Home> Business
Advertisement

Jio Recharge: ಒಂದೇ ಒಂದು ರೀಚಾರ್ಜ್‍ಗೆ 388 ದಿನಗಳ ವ್ಯಾಲಿಡಿಟಿ, ಪ್ರತಿದಿನ Unlimited ಕರೆ ಆನಂದಿಸಿ

Jio Recharge Plan: ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಪ್ಲಾನ್‍ನ ವ್ಯಾಲಿಡಿಟಿ ಮತ್ತು ಕೊಡುಗೆಗಳು ಸಹ ಗ್ರಾಹಕರಿಗೆ ಇಷ್ಟವಾಗಿದೆ. ವಿಶೇಷವೆಂದರೆ ಈ ಯೋಜನೆ ನಿಮ್ಮ ಬಜೆಟ್‍ಗೆ ತಕ್ಕ ಹಾಗಿದೆ.   

Jio Recharge: ಒಂದೇ ಒಂದು ರೀಚಾರ್ಜ್‍ಗೆ 388 ದಿನಗಳ ವ್ಯಾಲಿಡಿಟಿ, ಪ್ರತಿದಿನ Unlimited ಕರೆ ಆನಂದಿಸಿ

ನವದೆಹಲಿ: Jioನ ರೀಚಾರ್ಜ್ ಯೋಜನೆಗಳು ಭಾರತದಾದ್ಯಂತ ಜನಪ್ರಿಯವಾಗಿವೆ. ಕೈಗೆಟುಕುವ ಬೆಲೆ ಮತ್ತು ಅತ್ಯುತ್ತಮ ಕೊಡುಗೆಗಳೇ ಇದಕ್ಕೆ ಕಾರಣ. ಈ ಯೋಜನೆಗಳು ಜನರಿಗೆ ತುಂಬಾ ಇಷ್ಟವಾಗಿದ್ದು, ಅವರ ಜೇಬಿಗೆ ಹೊರೆಯಾಗುವುದಿಲ್ಲ. ನೀವು ಕೂಡ ಇದೇ ರೀತಿಯ ಪ್ರಿಪೇಯ್ಡ್ ಪ್ಲಾನ್‌ಗಾಗಿ ಹುಡುಕುತ್ತಿದ್ದರೆ ಒಂದು ಉತ್ತಮ ಯೋಜನೆ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಲ್ಲಿ ನೀವು ಗರಿಷ್ಠ ವ್ಯಾಲಿಡಿಟಿ ಜೊತೆಗೆ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ.

ಸಾಮಾನ್ಯವಾಗಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ದೀರ್ಘಾವಧಿಯ ವ್ಯಾಲಿಡಿಟಿ ನೀಡುವುದಿಲ್ಲ. ಆದರೆ ಈ ಯೋಜನೆಯ ವ್ಯಾಲಿಡಿಟಿ ಬಗ್ಗೆ ತಿಳಿದರೆ ನೀವು ಖಂಡಿತ ಆಶ್ಚರ್ಯ ವ್ಯಕ್ತಪಡಿಸುತ್ತೀರಿ. ನೀವು ಈ ಆಫರ್‌ ಬಗ್ಗೆ ತಿಳಿದರೆ ಇನ್ನಷ್ಟು ಸಂತೋಷಪಡುತ್ತೀರಿ. ಈ ರೀಚಾರ್ಜ್ ಯೋಜನೆಯ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಇದನ್ನೂ ಓದಿ: 7th Pay Commission : ಕೇಂದ್ರ ನೌಕರರ ಬಾಕಿ ಡಿಎ ಬಗ್ಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್..!

388 ದಿನಗಳ ವ್ಯಾಲಿಡಿಟಿ

ನಾವು ಹೇಳುತ್ತಿರುವುದು 2,999 ರೂ. ರೀಚಾರ್ಜ್ ಪ್ಲಾನ್ ಆಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ದೀರ್ಘ ವ್ಯಾಲಿಡಿಟಿ ನೀಡಲಾಗುತ್ತದೆ. ಇದರಿಂದ ನೀವು ಪ್ರತಿ ತಿಂಗಳು ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ ನಿಮಗೆ 912GB ಡೇಟಾವನ್ನು ನೀಡಲಾಗುತ್ತದೆ ಇಷ್ಟು ಮಾತ್ರವಲ್ಲದೆ ಈ ಪ್ಲಾನ್ ನಲ್ಲಿ ಗ್ರಾಹಕರು ಹೈ ಸ್ಪೀಡ್ ಇಂಟರ್ ನೆಟ್ ಪಡೆಯುತ್ತಾರೆ, ಇದು ವಿಡಿಯೋ ಡೌನ್ ಲೋಡ್ ಮತ್ತು ವಿಡಿಯೋ ಸ್ಟ್ರೀಮಿಂಗ್‍ಗೆ ತುಂಬಾ ಉಪಯುಕ್ತವಾಗಿದೆ. ದಿನನಿತ್ಯದ ಆಧಾರದ ಮೇಲೆ ನೋಡಿದ್ರೆ ಈ ಯೋಜನೆಯಲ್ಲಿ 2.5 GB ಡೇಟಾ ನೀಡಲಾಗುತ್ತದೆ. ಗ್ರಾಹಕರು ತಮ್ಮ ಇಂಟರ್ನೆಟ್ ಅಗತ್ಯಗಳಿಗಾಗಿ ಇದನ್ನು ಬಳಸಬಹುದು. ಅಲ್ಲದೆ ಗ್ರಾಹಕರಿಗೆ ಪ್ರತಿದಿನ 100 SMS ಸಹ ನೀಡಲಾಗುತ್ತದೆ.

23 ದಿನಗಳ ಹೆಚ್ಚುವರಿ ವ್ಯಾಲಿಡಿಟಿ

ಈ ಯೋಜನೆಯ ಪ್ರಯೋಜನಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಯೋಜನೆಯಲ್ಲಿ ಮೊದು 365 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿತ್ತು. ಕಂಪನಿಯು 23 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸಹ ನೀಡುತ್ತಿದೆ. ಹೀಗಾಗಿ ನೀವು ಈ ರೀಚಾರ್ಜ್ ಪ್ಲಾನ್‍ನಲ್ಲಿ ಒಟ್ಟು 388 ದಿನಗಳ ವ್ಯಾಲಿಡಿಟಿ ಪಡೆಯುತ್ತೀರಿ. ಅಲ್ಲದೆ 87 GB ಹೆಚ್ಚುವರಿ ಡೇಟಾವನ್ನು  ಕಂಪನಿ ನೀಡುತ್ತಿದೆ. ಹಲವಾರು ಉತ್ತಮ ಪ್ರಯೋಜನಗಳಿಂದ ಈ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ ಅಂತಾನೇ ಹೇಳಬಹುದು.

ಇದನ್ನೂ ಓದಿ: ಆಧಾರ್ ಕಾರ್ಡ್ ದುರ್ಬಳಕೆ? SMS ಮೂಲಕ ನಿಮ್ಮ ಕಾರ್ಡ್ ಲಾಕ್ ಮಾಡಿ, ಹೇಗೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More