Home> Business
Advertisement

LIC ಪಾಲಿಸಿದಾರರಿಗೆ ಬಿಗ್ ನ್ಯೂಸ್ : ನಿಮಗೆ ‘ಲಾಭ’ ನೀಡಲು ಸರ್ಕಾರ ಮಾಡಿದೆ ಬಿಗ್ ಪ್ಲಾನ್ !

ಫೆಬ್ರವರಿ 1, 2022 ರಂದು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್‌ಐಸಿಯ ಐಪಿಒ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದರು. ಅದರ ನಂತರ ಇದು ವೇಗಗೊಂಡಿದೆ.

LIC ಪಾಲಿಸಿದಾರರಿಗೆ ಬಿಗ್ ನ್ಯೂಸ್ : ನಿಮಗೆ ‘ಲಾಭ’ ನೀಡಲು ಸರ್ಕಾರ ಮಾಡಿದೆ ಬಿಗ್ ಪ್ಲಾನ್ !

ನವದೆಹಲಿ : ನೀವು LIC ಯ ಯಾವುದೇ ಪಾಲಿಸಿಯನ್ನು ಹೊಂದಿದ್ದರೆ ಈ ಸುದ್ದಿ ವಿಶೇಷವಾಗಿ ನಿಮಗಾಗಿ ಆಗಿದೆ. ಎಲ್‌ಐಸಿ ಪಾಲಿಸಿದಾರರಿಗಾಗಿ ಸರ್ಕಾರ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ. ಈ ಯೋಜನೆಯು LIC ಯ IPO ಗೆ ಸಂಬಂಧಿಸಿದೆ. ಫೆಬ್ರವರಿ 1, 2022 ರಂದು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್‌ಐಸಿಯ ಐಪಿಒ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದರು. ಅದರ ನಂತರ ಇದು ವೇಗಗೊಂಡಿದೆ.

ಮಾರ್ಚ್ ಅಂತ್ಯದ ವೇಳೆಗೆ IPO ಬರಲಿದೆ

ಮಾರುಕಟ್ಟೆ ನಿಯಂತ್ರಕ ಸೆಬಿಗೆ ಎಲ್‌ಐಸಿ(LIC)ಯ ಐಪಿಒಗೆ ಕರಡು ದಾಖಲೆಯನ್ನು ಸರ್ಕಾರ ಭಾನುವಾರ ಸಲ್ಲಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಐಪಿಒ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಕರಡು ಪ್ರಕಾರ, ಒಂದು ಭಾಗವನ್ನು ಪಾಲಿಸಿದಾರರಿಗೆ ಮೀಸಲು ಇಡಲಾಗಿದೆ. ಕರಡು ಪ್ರಕಾರ, ಎಲ್‌ಐಸಿಯ ಒಟ್ಟು 632 ಕೋಟಿ ಷೇರುಗಳಲ್ಲಿ ಸರ್ಕಾರವು ಶೇ 5ರಷ್ಟು ಷೇರುಗಳನ್ನು ಅಂದರೆ 31.6 ಕೋಟಿ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಲಿದೆ.

ಇದನ್ನೂ ಓದಿ : LIC ಈ ಯೋಜನೆಯಲ್ಲಿ ₹262 ಹೂಡಿಕೆ ಮಾಡಿ ₹20 ಲಕ್ಷ ಲಾಭ ಪಡೆಯಿರಿ!

ಶೇ.5 ರಷ್ಟು ಷೇರುಗಳನ್ನು ಈಕ್ವಿಟಿ ಮೂಲಕ ಮಾರಾಟ

ಈ ಮೊದಲು ಸರ್ಕಾರವು ಒಟ್ಟು ಷೇರುಗಳ 10 ಪ್ರತಿಶತವನ್ನು ಈಕ್ವಿಟಿ ಮೂಲಕ ಮಾರಾಟ ಮಾಡುತ್ತದೆ ಎಂದು ಊಹಿಸಲಾಗಿತ್ತು. ಆದರೆ ಕರಡು ಪ್ರತಿಯ ನಂತರ ಪರಿಸ್ಥಿತಿ ತಿಳಿಯಾಗಿದೆ. ಕರಡು ಪ್ರಕಾರ, 31.6 ಕೋಟಿ (ಶೇ.5) ಷೇರುಗಳಲ್ಲಿ, 10 ಪ್ರತಿಶತ ಪಾಲನ್ನು ಎಲ್ಐಸಿ ಪಾಲಿಸಿದಾರರಿಗೆ ಇಡಲು ನಿರ್ಧರಿಸಲಾಗಿದೆ. ಅಂದರೆ, ಇದರ ಪ್ರಕಾರ 3.16 ಕೋಟಿ ಷೇರುಗಳನ್ನು ಪಾಲಿಸಿದಾರರಿಗೆ ಕಾಯ್ದಿರಿಸಲಾಗಿದೆ.

ಈ ಹಿಂದೆ ಮೀಸಲಾತಿ ಬಗ್ಗೆ ಚರ್ಚೆ

ಇತ್ತೀಚೆಗೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ ಕೂಡ ಎಲ್ಐಸಿ ಪಾಲಿಸಿದಾರರು ಐಪಿಒದಲ್ಲಿ ಮೀಸಲಾತಿ ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

IPO ನಲ್ಲಿ ಮೀಸಲಾತಿಯ ಅರ್ಥ

ಎಲ್ಐಸಿಯ ಐಪಿಒ(LIC IPO)ದಲ್ಲಿ ಮೀಸಲಾತಿ ಪಡೆಯುವುದು ಎಂದರೆ ಪಾಲಿಸಿದಾರರು ಐಪಿಒದಲ್ಲಿ ಷೇರುಗಳನ್ನು ಪಡೆಯುವ ಹೆಚ್ಚಿನ ಭರವಸೆಯನ್ನು ಹೊಂದಿರುತ್ತಾರೆ. ಅಂದರೆ, ಈಗಾಗಲೇ ಎಲ್‌ಐಸಿಯ ಪಾಲಿಸಿಯನ್ನು ಹೊಂದಿರುವವರು, ಈ ಮೀಸಲಾತಿ ಅಡಿಯಲ್ಲಿ ಐಪಿಒ ಲಾಟ್‌ನಲ್ಲಿ ಕ್ಲೈಮ್ ಮಾಡಲು ಅರ್ಹರಾಗಿರುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More