Home> Business
Advertisement

Jio Recharge Plan: ಕಡಿಮೆ ಮೊತ್ತದ ಜಿಯೋ ಅದ್ಭುತ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಿರಿ

Jio Prepaid Recharge Plans: ಈ ರಿಚಾರ್ಜ್ ಪ್ಲಾನ್‍ನ ಬೆಲೆ 719 ರೂ. ಆಗಿದ್ದು, ಇದರಲ್ಲಿ 84 ದಿನಗಳ ಮಾನ್ಯತೆ ಲಭ್ಯವಿದೆ. ಈ ಯೋಜನೆಯನ್ನು ಬಳಸಿಕೊಂಡು ಜಿಯೋ ಗ್ರಾಹಕರು ತಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಈ ಯೋಜನೆ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

Jio Recharge Plan: ಕಡಿಮೆ ಮೊತ್ತದ ಜಿಯೋ ಅದ್ಭುತ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಿರಿ

ನವದೆಹಲಿ: ಜಿಯೋ ತನ್ನ ಗ್ರಾಹಕರಿಗಾಗಿ ಉತ್ತಮ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮಾಸಿಕ ವೆಚ್ಚವು ಕೇವಲ 240 ರೂ. ಇದೆ. ಇದು ತುಂಬಾ ಅನುಕೂಲಕರವಾಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಜಿಯೋ ಬಳಕೆದಾರರು ಅನಿಯಮಿತ ಡೇಟಾ ಮತ್ತು ಕರೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ರಿಚಾರ್ಜ್ ಪ್ಲಾನ್‍ನ ಬೆಲೆ 719 ರೂ. ಆಗಿದ್ದು, ಇದರಲ್ಲಿ 84 ದಿನಗಳ ವ್ಯಾಲಿಟಿಡಿ ಲಭ್ಯವಿದೆ. ಈ ಯೋಜನೆ ಬಳಸಿಕೊಂಡು ಜಿಯೋ ಗ್ರಾಹಕರು ತಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಈ ಯೋಜನೆ ಬಗ್ಗೆ ಮತ್ತಷ್ಟು ತಿಳಿಯಿರಿ.

ಜಿಯೋ 719 ರೂ. ಯೋಜನೆ ವಿವರ

ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಒದಗಿಸಲಾಗಿದೆ, ಅಂದರೆ ಒಟ್ಟು 168 GB ನೀಡಲಾಗುತ್ತದೆ. ಬಳಕೆದಾರರು ಅನಿಯಮಿತ 5G ಡೇಟಾ ಬಳಸಬಹುದು. 84 ದಿನಗಳವರೆಗೆ ಮಾನ್ಯವಾಗಿರುವ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಸಹ ನೀಡಲಾಗುವುದು.

ಇದನ್ನೂ ಓದಿ: Govt Scheme: ಕೇವಲ ರೂ.456 ಕ್ಕೆ ಸಿಗಲಿದೆ 4 ಲಕ್ಷ ರೂ.ಗಳ ಲಾಭ, ಸರ್ಕಾರಿ ಬ್ಯಾಂಕುಗಳಿಗೆ ಆದೇಶ ನೀಡಿದ ಕೇಂದ್ರ ಸರ್ಕಾರ!

ಇದರೊಂದಿಗೆ ಬಳಕೆದಾರರಿಗೆ ಪ್ರತಿದಿನ 100 ಎಸ್‌ಎಂಎಸ್ ಬಳಸುವ ಸೌಲಭ್ಯವನ್ನು ಸಹ ನೀಡಲಾಗುವುದು. ಇದಲ್ಲದೆ ಈ ಯೋಜನೆಯಡಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆ ಸಹ ಒದಗಿಸಲಾಗುತ್ತದೆ. ಈ ಯೋಜನೆಯ ಮಾಸಿಕ ವೆಚ್ಚ 240 ರೂ. ಆಗುತ್ತದೆ.

ಜಿಯೋನ 299 ರೂ. ಪ್ಲಾನ್ ವಿವರ

ಜಿಯೋನ 299 ರೂ. ಪ್ಲಾನ್‌ನಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಒಟ್ಟು 56 GB ಡೇಟಾ ನೀಡಲಾಗುತ್ತದೆ. ಇದರಲ್ಲಿ 2 GB ಡೇಟಾವನ್ನು ಪ್ರತಿದಿನ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯ  ಒದಗಿಸಲಾಗಿದೆ ಮತ್ತು ಇದರೊಂದಿಗೆ ಪ್ರತಿದಿನ 100 SMS ಸೌಲಭ್ಯವೂ ಇದೆ. ಈ ಯೋಜನೆಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನ ಚಂದಾದಾರಿಕೆಯೂ ಉಚಿತವಾಗಿ ಲಭ್ಯವಿದೆ.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನದಲ್ಲಿ 8000 ರೂಪಾಯಿ ಹೆಚ್ಚಳ ! ಈಗ ಕೈ ಸೇರುವ ಮೊತ್ತ ಎಷ್ಟು ಇಲ್ಲಿದೆ ಲೆಕ್ಕಾಚಾರ

ನೀವು ಹೊಸ ಯೋಜನೆ ಹುಡುಕುತ್ತಿದ್ದರೆ ಈ 719 ರೂ. ರಿಚಾರ್ಜ್ ಪ್ಲಾನ್ ಪ್ರಯೋಜನಕಾರಿಯಾಗಿದೆ. ಏಕೆಂದರೆ 719 ರೂ. ಪ್ಲಾನ್‌ನ ಮಾಸಿಕ ವೆಚ್ಚ 240 ರೂ. ಆಗುತ್ತದೆ. ಹೀಗಾಗಿ ಕಡಿಮೆ ಮೊತ್ತಕ್ಕೆ ನಿಮಗೆ ಅನೇಕ ಸೌಲಭ್ಯಗಳು ದೊರೆಯುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More