ಪಾಲಿಸಿಯಲ್ಲಿ, ನೀವು ದಿನಕ್ಕೆ 121 ರೂ. ಪ್ರೀಮಿಯಂ ಅನ್ನು ಪಾವತಿಸಬೇಕು ಅಂದರೆ ತಿಂಗಳಿಗೆ ಸುಮಾರು 3600 ರೂ.

LIC Kanyadan Policy : LIC ಈ ಹೊಸ ಯೋಜನೆಯಲ್ಲಿ ಕೇವಲ ₹121 ಪಾವತಿಸಿ : ಮಗಳ ಮದುವೆ ವೇಳೆಗೆ ಸಿಗಲಿದೆ 27 ಲಕ್ಷ ರೂ.

ನವದೆಹಲಿ : ಹೆಣ್ಣುಮಕ್ಕಳಿರುವ ತಂದೆ-ತಾಯಿಗೊಂದು ಸಿಹಿ ಸುದ್ದಿ ಇದೆ. ಈಗ ನೀವು ಯಾವುದೇ ಒತ್ತಡವಿಲ್ಲದೆ ನಿಮ್ಮ ಮಗಳನ್ನು ಆಡಂಬರದಿಂದ ಮದುವೆ ಮಾಡಿಕೊಡಬಹದು. ಅದಕ್ಕಾಗಿ  ಎಲ್ಐಸಿ ಹೊಸ ಯೋಜನೆಯೊಂದನ್ನ ಜಾರಿಗೆ ತಂದಿದೆ . ಈ ಯೋಜನೆಯ ಹೆಸರು 'ಎಲ್ಐಸಿ ಕನ್ಯಾದನ ಪಾಲಿಸಿ'(LIC Kanyadan Policy) ಆಗಿದೆ. ನೀವು ಮಗಳ ಮದುವೆಯ ಚಿಂತೆಯಿಂದ ಮುಕ್ತರಾಗಬಹುದು. ಈ ಪಾಲಿಸಿಯು ವಿಶೇಷ ಹೆಣ್ಣುಮಕ್ಕಳ ಮದುವೆಗೆ ಮಾತ್ರವೆಂದು ಜಾರಿಗೆ ತರಲಾಗಿದೆ. ಆದ್ದರಿಂದ ಈ ಪಾಲಿಸಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ ಬನ್ನಿ..

ಈ ಪಾಲಿಸಿಗೆ ಅಗತ್ಯವಾದ ದಾಖಲೆಗಳು : 

ಈ ಪಾಲಿಸಿಗೆ ಫಾರ್ಮ್ ಅನ್ನು ಭರ್ತಿ ಮಾಡಲು, ನಿಮ್ಮ ಹತ್ತಿರದ ಎಲ್ಐಸಿ ಕಚೇರಿಗೆ(LIC Office) ಭೇಟಿ ನೀಡಿ. ನಂತರ ಈ ಪಾಲಿಸಿಯ ಫಾರ್ಮ್ ಕೇಳಿ ಪಡೆದುಕೊಳ್ಳಿ, ನಂತರ, ನಿಮ್ಮ ಆಧಾರ್ ಕಾರ್ಡ್, ಆದಾಯ ಪುರಾವೆ, ಗುರುತಿನ ಚೀಟಿ, ವಿಳಾಸ ಪುರಾವೆ ಮತ್ತು ಪಾಸ್‌ಪೋರ್ಟ್ ಫೋಟೋ ಅಗತ್ಯವಿದೆ. ಇದರ ಹೊರತಾಗಿ, ಸಹಿ ಮಾಡಿದ ಅರ್ಜಿ ನಮೂನೆ ಮತ್ತು ಜನನ ಪ್ರಮಾಣಪತ್ರದೊಂದಿಗೆ ಮೊದಲ ಪ್ರೀಮಿಯಂಗೆ ಚೆಕ್ ಅಥವಾ ನಗದು ಸಹ ನೀಡಬೇಕಾಗುತ್ತದೆ.

 ಇದನ್ನೂ ಓದಿ : PF ಖಾತೆದಾರರಿಗೆ ಸಿಹಿ ಸುದ್ದಿ : ಇಂದು ಖಾತೆಗೆ ಜಮಾ ಆಗಬಹುದು ಶೇ 8.5 ಬಡ್ಡಿ ಹಣ!

ಪಾಲಿಸಿಯನ್ನು ಯಾರು ತೆಗೆದುಕೊಳ್ಳಬಹುದು?

ಈ ಪಾಲಿಸಿ(LIC Kanyadan Policy)ಯನ್ನು 25 ವರ್ಷಗಳ ಬದಲು 13 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಮದುವೆಯ ಹೊರತಾಗಿ, ಈ ಹಣವನ್ನು ಮಗಳ ಶಿಕ್ಷಣಕ್ಕೂ ಬಳಸಬಹುದು. ಒಟ್ಟಾರೆಯಾಗಿ, ಈ ಪಾಲಿಸಿಯಿಂದ ನಿಮ್ಮ ಮಗಳ ಶಿಕ್ಷಣ ಮತ್ತು ಆಕೆಯ ಮದುವೆಯ ಬಗ್ಗೆ ಚಿಂತಿಸುವುದರಿಂದ ನೀವು ಮುಕ್ತರಾಗಬಹುದು.

ಪಾಲಿಸಿ ವ್ಯಾಲಿಡಿಟಿ :

ನಿಮ್ಮ ಮಗಳಿಗೆ ಪಾಲಿಸಿ ತೆಗೆದುಕೊಳ್ಳಲು ನೀವು ಬಯಸಿದರೆ, ನಿಮ್ಮ ವಯಸ್ಸು(Age) ಕನಿಷ್ಠ 30 ವರ್ಷಗಳು, ಮಗಳ ವಯಸ್ಸು ಕನಿಷ್ಠ 1 ವರ್ಷವಾಗಿರಬೇಕು. ಈ ಪಾಲಿಸಿಯು 25 ವರ್ಷಗಳದ್ದಾಗಿದ್ದರೂ, ಪ್ರೀಮಿಯಂ ಅನ್ನು 22 ವರ್ಷಗಳವರೆಗೆ ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 3 ವರ್ಷಗಳವರೆಗೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಆದರೆ ಗಮನಿಸಬೇಕಾದ ಸಂಗತಿಯೆಂದರೆ ಮಗಳ ವಯಸ್ಸಿನ ಪ್ರಕಾರ, ಈ ಪಾಲಿಸಿಯ ಅವಧಿಯನ್ನು ಸಹ ಕಡಿಮೆ ಮಾಡಬಹುದು.

ಸಾವಿನ ಪ್ರಯೋಜನವನ್ನು ಸಹ ಒಳಗೊಂಡಿದೆ :

ಪಾಲಿಸಿದಾರನು ಪಾಲಿಸಿಯನ್ನು ತೆಗೆದುಕೊಂಡ ನಂತರ ಮರಣ ಹೊಂದಿದರೆ, ಆಗ ಆತನ ಕುಟುಂಬವು ಪ್ರೀಮಿಯಂ(Premium) ಪಾವತಿಸಬೇಕಾಗಿಲ್ಲ. ಸಾವು ಆಕಸ್ಮಿಕವಾಗಿದ್ದರೆ ಕುಟುಂಬವು ಒಟ್ಟು ಮೊತ್ತವಾಗಿ 10 ಲಕ್ಷ ರೂ. ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದಲ್ಲಿ, 5 ಲಕ್ಷ ರೂ. ಇದರೊಂದಿಗೆ, ಪಾಲಿಸಿ ಅವಧಿ ಪೂರ್ಣ ಕುಟುಂಬವು ಪ್ರತಿ ವರ್ಷ 50,000 ರೂ. ಅಂದರೆ, ಈ ಯೋಜನೆಯಲ್ಲಿ ಸಾವಿನ ಪ್ರಯೋಜನವನ್ನು ಕೂಡ ಸೇರಿಸಲಾಗಿದೆ. 25 ವರ್ಷಗಳ ನಂತರ, ನಾಮಿನಿಗೆ 27 ಲಕ್ಷ ರೂ. ಸಿಗಲಿದೆ.

 ಇದನ್ನೂ ಓದಿ : ನಾಳೆಯಿಂದ ಬದಲಾಗತ್ತಿವೆ ATM, ಸಂಬಳ, ಪಿಂಚಣಿ, EMI ಗೆ ಸಂಬಂಧಿಸಿದ ನಿಯಮಗಳು!

ಈ ಪಾಲಿಸಿಯ ತಿಂಗಳ ಪ್ರೀಮಿಯಂ ಎಷ್ಟು?

ಈ ಪಾಲಿಸಿಯಲ್ಲಿ, ನೀವು ದಿನಕ್ಕೆ 121 ರೂ. ಪ್ರೀಮಿಯಂ ಅನ್ನು ಪಾವತಿಸಬೇಕು ಅಂದರೆ ತಿಂಗಳಿಗೆ(Monthly) ಸುಮಾರು 3600 ರೂ. ನಿಮಗೆ ಬೇಕಾದರೆ, ನೀವು ಇದಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಪಾಲಿಸಿಯನ್ನು ಸಹ ತೆಗೆದುಕೊಳ್ಳಬಹುದು. ಆದರೆ ಇದರಿಂದ ಪಡೆದ ಮೊತ್ತವೂ ಕಡಿಮೆಯಾಗುತ್ತದೆ. ಪ್ರತಿದಿನ 121 ರೂ.ಗಳನ್ನು ಹೂಡಿಕೆ ಮಾಡುವ ಮೂಲಕ 25 ವರ್ಷಗಳ ನಂತರ ನೀವು 27 ಲಕ್ಷ ರೂ. ಪಡೆಯಬಹದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More